'ಚಂದ್ರಗ್ರಹಣ'ದ ಸಮಯದಲ್ಲಿ ಈ ಕೆಲಸ ಮಾಡಿದರೆ ನಿಮ್ಮ ದೋಷಗಳೆಲ್ಲವೂ ದೂರವಾಗುತ್ತವೆಯಂತೆ| Lunar eclipse

eclipse1
Published on

Lunar eclipse : ಭಾರತದಲ್ಲಿ ಚಂದ್ರಗ್ರಹಣವು ಇಂದು (ಸೆ.7) ರಾತ್ರಿ 9:58 ಕ್ಕೆ ಪ್ರಾರಂಭವಾಗಿ ನಾಳೆ ಬೆಳಗ್ಗಿನ ಜಾವ 1:26 ಕ್ಕೆ ಕೊನೆಗೊಳ್ಳಲ್ಲಿದೆ. ಇಂದು ಭಾದ್ರಪದ ಮಾಸದ ಹುಣ್ಣಿಮೆಯಂದು ಸಂಭವಿಸುವ ಈ ಗ್ರಹಣವು ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಚಂದ್ರನು ಭೂಮಿಯ ಸುತ್ತಲೂ ತನ್ನ ಕಕ್ಷೆಯಲ್ಲಿ ಹೋಗುತ್ತಾ ಸೂರ್ಯನಿಂದ ಭೂಮಿಯ ಹಿಂಬದಿಗೆ ಬಂದಾಗ ಚಂದ್ರಗ್ರಹಣ ಸಂಭವಿಸಲಿದೆ. ಈ ಸಮಯದಲ್ಲಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಅಶುಭ ಪರಿಣಾಮಗಳನ್ನು ತೆಗೆದುಹಾಕಬಹುದು ಎನ್ನಲಾಗಿದೆ. ಹಾಗಿದ್ರೆ ಚಂದ್ರಗ್ರಹಣದ ಸಮಯದಲ್ಲಿ ಯಾವ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.

ಈ ಸಮಯದಲ್ಲಿ, ಪೂಜೆ ಮತ್ತು ಮಂತ್ರಗಳನ್ನು ಪಠಿಸುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಚಂದ್ರಗ್ರಹಣದ ಸಮಯದಲ್ಲಿ ನೀವು ನಿಮ್ಮ ಕುಟುಂಬ ದೇವತೆಯನ್ನು ಜಪಿಸಬಹುದು. ಅದೇ ಸಮಯದಲ್ಲಿ ಮಹಾದೇವನ ಮಂತ್ರಗಳನ್ನು ಪಠಿಸುವುದು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಹಾಗಾಗಿ ನೀವು 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು 108 ಬಾರಿ ಜಪಿಸಬಹುದು ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಶಿವನನ್ನು ಪ್ರಾರ್ಥಿಸಬಹುದು. ಈ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚಿನ ಫಲಿತಾಂಶಗಳು ಸಿಗುತ್ತವೆ.

ಜ್ಯೋತಿಷ್ಯದ ಪ್ರಕಾರ ಚಂದ್ರಗ್ರಹಣವು ಎಲ್ಲಾ ಜನರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಇದು ಕೆಲವು ಜನರನ್ನು ಶ್ರೀಮಂತರನ್ನಾಗಿ ಮಾಡಬಹುದು ಎಂದು ಹೇಳಲಾಗಿದೆ. ಆದರೆ ಕೆಲವು ಜನರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಂಡರೆ, ಅಶುಭ ಪರಿಣಾಮಗಳನ್ನು ತೆಗೆದುಹಾಕಬಹುದು ಮತ್ತು ವ್ಯಕ್ತಿಯ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಜೊತೆ. ಅದೃಷ್ಟವು ನಿಮ್ಮನ್ನು ಬೆಂಬಲಿಸಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.

(ಏಜೆನ್ಸೀಸ್)

ಇನ್ನೂ ಈ ಚಂದ್ರಗ್ರಹಣದ ನಂತರ, ನಿಮ್ಮ ಇಡೀ ಮನೆಯ ಮೇಲೆ ಗಂಗಾಜಲವನ್ನು ಸಿಂಪಡಿಸಬೇಕು. ಜೊತೆಗೆ, ಮನೆಯನ್ನು ಉಪ್ಪು ನೀರಿನಿಂದ ಒರೆಸಿ. ಹೀಗೆ ಮಾಡುವುದರಿಂದ ಮನೆಯೊಳಗಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗಲು ಪ್ರಾರಂಭವಾಗುತ್ತದೆ ಮತ್ತು ದುಷ್ಟ ಕಣ್ಣಿನಿಂದ ರಕ್ಷಿಸಲ್ಪಡುತ್ತದೆ. ಅಲ್ಲದೆ ಗ್ರಹಣದ ಬಳಿಕ, ಸ್ನಾನ ಮಾಡಿ ಹಳೆಯ ಬಟ್ಟೆಗಳನ್ನು ಬದಲಾಯಿಸಬೇಕು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net