ಕಾವೇರಿ ಕಿಚ್ಚು; ನಾವೆಲ್ಲರೂ ಇಲ್ಲಿ ಐದು ನಿಮಿಷ ಕುಳಿತರೆ ಸಮಸ್ಯೆ ಬಗೆಹರಿಯುತ್ತಾ?: ನಟ ಶಿವರಾಜ್​ಕುಮಾರ್​

Untitled design - 2023-09-29T134214.874
Published on

ಬೆಂಗಳೂರು: ಕಾವೇರಿ ಹೋರಾಟದಲ್ಲಿ ಭಾಗಿಯಾದ ಸ್ಯಾಂಡಲ್​ವುಡ್​ನ ಹಿರಿಯ ನಟ ಶಿವರಾಜ್​ಕುಮಾರ್​, ನಾವೆಲ್ಲರೂ ಇಲ್ಲಿಗೆ ಬಂದು ಐದು ನಿಮಿಷ ಕುಳಿತರೆ ಸಮಸ್ಯೆ ಬಗೆಹರಿಯುತ್ತಾ? ಎಂದು ಪ್ರಶ್ನಿಸಿದರು.

ಪ್ರತಿಭಟನೆ ಕುರಿತಂತೆ ಮಾತನಾಡಿದ ಶಿವಣ್ಣ, "ನೀವೇ ಸ್ಟಾರ್​ ಪಟ್ಟ ಕೊಡುತ್ತೀರಿ, ನೀವೇ ಕಸಿದುಕೊಳ್ಳುತ್ತೀರಿ. ಸಮಸ್ಯೆಯಿದೆ ಖಂಡಿತ, ಆದರೆ ಆ ಸಮಸ್ಯೆಯಿಂದ ಹೇಗೆ ಹೊರಬರಬೇಕು ಎಂಬ ಯೋಚನೆ ಮಾಡಬೇಕು. ಹೃದಯದಿಂದ ಚಿಂತಿಸಬೇಡಿ, ಬುದ್ಧಿಯಿಂದ ಯೋಚಿಸಿ" ಎಂದು ಹೇಳಿದರು.

"ನಾನು ಯಾವತ್ತಿದ್ದರೂ ಹೃದಯದಿಂದ ಮಾತನಾಡುತ್ತೇನೆ. ದಯವಿಟ್ಟು ಯಾರನ್ನು ದೂರಬೇಡಿ. ಎಲ್ಲಾ ಕಲಾವಿದರು ಒಂದೇ, ಅವರು ಬರಲಿಲ್ಲ, ಇವರು ಬರಲಿಲ್ಲ ಎಂದು ಹೇಳಬೇಡಿ. ಏನೇ ಮಾಡಿದರೂ ಒಳ್ಳೆ ಮನಸ್ಸಿನಿಂದ ಮಾಡಬೇಕು. ಈ ಬಗ್ಗೆ ಎರಡು ಸರ್ಕಾರ ಕುಳಿತು ಮಾತುಕತೆ ನಡೆಸಬೇಕು" ಎಂದು ಹೇಳಿದರು.

ಈ ಬಗ್ಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಕೂಡ ಮಾತನಾಡಿ, "ಬಹಳ ವರ್ಷದ ನಂತರ ನಮ್ಮ ಚಂದನವನದವರು ಒಟ್ಟಾಗಿ ಸೇರಿದ್ದೇವೆ. ಕಳೆದ ತಿಂಗಳು ಒಂದು ಮಾತು ಹೇಳಿದ್ದೆ, ಚಿತ್ರೋದ್ಯಮ ಚುಕ್ಕಾಣಿ ಇಲ್ಲದ ಹಡಗಾಗಿದೆ. ಇವತ್ತು ಒಂದು ಸಮಾಧಾನ ದೃಶ್ಯ ನೋಡುತ್ತಿದ್ದೇವೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net