More

    ಕಾಂಗ್ರೆಸ್‌ನಿಂದ 371(ಜೆ) ಸಾಧ್ಯವಾಗಿದ್ದು

    ಕಲಬುರಗಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ರಾಹುಲ್ ಗಾಂಧಿ ಭರವಸೆ, ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರು, ಧರ್ಮಸಿಂಗ ಸಂಸದ ಆಗಿರದಿದ್ದರೆ ಕಲ್ಯಾಣ ಕರ್ನಾಟಕಕ್ಕೆ ೩೭೧ (ಜೆ) ವಿಶೇಷ ಸ್ಥಾನ ದೊರೆಯುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
    ೩೭೧ (ಜೆ)ಗಾಗಿ ಹಲವರು ಹೋರಾಟ ಮಾಡಿದ್ದಾರೆ. ಅವರ ಶ್ರಮ, ಹೋರಾಟಕ್ಕೆ ಕಾಂಗ್ರೆಸ್ ಅಭಿನಂದನೆ ಸಲ್ಲಿಸಿದೆ. ಉಪಪ್ರಧಾನಿಯಾಗಿದ್ದ ಎಲ್.ಕೆ.ಅಡ್ವಾಣಿ ವಿಸ್ತÈತ ವರದಿ ಸಲ್ಲಿಸುವಂತೆ ರಾಜ್ಯಕ್ಕೆ ಕಳಿಸಿದರೆ ಹೊರತು ತಿರಸ್ಕರಿಸಲಿಲ್ಲ ಎಂದು ಜಾಧವ್ ಸುಳ್ಳು ಹೇಳುತ್ತಿದ್ದಾರೆ. ೩೭೧ (ಜೆ) ನೀಡಲು ಆಗಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿದ್ದು ಬಿಜೆಪಿ ಸರ್ಕಾರ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಮಾಹಿತಿ ಕೊರತೆಯಿಂದ ಜಾಧವ್ ಸುಳ್ಳು ಹೇಳುತ್ತಿz್ದÁರೆ. ಆಂಧ್ರಪ್ರದೇಶಕ್ಕೆ ನೀಡಿದ್ದ ಆರ್ಟಿಕಲ್ ೩೭೧ (ಡಿ) ಮಾದರಿಯಲ್ಲಿ ಕರ್ನಾಟಕಕ್ಕೆ ೩೭೧ (ಜೆ) ನೀಡುವ ವಾತಾವರಣ ಕಂಡುಬರುತ್ತಿಲ್ಲ ಎಂದು ನಮೂದಿಸಿ, ಅಡ್ವಾಣಿ ವಾಪಸ್ ಕಳುಹಿಸಿದ್ದರು. ಬಿಜೆಪಿಗರಿಗೆ ಸುಳ್ಳು ಹೇಳುವುದೇ ಹವ್ಯಾಸವಾಗಿದೆ ಎಂದರು.
    ಐತಿಹಾಸಿಕ ಹಿನ್ನಲೆ, ಪ್ರಾದೇಶಿಕ ಅಸಮಾನತೆ, ಮಸೂದೆ ಜಾರಿ ಬಗ್ಗೆ ತಿಳುವಳಿಕೆ ಇಲ್ಲ. ಲೋಕಸಭೆಯಲ್ಲಿ ಸಂಖ್ಯಾ ಬಲ ಇಲ್ಲದೆ ಇದ್ದರೂ ಡಾ.ಖರ್ಗೆ ಹಗಲು, ರಾತ್ರಿ ಎಲ್ಲ ಸಂಸದರ ಮನೆಗೆ ಹೋಗಿ ಮಸೂದೆ ಮಹತ್ವ ತಿಳಿಸಿಕೊಟ್ಟು ಸಂಸತ್ತಿನಲ್ಲಿ ೩೭೧ (ಜೆ) ಪಾಸ್ ಮಾಡಿದ್ದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು.
    ವಿಶೇಷ ಸ್ಥಾನಮಾನ ಜಾರಿಯ ಹತ್ತು ವರ್ಷದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಶಿP್ಷÀಣ, ಆರೋಗ್ಯ, ಮೂಲಸೌಕರ್ಯ, ಕುಡಿಯುವ ನೀರು, ಸ್ವಚ್ಛತೆ, ಕೃಷಿ, ನೀರಾವರಿ ಸೇರಿದಂತೆ ೨೯,೨೫೭ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವರ್ಷಕ್ಕೆ ಸಾವಿರಾರು ಮೆಡಿಕಲï, ಎಂಜಿನಿಯರಿAಗ್ ಸೀಟ್ ಸಿಕ್ಕಿವೆ. ಸರ್ಕಾರಿ ನೌಕರಿ ನೇರ ನೇಮಕದಡಿ (ರಾಜ್ಯ ಹಾಗೂ ಸ್ಥಳೀಯ ವೃಂದಗ) ಗುರುತಿಸಲ್ಪಟ್ಟ ೧,೦೯,೪೧೬ ಹುz್ದೆಗಳ ಪೈಕಿ ೭೯,೯೯೦ ಹುz್ದÉಗಳನ್ನು ತುಂಬಲಾಗಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts