Revanth Reddy | ಟ್ರಂಪ್​​ ರಾತ್ರಿ ಕಂಡ ಕನಸ್ಸಿನಿಂದ ಯಶಸ್ಸು ಅಸಾಧ್ಯ..; ಅಮೆರಿಕಾ ನಡೆಗೆ ರೇವಂತ್​ ರೆಡ್ಡಿ ಟಾಂಗ್​!

Revanth Reddy
Published on

Revanth Reddy: ಡೊನಾಲ್ಡ್ ಟ್ರಂಪ್ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡಲು ನಿರಾಕರಿಸಿದರೆ, ಆ ಸಂಸ್ಥೆಗಳು ಭಾರತಕ್ಕೆ ಬರಲು ಸಿದ್ಧವಾಗಿವೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಭಾರತದ ಸಾರ್ವಜನಿಕ ವ್ಯವಹಾರಗಳ ವೇದಿಕೆಯ 12 ನೇ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿ, ಟ್ರಂಪ್ ಭಾರತೀಯರಿಗೆ ಅವಕಾಶ ನೀಡದಿದ್ದರೆ, ಆ ವಿಶ್ವವಿದ್ಯಾಲಯಗಳು ಇಲ್ಲಿಗೆ ಬರಲಿವೆ, ಉತ್ತಮ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಮ್ಮಲ್ಲಿ ಸ್ಥಳವಿದೆ, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳೊಂದಿಗೆ ಈಗಾಗಲೇ ಮಾತನಾಡಿದ್ದೇನೆ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ತೆಲಂಗಾಣಕ್ಕೆ ಬರಲು ಬಯಸುತ್ತಿದೆ ಎಂದು ತಿಳಿಸಿದರು.

ಶೇ 50% ಹೆಚ್ಚುವರಿ ಸುಂಕಕ್ಕೆ ರೇವಂತ್ ರೆಡ್ಡಿ ಟೀಕೆ

ಟ್ರಂಪ್ ಅವರು ಶೇಕಡಾ 50 ರಷ್ಟು ಸುಂಕ ವಿಧಿಸಿದ್ದನ್ನು ಟೀಕಿಸಿದ ರೇವಂತ್ ರೆಡ್ಡಿ, ಈ ನಿರ್ಧಾರ ಅಮೆರಿಕದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಹೊರತು ಭಾರತಕ್ಕಲ್ಲ ಎಂದರು. ಒಮ್ಮೆ ಮೋದಿಜಿ ನನ್ನ ಸ್ನೇಹಿತ ಎಂದು ಹೇಳುವ ಟ್ರಂಪ್​​, ಮತ್ತೊಂದು ದಿನ ಭಾರತದ ಮೇಲೆ ಶೇಕಡಾ 50 ರಷ್ಟು ತೆರಿಗೆ ವಿಧಿಸುತ್ತೇನೆ ಎಂದು ಹೇಳುತ್ತಾರೆ. ಇಂತಹ ಅನಿಯಂತ್ರಿತ ನಿರ್ಧಾರಗಳು ತುಂಬಾ ದಿನ ಕೆಲಸ ಮಾಡುವುದಿಲ್ಲ ಎಂದರು. ಕೆಲವರು ರಾತ್ರಿ ಕನಸು ಕಂಡು, ಮರುದಿನ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಾರೆ. ಇದು ಕೆಲಸ ಮಾಡುವುದಿಲ್ಲ, ಯಾವುದೇ ಸರ್ಕಾರ ಹಠಾತ್ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ಸು ಗಳಿಸಲು ಸಾಧ್ಯವಿಲ್ಲ, ಅದಕ್ಕೆ ದೂರದೃಷ್ಟಿ, ಯೋಜನೆ ಮತ್ತು ನಿರಂತರ ಪ್ರಯತ್ನದ ಅಗತ್ಯವಿದೆ, ಪರಿಣಾಮಕಾರಿ ಆಡಳಿತಕ್ಕೆ ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯ, ಮುಂದಿನ ಪೀಳಿಗೆಗೆ ಅವಕಾಶಗಳನ್ನು ಸೃಷ್ಟಿಸುವತ್ತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಚಿಂತನೆ ನಡೆಸಬೇಕು ಎಂದರು.

ತೆಲಂಗಾಣದ ಸರ್ವತೋಮುಖ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು, ತಮ್ಮ ಸರ್ಕಾರವು ತೆಲಂಗಾಣ ವಿಷನ್ ಡಾಕ್ಯುಮೆಂಟ್ - 2047 ಅನ್ನು ಸಿದ್ಧಪಡಿಸಿದೆ, ಅದನ್ನು ಮುಂಬರುವ ಡಿಸೆಂಬರ್ 9 ರಂದು ಔಪಚಾರಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net