

ಜರ್ಮನಿ: ಹ್ಯಾಕರ್ಸ್ಗಳಿಂದ ಹಣ ಕಳೆದುಕೊಳ್ಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಹ್ಯಾಕರ್ಸ್ನಿಂದಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪ್ರಸಂಗ ನಡೆದಿದೆ.
ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಜರ್ಮನಿಯ ಮಹಿಳೆಯೊಬ್ಬರನ್ನು ಅಲ್ಲಿನ ಡಸೆಲ್ಡಾರ್ಫ್ಸ್ ಯುನಿವರ್ಸಿಟಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿನ ಅನನುಕೂಲದಿಂದಾಗಿ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಗಿತ್ತು. ಹೀಗೆ 30 ಕಿ.ಮೀ. ದೂರದ ಬೇರೆ ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ದುರಂತವೆಂದರೆ ಆಕೆಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳಲು ಅನನುಕೂಲ ಉಂಟಾಗಲು ಕಾರಣ ಹ್ಯಾಕರ್ಸ್. ಆಸ್ಪತ್ರೆಯ ಸಿಸ್ಟಮ್ಸೆ. 10ರಂದು ಹ್ಯಾಕ್ ಆಗಿತ್ತು. ಸೆ. 11ರಂದು ಆಕೆಯನ್ನು ಆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹ್ಯಾಕ್ ಆಗಿದ್ದ ಪರಿಣಾಮ ಅಲ್ಲಿನ ಸಿಸ್ಟಮ್ ಡೌನ್ ಆಗಿದ್ದು, ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳಲು ಆಗಿರಲಿಲ್ಲ.
ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಸಾವಿಗೆ ಹ್ಯಾಕ್ ಆಗಿದ್ದೇ ಕಾರಣ ಎಂಬುದು ಸಾಬೀತಾದಲ್ಲಿ ಇದು ಸೈಬರ್ ಅಟ್ಯಾಕ್ನಿಂದ ಸಂಭವಿಸಿದ ಮೊದಲ ಸಾವು ಎಂದೆನಿಸಿಕೊಳ್ಳಲಿದೆ ಎಂಬುದು ಮೂಲಗಳ ಮಾಹಿತಿ. (ಏಜೆನ್ಸೀಸ್)