ಹಾಲು ಹೆಚ್ಚಾಗಿ ಕರೆದರೆ ಹೆಬ್ಬೆಟ್ಟಿಗೆ ಕುತ್ತು

Untitled-design-9-3
Published on

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ, ದನಗಳು ನೀರು ಕುಡಿಯುವ ನದಿಯ ಜಾಗ, ಹೆಚ್ಚು ಆಳವಿಲ್ಲದ ಕೆಸರಿನಿಂದಾಗಲಿ ಅಥವಾ ಮೊಸಳೆಗಳಿಂದಾಗಲಿ ಕೂಡಿರದೆ ಸಮವಾಗಿಯೂ, ಅಗಲವಾಗಿಯೂ, ಸ್ವಚ್ಛವಾದ ತಿಳಿ ನೀರಿನಿಂದ ಕೂಡಿದ ಸುರಕ್ಷಿತವಾದ ಸ್ಥಳವಾಗಿರಬೇಕಿತ್ತು. ಸ್ವಾಭಾವಿಕವಾಗಿ ಮರಣ ಹೊಂದಿದ ದನಗಳ ಚರ್ಮವನ್ನು ಮುದ್ರೆ ಸಹಿತ ಒಪ್ಪಿಸಬೇಕಾಗಿತ್ತು. ಸಣ್ಣ ಕರುವಿದ್ದಲ್ಲಿ ಅದರ ಚರ್ಮ ಮಾತ್ರ ತಂದು ಮುಟ್ಟಿಸಬೇಕಾಗಿತ್ತು. ಸತ್ತ ದನದ ಕೊಬ್ಬು, ಸ್ನಾಯು, ಹಲ್ಲು, ಗೊರಸು, ಕೊಂಬು, ಎಲುಬುಗಳನ್ನು ತಂದು ಒಪ್ಪಿಸಬೇಕಾಗಿತ್ತು. ಸತ್ತ ದನಗಳ ಮಾಂಸವನ್ನು ಗೋಪಾಲಕರು ಮಾರಾಟ ಮಾಡಿಕೊಳ್ಳಬಹುದಾಗಿತ್ತು. ಮಜ್ಜಿಗೆ, ಹಾಲನ್ನು ಅಥವಾ ಒಣಗಿಸಿ ಗಟ್ಟಿ ಮಾಡಿದ ಮಜ್ಜಿಗೆಯನ್ನು ಸೇನೆಗೋಸ್ಕರ ತಂದುಕೊಡಬೇಕಾಗಿತ್ತು. ಉಳಿದಿದ್ದನ್ನು ಕಂಚಿನ ಪಾತ್ರೆಯಲ್ಲಿಟ್ಟು ಆಹಾರದಲ್ಲಿ ಉಪಯೋಗಿಸಬಹುದಾಗಿತ್ತು. ಮಳೆಗಾಲ ಮತ್ತು ಚಳಿಗಾಲದ ಪ್ರಾರಂಭದಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಗೋವಿನ ಹಾಲನ್ನು ಕರೆಯಬೇಕಿತ್ತು. ವಸಂತಕಾಲ ಮತ್ತು ಬೇಸಿಗೆಯಲ್ಲಿ ದಿನಕ್ಕೆ ಒಂದೇ ಬಾರಿ ಹಾಲನ್ನು ಕರೆಯಬೇಕಿತ್ತು. ಇದನ್ನು ಮೀರಿ ಹಾಲನ್ನು ಕರೆದರೆ ಅಂಥವರ ಹೆಬ್ಬೆಟ್ಟನ್ನು ಕತ್ತರಿಸಲಾಗುತ್ತಿತ್ತು. ಗೋಪಾಲಕರು ಹಾಲು ಕರೆಯುವ ವೇಳೆಯನ್ನು ತಪ್ಪಿಸಿದಲ್ಲಿ ಪಾಲಿಗೆ ಕೊಡಬೇಕಾದ ಹಾಲು ಸಿಗದೆ, ಆ ದಿನದ ವೇತನ ದಂಡವಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net