ಸಂಘಟನೆ ಬಲಿಷ್ಠವಾದರೆ ರೈತರು ಸದೃಢ

raitha sangha
ಹರಗುವಳ್ಳಿಯಲ್ಲಿ ಏರ್ಪಡಿಸಿದ್ದ ರೈತ ಸಂಘದ ನೂತನ ಗ್ರಾಮ ಘಟಕದ ಉದ್ಘಾಟನೆಯಲ್ಲಿ ಹಾಲಪ್ಪ ಗೌಡ, ಪ್ಯಾಟಿ ಈರಣ್ಣ, ಕೊಟ್ರೇಶ್, ರಾಜು ಹೊಸಮನಿ, ಹನುಮಂತರಾಮ್, ಪರಮೇಶ್ವರಪ್ಪ, ರವಿ, ಮಂಜಪ್ಪ ಇತರರಿದ್ದರು.
Published on

ಶಿಕಾರಿಪುರ: ರೈತರು ಸಾಕಷ್ಟು ಸಮಸ್ಯೆಯಲ್ಲಿದ್ದಾರೆ. ಸರ್ಕಾರಗಳು ಆಶ್ವಾಸನೆ ಮಾತ್ರ ನೀಡುತ್ತಿವೆ. ಹೀಗಾಗಿ ಕೃಷಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ರೈತರ ಗ್ರಾಮ ಘಟಕದ ಅಗತ್ಯವಿದೆ ಎಂದು ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ ಹೇಳಿದರು.
ಹರಗುವಳ್ಳಿಯಲ್ಲಿ ಬುಧವಾರ ರಾಜ್ಯ ರೈತ ಸಂಘದ (ಕೆ.ಟಿ.ಗಂಗಾಧರ್ ಬಣ) ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, 80ರ ದಶಕದಲ್ಲಿ ರೈತರ ಸಂಘಟನೆಗೆ ಕಾರಣರಾದ ಪ್ರೊ. ನಂಜುಂಡಸ್ವಾಮಿ ಅವರನ್ನು ಸ್ಮರಿಸಬೇಕು. ಸಂಘಟನೆ ಇಲ್ಲದಿದ್ದರೆ ರೈತರಿಗೆ ಬಲ ಬರುವುದಿಲ್ಲ. ಸಂಘಟನೆ ಬಲಿಷ್ಠವಾದರೆ ರೈತರು ಸದೃಢರಾಗುತ್ತಾರೆ. ನಾವು ನಂಜುಂಡಸ್ವಾಮಿ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ರೈತ ಸಂಘದ ಘಟಕಗಳಿದ್ದರೆ ರೈತರಿಗೆ ಭೀಮಬಲ ಬರುತ್ತದೆ. ಎಲ್ಲ ಊರಿನಲ್ಲೂ ರೈತ ಸಂಘದ ಘಟಕಗಳನ್ನು ಪ್ರಾರಂಭಿಸಬೇಕು. ರೈತ ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು. ರೈತರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದಕ್ಕಿಂತ ತಮ್ಮ ಸಂಘಟನೆ ಮೂಲಕ ಕೆಲಸಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಿದರು.
ರೈತ ಸಂಘ ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಪ್ರತಿ ಗ್ರಾಮ ಘಟಕಗಳೂ ಚುರುಕಾಗಿರಬೇಕು. ಯಾರೇ ರೈತರಿಗೆ ತೊಂದರೆಯಾದರೂ ತಕ್ಷಣ ಸ್ಪಂದಿಸಬೇಕು. ಗ್ರಾಮ ಘಟಕಕ್ಕೆ ಮೀರಿದ ಸಮಸ್ಯೆಗಳಿದ್ದರೆ ತಾಲೂಕು, ಜಿಲ್ಲಾ ಘಟಕಗಳಿಗೆ ಮಾಹಿತಿ ನೀಡಿದರೆ ನಾವು ಸದಾ ನಿಮ್ಮ ಜತೆಗಿದ್ದು ಕೆಲಸ ಮಾಡುತ್ತೇವೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನ ಗೌಡ, ಗೌರವಾಧ್ಯಕ್ಷ ಪ್ಯಾಟಿ ಈರಣ್ಣ, ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶ್, ತಾಲೂಕು ಕಾರ್ಯದರ್ಶಿ ರಾಜು ಹೊಸಮನಿ, ನೂತನ ಘಟಕದ ಅಧ್ಯಕ್ಷ ಹನುಮಂತರಾಮ್, ಪರಮೇಶ್ವರಪ್ಪ ಗೌಡ್ರು, ರವಿ, ಎಚ್.ಕೆ.ಗಂಗಾಧರ್, ಮಂಜಪ್ಪ ಮತ್ತು ರೈತ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net