

ಬೆಂಗಳೂರು: ಜನರು ತಾಮ್ರದ ಪಾತ್ರೆಗಳನ್ನು ಖರೀದಿಸಲು ಇಷ್ಟಪಟ್ಟರೂ ಸಹಿತ ಅವುಗಳನ್ನು ನಿರ್ವಹಣೆ ಮಾಡುವುದು ಸವಾಲಿನ ಸಂಗತಿಯಾಗಿದೆ. ಸತತ ಬಳಕೆಯ ನಂತರ ಇವುಗಳ ಹೊಳಪು ಕಣ್ಮರೆಯಾಗುತ್ತದೆ. ಕೆಲ ಪ್ರಕ್ರಿಯೆಯಿಂದಾಗಿ ತಾಮ್ರವು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ.
ಜತೆಗೆ ಸಾಮಾನ್ಯವಾಗಿ ತಾಮ್ರದ ಮೇಲ್ಮೈಯಲ್ಲಿ ಹಸಿರು ಪದರವನ್ನು ಗಮನಿಸುತ್ತೇವೆ. ಇದನ್ನು ವರ್ಡಿಗ್ರಿಸ್ ಎಂದು ಕರೆಯಲಾಗುತ್ತದೆ. ಇದನ್ನು ಕೇವಲ ನೀರು ಅಥವಾ ಸಾಬೂನಿನಿಂದ ತೊಳೆದರೆ ಸುಲಭವಾಗಿ ಕಲೆ ಹೋಗುವುದಿಲ್ಲ. ನಿಮ್ಮ ತಾಮ್ರದ ಪಾತ್ರೆಗಳ ಹೊಳಪನ್ನು ಕಾಪಾಡಿಕೊಳ್ಳಲು ಕೆಲವು ಸುಲಭವಾದ ಮಾರ್ಗಗಳು ಇಲ್ಲಿವೆ.
ಇದನ್ನೂ ಓದಿ: ಕೇಂದ್ರದಿಂದ ಸೂರ್ಯಕಾಂತಿ, ಸೋಯಾಬೀನ್ ಎಣ್ಣೆಯ ಆಮದು ಸುಂಕ ಕಡಿತ: ಅಡುಗೆ ಎಣ್ಣೆ ಬೆಲೆ ಇಳಿಕೆ ಸಾಧ್ಯತೆ
ನಿಂಬೆ ಮತ್ತು ಉಪ್ಪು:
ಅರ್ಧ ನಿಂಬೆಹಣ್ಣಿನ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಮತ್ತು ಅದನ್ನು ತಾಮ್ರದ ಪಾತ್ರೆಗಳ ಮೇಲೆ ಸ್ಕ್ರಬ್ ಮಾಡಬಹುದು ಅಥವಾ ಉಪ್ಪು ಮತ್ತು ನಿಂಬೆ ರಸದಿಂದ ಮಾಡಿದ ಪೇಸ್ಟ್ ಲೇಪಿಸಿ 30 ನಿಮಿಷಗಳ ಕಾಲ ಇರಿಸಿ ನಂತರ ತೊಳೆದರೆ ತಾಮ್ರದ ಪಾತ್ರೆಯು ಮತ್ತೆ ಹೊಳೆಯುವುದನ್ನು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ.
ವಿನೆಗರ್:
ಮನೆಯಲ್ಲಿ ನಿಂಬೆಹಣ್ಣುಗಳು ಖಾಲಿಯಾಗಿದ್ದರೆ, ವಿನೆಗರ್‌ನಲ್ಲಿ ಉಪ್ಪನ್ನು ಕರಗಿಸಿ ಪಾತ್ರೆಗಳ ಮೇಲೆ ಲೇಪಿಸಿ ಸ್ವಲ್ಪ ಸಮಯದ ನಂತರ ಸಂಪೂರ್ಣವಾಗಿ ತೊಳೆಯಿರಿ. ವಿನೆಗರ್‌ನಲ್ಲಿರುವ ಸಿಟ್ರಿಕ್ ಆಮ್ಲವು ನಿಂಬೆಯಂತೆಯೇ ಕಾರ್ಯನಿರ್ವಹಿಸುತ್ತದೆ.
ಕೆಚಪ್:
ಇದು ವಿಚಿತ್ರವಾಗಿ ತೋರುತ್ತದೆಯಾದರೂ, ತಾಮ್ರದ ಪಾತ್ರೆಗಳು ಕೆಚಪ್ನ್ನು ಲೇಪಿಸಿ ತೊಳೆದರೆ ತಮ್ಮ ಹೊಳಪನ್ನು ಮರಳಿ ಪಡೆಯಬಹುದು. ಇದು ಕೂಡ ಆಮ್ಲೀಯ ಗುಣ ಹೊಂದಿದ್ದು, ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕೇರಳದಲ್ಲಿ ಕೆಎಂಎಫ್ ಉತ್ಪನ್ನಗಳ ಮಾರಾಟಕ್ಕೆ ವಿರೋಧ: ಕಾಂಗ್ರೆಸ್‌ನ ಒಡಕು ನೀತಿಯೇ ಇದಕ್ಕೆ ಕಾರಣ ಎಂದ ಬಿಜೆಪಿ
ಸೋಡಾ:
ಅಡಿಗೆ ಸೋಡಾ, ಅತ್ಯುತ್ತಮ ಕ್ಷಾರೀಯ ವಸ್ತುವಾಗಿದ್ದು, ಟರ್ನಿಶ್‌ನ ಆಮ್ಲೀಯ ಗುಣವನ್ನು ಸಮತೋಲನಗೊಳಿಸಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ನೀವು ಅಡಿಗೆ ಸೋಡಾವನ್ನು ನಿಂಬೆ ಜತೆಗೆ ಸಂಯೋಜಿಸಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಅಲ್ಲದೇ ಹಿಟ್ಟು, ಉಪ್ಪು ಮತ್ತು ಸೋಡಾ ಪುಡಿಗೆ ಬಿಳಿ ವಿನೆಗರ್, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನೈಲಾನ್ ಪ್ಯಾಡ್ ಅಥವಾ ಮೃದುವಾದ ಸ್ಪಾಂಜ್ನಿಂದ ತೊಳೆದರೆ ಪಾತ್ರೆಗಳು ಹೊಳೆಯುತ್ತವೆ.
ವಿನೆಗರ್ ಮತ್ತು ಹಿಟ್ಟು:
ಮೊದಲು, ಉಪ್ಪು ಮತ್ತು ವಿನೆಗರ್ ಮಿಶ್ರಣವನ್ನು ಮಾಡಿ, ತದನಂತರ ಅದಕ್ಕೆ ಸ್ವಲ್ಪ ಹಿಟ್ಟು ಸೇರಿಸಿ ತೊಳೆಯುವುದರಿಂದ ತಾಮ್ರದ ಪಾತ್ರೆಗಳಿಂದ ಕಲೆಗಳನ್ನು ತೆಗೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಈ ಟಿಪ್ಸ್ಗಳನ್ನು ಪಾಲಿಸುವ ವೇಳೆ ರಸಾಯನಿಕ ಕ್ರಮಗಳಿಂದಾಗಿ ಚರ್ಮಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದು, ಕೂಡಲೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್)