ಸರ್ಕಾರಿ ಶಾಲೆಗಳು ಮುಚ್ಚಿದರೆ ಮತ್ತೆ ಆರಂಭ ಕಷ್ಟ

4 nrp 3 (1)
ಎನ್.ಆರ್.ಪುರದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ರೇಖಾ ಉದ್ಘಾಟಿಸಿದರು. ರವಿ, ಕೆ.ಆರ್.ಪುಷ್ಪಾ, ವೈ.ಎಸ್.ಸುಬ್ರಹ್ಮಣ್ಯ, ಪ್ರೇಮ, ಇದ್ದರು.
Published on

ಎನ್.ಆರ್.ಪುರ: ಗ್ರಾಮೀಣ ಭಾಗದಲ್ಲಿ ಪ್ರತಿಭಾ ಕಾರಂಜಿಯನ್ನು ಊರಿನ ಜಾತ್ರೆ, ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ ಎಂದು ಬಿಇಒ ಕೆ.ಆರ್.ಪುಷ್ಪಾ ಹೇಳಿದರು.
ಸೋಮವಾರ ತಾಲೂಕಿನ ಕಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕದಕುಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದಾಯ ಶಾಲೆಯ ಒಂದು ಭಾಗ. ಪ್ರತಿಭಾಕಾರಂಜಿ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಅಲ್ಪ ಅನುದಾನ ನೀಡುತ್ತದೆ. ಗ್ರಾಮೀಣ ಜನರು ತಮ್ಮ ಹಣದಿಂದಲೇ ಪ್ರತಿಭಾ ಕಾರಂಜಿ ನಡೆಸುತ್ತಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 6 ಕ್ಲಸ್ಟರ್‌ಗಳಲ್ಲಿ ಪ್ರತಿಭಾ ಕಾರಂಜಿ ಮುಗಿದಿದೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಪಾಲಕರು ಗಮನ ನೀಡಬೇಕು. ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ ಮಾತನಾಡಿ, ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದ್ದಾರೆ. ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕು. ಮಕ್ಕಳು ಇಲ್ಲದೇ ಶಾಲೆ ಮುಚ್ಚಿದರೆ ಮತ್ತೆ ತೆರೆಯಲು ಕಷ್ಟವಾಗಲಿದೆ ಎಂದರು.
ವರ್ಗಾವಣೆಗೊಂಡು ಶಿಕ್ಷಕಿ ಮಧು, ಅಂಗನವಾಡಿ ಕಾರ್ಯಕರ್ತೆ ಅನುಪಮ,ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ, ಬಿಸಿಯೂಟ ತಯಾರಿಕೆಯವರದ ಮಂಗಳಮ್ಮ, ಸುಜಾತಾ, ಮಾಲಿನಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ರವಿ, ಗ್ರಾಪಂ ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಸುಜಾತಾ, ಎನ್.ಪಿ.ರಮೇಶ್, ಉಪೇಂದ್ರ, ಎಚ್.ಇ.ದಿವಾಕರ, ಕವಿತ, ದಾಮಿನಿ, ಎನ್.ಪಿ.ರವಿ, ಜಯಶ್ರೀ ಮೋಹನ್, ಲೋಲಾಕ್ಷಿ, ಮೋಹಿನಿ, ಮನೋಹರ್, ನಂಜುಂಡಪ್ಪ,ಇ.ಸಿ.ಓ ರಂಗಪ್ಪ, ಓಂಕಾರಪ್ಪ, ನಟರಾಜ್, ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net