ಹಸಿರಿದ್ದರೆ ವಾತಾವರಣ ನೈರ್ಮಲ್ಯ

11sri-4
ಮೆಣಸೆ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಮಟ್ಟದ ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಗೌರಮ್ಮ ಚಾಲನೆ ನೀಡಿದರು. ಸಂಧ್ಯಾ ಮರಿಯಪ್ಪ, ವಿಜಯಕುಮಾರ್, ತ್ರಿಮೂರ್ತಿ ಇದ್ದರು.
Published on

ಶೃಂಗೇರಿ: ಸಸ್ಯ ಶ್ಯಾಮಲ ಯೋಜನೆ ಪರಿಸರಕ್ಕೆ ಪೂರಕವಾಗಿದೆ. ಮಕ್ಕಳು ಶಾಲೆಗಳಲ್ಲಿ ಲಭ್ಯವಿರುವ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಎಂದು ತಹಸೀಲ್ದಾರ್ ಗೌರಮ್ಮ ತಿಳಿಸಿದರು.

ಸೋಮವಾರ ಮೆಣಸೆ ಶಾಸಕರ ಮಾದರಿ ಹಿರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ತಾಲೂಕು ಮಟ್ಟದ ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಜೀವನದ ಸುಸ್ಥಿರತೆ ಪರಿಸರದಿಂದ ಮಾತ್ರ ಸಾಧ್ಯ. ಸುತ್ತಮುತ್ತ ಹಸಿರಿನ ವಾತಾವಾರಣ ಇದ್ದಾಗ ಉತ್ತಮ ಗಾಳಿ ಲಭ್ಯವಾಗುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪರಿಸರ ಮಾಲಿನ್ಯದಿಂದ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ನಾವು ಕಾಣುತ್ತಿದ್ದೇವೆ. ಗಿಡಗಳನ್ನು ನೆಡುವ ಜತೆಗೆ ಅದರ ಪೋಷಣೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಸದಸ್ಯ ತ್ರಿಮೂರ್ತಿ, ಎಸ್‌ಎಂಡಿಸಿ ಅಧ್ಯಕ್ಷ ಉದಯ್, ತಾಲೂಕು ನೊಡೆಲ್ ಅಧಿಕಾರಿ ವಿಜಯಕುಮಾರ್, ಶಾಲಾ ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net