Bank ಕೆಲಸ ಇದ್ರೆ ಬೇಗ ಮುಗಿಸ್ಕೊಳ್ಳಿ; ಮಾರ್ಚ್​ನಲ್ಲಿ ಬ್ಯಾಂಕ್​ಗಳಿಗೆ 14 ದಿನ ರಜೆ!: ಕಾರಣ ಹೀಗಿದೆ

dk - 2025-02-27T140808.741
Published on

ಬ್ಯಾಂಕ್​ಗಳಲ್ಲಿ ಏನಾದರೂ ತುರ್ತು ಕೆಲಸ ಇದ್ದರೆ ಈಗಲೇ ಕೆಲಸ ಮಾಡಿಕೊಳ್ಳಿ. ಇಲ್ಲವಾದರೆ ಮುಂದಿನ ಮಾರ್ಚ್​ ತಿಂಗಳ ಅವಧಿಯಲ್ಲಿ 14 ದಿನಗಳ ಕಾಲ ಬ್ಯಾಂಕ್​ಗೆ ರಜೆ ಇರಲಿದೆ.

ಹೌದು, 2025ರ ಈ ಬಾರಿಯ ಮಾರ್ಚ್​ನಲ್ಲಿ 5 ಭಾನುವಾರಗಳು ಇರಲಿದ್ದು, ಎರಡು ನಾಲ್ಕನೇ ಶನಿವಾರ ಬಂದಿವೆ. ಅಲ್ಲದೆ, ವಿವಿಧ ಹಬ್ಬಗಳ ಹಿನ್ನೆಲೆ ದೇಶಾದ್ಯಂತ 7 ದಿನ ರಜೆ ಬಂದಿದೆ. ಹೀಗಾಗಿ, ತಿಂಗಳಲ್ಲಿ ಒಟ್ಟು 14 ರಜೆಗಳು ಬಂದ ಹಿನ್ನೆಲೆ ಬ್ಯಾಂಕ್​ ಬಂದ್ ಎಂಬ ಸನ್ನಿವೇಶ ಒದಗಿದೆ.

ಅಂತಹ ಪರಿಸ್ಥಿತಿಯಲ್ಲಿ, ಮುಂದಿನ ತಿಂಗಳು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವಿದ್ದರೆ, ಈ ರಜಾದಿನಗಳನ್ನು ಹೊರತುಪಡಿಸಿ ನೀವು ಬ್ಯಾಂಕಿಗೆ ಹೋಗಬಹುದು. ಮಾರ್ಚ್ ತಿಂಗಳಲ್ಲಿ ದೇಶದ ರಾಜ್ಯ ಮತ್ತು ನಗರದಲ್ಲಿ ಬ್ಯಾಂಕುಗಳು ಯಾವಾಗ ಮುಚ್ಚಲ್ಪಡುತ್ತವೆ ಎಂಬುದನ್ನು ಇಲ್ಲಿ ನೋಡಿ..

ಮಾರ್ಚ್ 2: ಭಾನುವಾರ

ಮಾರ್ಚ್ 7: ಶುಕ್ರವಾರ ಚಾಪ್ಚರ್ ಕುಟ್ ಹಬ್ಬ(ಮಿಜೋರಂನ ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ)

ಮಾರ್ಚ್ 9: ಎರಡನೇ ಶನಿವಾರ

ಮಾರ್ಚ್ 13: ಗುರುವಾರ (ಹೋಳಿಕಾ ದಹನ್ ಆಚರಣೆ, ಡೆಹ್ರಾಡೂನ್)

ಮಾರ್ಚ್ 14: ಶುಕ್ರವಾರ (ಹೋಳಿ ಹಬ್ಬ)

ಮಾರ್ಚ್ 15: ಶನಿವಾರ (ಯಾವೋಸಿಂಗ್ ದಿನ ಆಚರಣೆ, ಭುವನೇಶ್ವರ)

ಮಾರ್ಚ್ 16: ಭಾನುವಾರ

ಮಾರ್ಚ್ 22: ನಾಲ್ಕನೇ ಶನಿವಾರ

ಮಾರ್ಚ್ 23: ಭಾನುವಾರ

ಮಾರ್ಚ್ 27: ಶಬ್-ಎ-ಖಾದ್ರ್ ಎನ್ನುವ ಆಚರಣೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.

ಮಾರ್ಚ್ 28: ಶುಕ್ರವಾರ (ಜಮಾತ್-ಉಲ್-ವಿದಾ ಆಚರಣೆ, ಜಮ್ಮು ಮತ್ತು ಶ್ರೀನಗರ)

ಮಾರ್ಚ್ 30: ಭಾನುವಾರ

ಮಾರ್ಚ್ 31: ಆರ್‌ಬಿಐ ಮೊದಲು ಮಾರ್ಚ್‌ 31ಕ್ಕೂ ರಜೆ ಘೋಷಿಸಿದೆ. ಅಲ್ಲದೆ, ವಿವಿಧ ಲೋಕಲ್​ ರಜೆಗಳು ಕೂಡ ಇವೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net