

Silver Rings : ಹೆಣ್ಣು ಮಕ್ಕಳಿಗೂ ಚಿನ್ನಾಭರಣಗಳಿಗೂ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಮಹಿಳೆಗೂ ಬಗೆ ಬಗೆಯ ಆಭರಣಗಳನ್ನು ಧರಿಸಬೇಕೆಂಬ ಆಸೆ ಇರುತ್ತದೆ. ಅದರಲ್ಲಿ ಉಂಗುರಗಳು ಕೂಡ ಒಂದು. ಚಿನ್ನ, ಬೆಳ್ಳಿ ಅಥವಾ ಫ್ಯಾನ್ಸಿ ಯಾವುದೇ ಇರಲಿ ವೆರೈಟಿ ಉಂಗುರಗಳನ್ನು ತೊಡಲು ತುಂಬಾ ಆಸಕ್ತಿ ವಹಿಸುತ್ತಾರೆ. ಉಂಗುರದ ಬೆರಳಿಗೆ ಉಂಗುರವನ್ನು ಧರಿಸುವುದು ವಾಡಿಕೆಯಾಗಿದೆ.
ಚಿನ್ನ, ಬೆಳ್ಳಿ ಅಥವಾ ತಾಮ್ರ ಯಾವುದೇ ಇರಬಹುದು ಆದರೆ, ಬೆಳ್ಳಿಯ ಉಂಗುರದಿಂದ ಇರುವ ಲಾಭಗಳು ಇತರ ಉಂಗುರಗಳಲ್ಲಿ ಇಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯ ಉಂಗುರವು ಚಂದ್ರನನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸಿದರೆ ಸಕಲ ಸಂಪತ್ತು ಬರುತ್ತದೆ. ಹೆಚ್ಚಿನ ಹಣದ ಹರಿವು ಇರುತ್ತದೆ ಹಾಗೂ ಜೀವನದಲ್ಲಿ ಮೇಲೇರಲು ಸಾಧ್ಯವಾಗುತ್ತದೆ. ಇದೆಲ್ಲರ ಜತೆಗೆ ದೇಹದ ಆರೋಗ್ಯವು ಕೂಡ ಸುಧಾರಿಸುತ್ತದೆ. ಈ ಪೋಸ್ಟ್‌ನಲ್ಲಿ, ಬೆಳ್ಳಿಯ ಉಂಗುರವನ್ನು ಯಾವ ಬೆರಳಿಗೆ ಧರಿಸುವುದರಿಂದ ಆಗುವ ಪ್ರಯೋಜನಗಳನ್ನು ನೀವು ನೋಡಬಹುದು.
ಮಹಿಳೆಯರು ಎಡಗೈನ ಉಂಗುರ ಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿದರೆ ಕ್ಷಾಮವಿಲ್ಲದೆ ಆದಾಯ ಹೆಚ್ಚಾಗುತ್ತದೆ. ಸಂಪತ್ತು ಹರಿದುಬರುತ್ತದೆ. ಉಂಗುರ ಧರಿಸುವುದು ಮಾತ್ರವಲ್ಲ, ಪ್ರತಿ ತಿಂಗಳು ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಮಾಡಬೇಕು. ಇದರಿಂದ ಸಂಪತ್ತು ಹೆಚ್ಚುತ್ತದೆ.
ಇನ್ನು ಹೆಬ್ಬೆರಳಿನ ಮುಂದಿನ ಬೆರಳಿಗೆ ಬೆಳ್ಳಿಯ ಉಂಗುರವನ್ನು ಮಹಿಳೆಯರು ಧರಿಸಿದರೆ, ಬೆರಳಿನ ರಕ್ತನಾಳಗಳ ಮೂಲಕ ಗರ್ಭಾಶಯದ ಅಸ್ವಸ್ಥತೆಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ದೈಹಿಕ ಆರೋಗ್ಯವೂ ಸುಧಾರಿಸುತ್ತದೆ. ಮಹಿಳೆಯರು ದೇಹವನ್ನು ಫ್ರಶ್ ಆಗಿ ಇಡಲು ಬೆಳ್ಳಿಯ ಉಂಗುರಗಳನ್ನು ಧರಿಸುವುದು ಉತ್ತಮ. ಇದರಿಂದ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ.
ಜೀವನದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಿಮ್ಮ ಕೈಯಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿದರೆ, ಯಾವುದೇ ದೊಡ್ಡ ಸಮಸ್ಯೆಗಳನ್ನು ನಿವಾರಿಸಬಹುದು. ಆದ್ದರಿಂದ, ಬೆಳ್ಳಿಯಿಂದ ಮಾಡಿದ ಯಾವುದೇ ವಸ್ತುವನ್ನು ಮಹಿಳೆಯರು ತಮ್ಮ ಬೆರಳಿಗೆ ಧರಿಸಿದರೆ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.