More

    ಕೇರಳದಲ್ಲಿ ಕೆಎಂಎಫ್ ಉತ್ಪನ್ನಗಳ‌ ಮಾರಾಟಕ್ಕೆ ವಿರೋಧ: ಕಾಂಗ್ರೆಸ್‌ನ ಒಡಕು ನೀತಿಯೇ ಇದಕ್ಕೆ ಕಾರಣ ಎಂದ ಬಿಜೆಪಿ

    ಬೆಂಗಳೂರು: ನಂದಿನಿ ಹಾಲಿನ ಉತ್ಪನ್ನಗಳನ್ನು ಕೇರಳ ರಾಜ್ಯದಲ್ಲಿ ಮಾರಾಟ ಮಾಡುವುದನ್ನು ವಿರೋಧಿಸಲು ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ(MILMA) ನಿರ್ಧರಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯು ಸರ್ಕಾರಕ್ಕೆ ಕೌಂಟರ್​ ನೀಡಿದೆ.

    ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರದ ತತ್ವಗಳು ಮತ್ತು ಮೂಲಭೂತ ಮೌಲ್ಯಗಳಿಗೆ ವಿರುದ್ಧವಾಗಿದೆ. ಕೇರಳದಲ್ಲಿ ತನ್ನ ಮಳಿಗೆಗಳನ್ನು ತೆರೆಯದಂತೆ ಲಿಖಿತವಾಗಿ ನೀಡಿದ್ದರೂ, ಕರ್ನಾಟಕದವರು ಇದನ್ನು ನಿರ್ಲಕ್ಷಿಸಿದೆ ಎಂದು ಮಿಲ್ಮಾ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಹೇಳಿದ್ದರು.

    ಇದನ್ನೂ ಓದಿ: ಮನೆ ನೋಡುವ ನೆಪದಲ್ಲಿ ಮಹಿಳೆಯರ ಒಳಉಡುಪುಗಳನ್ನು ಕದ್ದು ಹಸ್ತಮೈಥುನ; ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ‌‌ ಬಿಜೆಪಿ, ಕರ್ನಾಟಕದ ಹೆಮ್ಮೆಯ ನಂದಿನಿಯನ್ನು ಕಾಂಗ್ರೆಸ್​ ಚುನಾವಣೆಯ ವೇಳೆ ತನ್ನ ಲಾಭಕ್ಕಾಗಿ ಅನಗತ್ಯ ಅಪಪ್ರಚಾರಗಳ ಕೂಪಕ್ಕೆ ತಳ್ಳಿತ್ತು. ಅಲ್ಲದೇ, ತನ್ನ ಸ್ವಾರ್ಥಕ್ಕಾಗಿ ರಾಜ್ಯ-ರಾಜ್ಯಗಳ ನಡುವೆ ಕಿಡಿ ಹೊತ್ತಿಸಲು ಕಾಂಗ್ರೆಸ್‌ ಒಡಕು ನೀತಿಯನ್ನು ಪರಿಚಯಿಸಿದೆ. ಈ ನೀತಿಗೆ ಇಂದು ನಂದಿನಿಯೇ ಬಲಿಯಾಗಬೇಕಾಗಿದೆ.

    ಸಿದ್ದರಾಮಯ್ಯನವರು ಮತ್ತು ಅವರ ಎಟಿಎಮ್​ ಸರ್ಕಾರ ಈಗ ಇದನ್ನು ವಿರೋಧಿಸುವಂತಹ ಎದೆಗಾರಿಕೆ ತೋರುವುದೇ ಅಥವಾ ಹೈ ಕಮಾಂಡ್‌ ಹಾಗೂ ರಣದೀಪ್‌ ಸುರ್ಜೇವಾಲಾರಂಥ ಕಲೆಕ್ಷನ್‌ ಏಜೆಂಟ್​​ರ ಸಂತೃಪ್ತಿಗಾಗಿ ದಿವ್ಯ ಮೌನ ವಹಿಸುತ್ತಾರೆಯೇ ಎಂದು ಬಿಜೆಪಿಯು ಸರ್ಕಾರವನ್ನು ಪ್ರಶ್ನಿಸಿದೆ.(ಏಜೆನ್ಸಿಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts