

ಬಳ್ಳಾರಿ: ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾರನ್ನು ಯಾವ ಕಾರಣಕ್ಕೂ ಬಿಡಬೇಡಿ. ಹಾಗೊಮ್ಮೆ ಅವರನ್ನು ಜೈಲಿನಿಂದ ಬಿಟ್ಟರೆ ನಾವೇ ಎನ್ಕೌಂಟರ್ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖಂಡ ಸಂಜೀವ್ ಮರಡಿ ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಹೇಳಿಕೆ ನೀಡುವುದು, ಪಾಕಿಸ್ತಾನಕ್ಕೆ ಜೈಕಾರ ಕೂಗುವುದು ಕೆಟ್ಟ ವೈರಸ್ ಆಗಿದೆ. ಕ್ಯಾನ್ಸರ್ನಂತೆ ಹಬ್ಬುತ್ತಿದೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮೂರು ಮಂದಿ ಕೂಗಿದರು. ಈಗ ಅಮೂಲ್ಯಾ ಎಂಬುವಳು ಕೂಗಿದ್ದಾಳೆ.
ಈಗ ಜೈಲುಪಾಲಾಗಿರುವ ಅಮೂಲ್ಯಾಳನ್ನು ಯಾವ ಕಾರಣಕ್ಕೂ ಜಾಮೀನಿನ ಆಧಾರದಲ್ಲಿ ಹೊರಗೆ ಬಿಡಬೇಡಿ ಎಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಹಾಗೊಮ್ಮೆ ಬಿಟ್ಟರೆ ನಾವೇ ಎನ್ಕೌಂಟರ್ ಮಾಡುತ್ತೇವೆ. ಬೇರೆ ಯಾರಾದರೂ ಮಾಡಿದರೆ ಅವರಿಗೆ 10 ಲಕ್ಷ ರೂಪಾಯಿಯನ್ನು ಶ್ರೀರಾಮಸೇನೆಯಿಂದ ನೀಡುತ್ತೇವೆ ಎಂದು ಘೋಷಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. (ದಿಗ್ವಿಜಯ ನ್ಯೂಸ್)