‘ನಾನು ಐಶ್ವರ್ಯಾಳನ್ನು ಕೊಂದಿದ್ದರೆ ಆಕೆ ಬದುಕಿರುತ್ತಿರಲಿಲ್ಲ’ ಎಂದಿದ್ದ ಸಲ್ಮಾನ್​ ವೀಡಿಯೋ ವೈರಲ್​

aishwarya-salman
Published on

ಮುಂಬೈ: ಬಾಲಿವುಡ್‌ನಲ್ಲಿ ಅತ್ಯಂತ ಜನಪ್ರಿಯ ಪ್ರೇಮಕಥೆ ಎಂದರೆ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ರೇಖಾ…, ನಂತರ ಮತ್ತೊಂದು ಪ್ರೇಮಕಥೆ ಎಂದರೆ ಅಮಿತಾಬ್ ಬಚ್ಚನ್ ಅವರ ಸೊಸೆ ಐಶ್ವರ್ಯಾ ರೈ ಮತ್ತು ಬ್ಯಾಡ್​ ಬಾಯ್​ ಸಲ್ಮಾನ್ ಖಾನ್. ಮೊದಲನೆಯ ಪ್ರೇಮಕಥೆ ಜನ ಸ್ವಲ್ಪ ಮಟ್ಟಿಗೆ ಮರೆತಿದ್ದಾರೆ. ಆದರೆ ಎರಡನೆಯದು ಇನ್ನೂ ಚರ್ಚೆಯಾಗುತ್ತಿದೆ.

ವಾಸ್ತವವಾಗಿ ಸಲ್ಮಾನ್​ ಪ್ರೀತಿ ಈಡೇರಲಿಲ್ಲ. ಐಶ್ವರ್ಯಾ ರೈ ಅಮಿತಾಬ್ ಬಚ್ಚನ್ ಅವರ ಪುತ್ರ ಮತ್ತು ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಆದರೆ ಇಂದಿಗೂ ಐಶ್ವರ್ಯಾ ರೈ ಪ್ರೇಮ ಎಂದರೆ ಸಾಕು ಸಲ್ಮಾನ್ ಹೆಸರು ಕೇಳಿ ಬರುತ್ತಿದೆ.

ಐಶ್ವರ್ಯಾ ರೈ 2002 ರಲ್ಲಿ ಈ ಪ್ರೇಮಕಥೆಯು ಅಪೂರ್ಣವಾಗಿ ಉಳಿದಿದೆ ಎಂದು ಬಹಿರಂಗಪಡಿಸಿದರು. ಸಲ್ಮಾನ್ ಖಾನ್‌ನ ಕುಡಿತ, ದಾಂಪತ್ಯ ದ್ರೋಹ ಮತ್ತು ಅಪಮಾನ ಅಂದರೆ ಆತನ ವರ್ತನೆಯಿಂದ ಬೇಸತ್ತು ಆಕೆ ಸಂಬಂಧ ಕೊನೆಗೊಳಿಸಿದಳು.

ಐಶ್ವರ್ಯಾ ರೈ ಏನೂ ನಡೆದೇ ಇಲ್ಲ ಎಂಬಂತೆ ಮುಂದುವರಿದಳು. 'ಸಲ್ಮಾನ್‌ನ ಫೋನ್‌ಗೆ ಉತ್ತರಿಸದಿದ್ದಾಗ, ಆತ ನನ್ನನ್ನು ಹೊಡೆದು ದೈಹಿಕವಾಗಿ ಹಾನಿ ಮಾಡುತ್ತಿದ್ದ. ಆದ್ದರಿಂದ ಯಾವುದೇ ಸ್ವಾಭಿಮಾನಿ ಮಹಿಳೆಯಂತೆ, ನಾನು ಅವನೊಂದಿಗೆ ನನ್ನ ಸಂಬಂಧವನ್ನು ಕೊನೆಗೊಳಿಸಿದೆ' ಎಂದು ಓಮ್ಮೆ ಐಶ್ವರ್ಯ ಹೇಳಿಕೊಂಡಿದ್ದರು.

ಐಶ್ವರ್ಯಾ ರೈ ಬಳಿಕ ಅಭಿಷೇಕ್ ಕೈಹಿಡಿದು ಹೊಸ ಜೀವನ ಪ್ರಾರಂಭಿಸಿದರು. ಆದರೆ ಸಲ್ಮಾನ್ ಖಾನ್ ಇನ್ನೂ ಭಗ್ನಪ್ರೇಮಿಯಾಗೇ ಉಳಿದಂತೆ ಕಾಣುತ್ತಾನೆ.

ಇದೆಲ್ಲ ಮುಗಿದ ಕಥೆ, ಈಗ ಏಕೆ ಎಂದು ನೀವು ಪ್ರಶ್ನಿಸಬಹುದು. ಹೌದು ಈಗ ಇದನ್ನು ಹೇಳುವುದಕ್ಕೆ ಕಾರಣವೂ ಇದೆ. ಅದೇನೆಂದರೆ ಐಶ್ವರ್ಯಾ ರೈ ಮೇಲಿನ ಹಲ್ಲೆ ಆರೋಪದ ಬಗ್ಗೆ ಸಲ್ಮಾನ್ ಖಾನ್ ಕೊನೆಗೂ ಮೌನ ಮುರಿದಿದ್ದಾನೆ.

ಈ ಬಗ್ಗೆ ಸಂದರ್ಶನ ನಡೆಸುತ್ತಿದ್ದ ಮಹಿಳಾ ಪತ್ರಕರ್ತೆಯೊಬ್ಬರು ಹಲ್ಲೆ ನಿಜವೇ ಎಂದು ಕೇಳಿದಾಗ 'ನಾನು ಅವಳನ್ನು ಕೊಂದಿದ್ದರೆ, ಅವಳು ಬದುಕುತ್ತಿರಲಿಲ್ಲ' ಎಂದಿದ್ದಾನೆ ಸಲ್ಲುಮಿಯಾ. ಈ ನಡುವೆ ಈ ಸಂದರ್ಶನದ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗಿದ್ದರೂ ಸಲ್ಮಾನ್ ಖಾನ್ ಮೌನವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net