

ಶಿವಮೊಗ್ಗ: ಸಮರ್ಥ ಸೇನೆ ಹೊಂದಿರುವ ದೇಶ ಆರ್ಥಿಕವಾಗಿ ಸುಭದ್ರವಾಗಿರುತ್ತದೆ. ಆಂತರಿಕ ಸುರಕ್ಷೆ ವಿಶ್ವಸನೀಯವಾಗಿದ್ದಾಗ ಆ ದೇಶಕ್ಕೆ ಬಂಡವಾಳ ಯಥೇಚ್ಛವಾಗಿ ಹರಿದು ಬರುತ್ತದೆ ಎಂದು ನಿವೃತ್ತ ವಾಯು ಸೇನಾಧಿಕಾರಿ ರಾಜೇಶ್ ಹೇಳಿದರು.
ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೂಡಿಕೆ ಹೆಚ್ಚಾದಾಗ ಉದ್ಯೋಗಾವಕಾಶಗಳು ಹೆಚ್ಚಿ ಜನರು ಆರ್ಥಿಕವಾಗಿ ಸಬಲರಾಗುತ್ತಾರೆ. ದೇಶದ ಒಟ್ಟಾರೆ ಆದಾಯ ವೃದ್ಧಿಯಾಗುತ್ತದೆ. ಉತ್ತಮ ಅನುದಾನ ಲಭಿಸುವುದರಿಂದ ಸೇನೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಗಿಲ್ ಯುದ್ಧ ನಡೆಯಲು ಕಾರಣವಾದ ಅಂಶಗಳನ್ನು ಅವರು ಉಲ್ಲೇಖಿಸಿದರು. ಸೇನೆಯಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳನ್ನು ಅರಿಯಲು ಕಾರ್ಗಿಲ್ ಯುದ್ಧ ಹೇಗೆ ಸಹಕಾರಿ ಆಯಿತೆಂದು ವಿವರಿಸಿದರು.
ಇತ್ತೀಚೆಗೆ ನಿಧನರಾದ ರೋಟರಿ ಮಾಜಿ ಗೌರ‌್ನರ್ ಎಂ.ಜಿ.ರಾಮಚಂದ್ರ ಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕ್ಲಬ್‌ನ ಕಲಿಕಾ ಮಾರ್ಗದರ್ಶಿ ಎಚ್.ಎಲ್.ರವಿ, ರೋಟರಿ ಜೋನಲ್ ಲೆಫ್ಟಿನೆಂಟ್ ಮಂಜುಳಾ ರಾಜು, ಕ್ಲಬ್‌ನ ಅಧ್ಯಕ್ಷ ಮುಶ್ತಾಕ್ ಅಲಿಶಾ, ಕಾರ್ಯದರ್ಶಿ ಎ.ವಿ.ಶ್ರೀಕಾಂತ್ ಇತರರಿದ್ದರು.