ಕುಮಾರಸ್ವಾಮಿ ಪೆನ್ ಡ್ರೈವ್ ಬಿಡುಗಡೆ ಮಾಡಿದರಾ? ಜಾರ್ಜ್ ಪ್ರಶ್ನೆ

KJ George
Published on

ಬೆಂಗಳೂರು: ಇಂಧನ ಇಲಾಖೆಯ ಭ್ರಷ್ಟಾಚಾರದ ಅಂಕಿ-ಅಂಶಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಲಿ ಬಳಿಕ ಮಾತನಾಡುತ್ತೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಏನು ಬೇಕಾದರೂ ಬಿಡುಗಡೆ ಮಾಡಲಿ. ಮೊದಲು ಅವರು ಬಿಡುಗಡೆ ಮಾಡಲಿ ಆಮೇಲೆ ಮಾತನಾಡುತ್ತೇನೆ. ಏನು ಅಂಕಿ-ಅಂಶಗಳನ್ನ ಬಿಡುಗಡೆ ಮಾಡುತ್ತಾರೋ ನೋಡೋಣ ಎಂದರು.

ಇಲಾಖೆಯಲ್ಲಿ ಯಾರಾದರೂ ಹಣ ಲೂಟಿ ಮಾಡಿದ್ದರೆ ಅವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳೋಣ ಎಂದು ಹೇಳಿದರು.

ಪೆನ್ ಡ್ರೈವ್ ತೋರಿಸಿದ್ದರಲ್ಲ, ಅದನ್ನು ಏನಾದರೂ ಅವರು ಬಿಡುಗಡೆ ಮಾಡಿದರಾ? ಎಂದು ಜಾರ್ಜ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net