

ನವದೆಹಲಿ: ಆಧಾರ್ ಕಾರ್ಡ್ ದಾಖಲೆ ಮೇಲೆ ತಕ್ಷಣ ಇ-ಪ್ಯಾನ್ ಕಾರ್ಡನ್ನು ಆನ್ಲೈನ್ ಮೂಲಕ ವಿತರಿಸುವ ಯೋಜನೆ ಈ ತಿಂಗಳಲ್ಲಿ ಆರಂಭವಾಗಲಿದೆ ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅಗತ್ಯ ಇಲ್ಲ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆಯನ್ನು 2020-21ರ ಬಜೆಟ್ನಲ್ಲಿ ಘೋಷಿಸಲಾಗಿದ್ದು, ಇದು ಫೆಬ್ರವರಿಯಿಂದಲೇ ಜಾರಿಗೊಳ್ಳಲಿದೆ ಎಂದಿದ್ದಾರೆ.
ಆಸಕ್ತರು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಕಲ್ಪಿಸಿರುವ ಆಯ್ಕೆಯಲ್ಲಿ ಆಧಾರ್ ಸಂಖ್ಯೆ ನಮೂಸಿದರೆ ಆಧಾರ್ಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಒಮ್ಮೆ ಬಳಸುವ ಪಾಸ್ವರ್ಡ್ (ಒಟಿಪಿ) ಬರುತ್ತದೆ. ಅದನ್ನು ನಮೂಸಿದರೆ ಇ-ಪ್ಯಾನ್ ಆ ಕ್ಷಣಕ್ಕೆ ದೊರೆಯುತ್ತದೆ ಎಂದು ಪಾಂಡೆ ವಿವರಿಸಿದ್ದಾರೆ.