ICSI CS Result 2023: ಸಿಎಸ್ ಪ್ರೊಫೆಷನಲ್ ಪರೀಕ್ಷೆ ಫಲಿತಾಂಶ ಪ್ರಕಟ, ಅಗ್ರ ಸ್ಥಾನದಲ್ಲಿ ರಾಶಿ ಅಮೃತ್ ಪರಾಖ್, ಟಾಪರ್‌ಗಳ ವಿವರ ಇಲ್ಲಿದೆ ನೋಡಿ…

icsi (1)
Published on

ICSI CS Result 2023: ಸಿಎಸ್ ಪ್ರೊಫೆಷನಲ್ ಜೂನ್ 2023 ರ ಪರೀಕ್ಷೆಯ ಫಲಿತಾಂಶವನ್ನು ಐಎಸಿಎಸ್ಐ(ICSI) ಪ್ರಕಟಿಸಿದೆ. ಜೂನ್ 2023 ಸೆಷನ್‌ಗಾಗಿ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ನಡೆಸಿದ ಪ್ರೊಫೆಷನಲ್ ಮತ್ತು ಎಕ್ಸಿಕ್ಯೂಟಿವ್ ಕೋರ್ಸ್ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ಪ್ರಕಟಿಸಲಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಸಿಎಸ್ ಪ್ರೊಫೆಷನಲ್ ಕೋರ್ಸ್ ಫಲಿತಾಂಶವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಬೇಕಿತ್ತು. ಅಲ್ಲದೆ, ಸಂಸ್ಥೆಯು ತಿಳಿಸಿದಂತೆ ರಾಶಿ ಅಮೃತ್ ಪರಾಖ್ ವೃತ್ತಿಪರ ಕೋರ್ಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಎಕ್ಸಿಕ್ಯೂಟಿವ್ ಕೋರ್ಸ್ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆಗೆ ಘೋಷಿಸಲಾಗುತ್ತದೆ.

ICSI CS ಫಲಿತಾಂಶ 2023: ಟಾಪ್ 10 ವಿದ್ಯಾರ್ಥಿಗಳು

ರಾಶಿ ಅಮೃತ್ ಪರಾಖ್

ಜೆನ್ನಿ ಡಿಪೆನ್ ಪಂಚಮತಿಯಾ

ಮಾನ್ಯ ಶ್ರೀವಾಸ್ತವ

ನಿರಾಲಿ ಲಖುಭಾಯಿ ಚಾವಡಾ

ಕೃಷ್ಣ ಕುಮಾರಿ ಪಾಲ್

ದೋಧಿಯಾ ಮೊಹಮ್ಮದ್ ಶೇಜಾನ್ ಶಬ್ಬೀರ್ ಅಲಿ

ರಜನಿ ರಾಜೇಂದ್ರ ಝಾ

ರಿತಿಕಾ

ಅಂಶಿಕಾ ಪಾಲ್

ಆರ್ಯ ಸಂದೀಪ್ ನಗರ್ಕರ್ / ಪಾಲಕ್ ರೈ

ಫಲಿತಾಂಶ ಪರಿಶೀಲಿಸುವುದು ಹೇಗೆ?

ಈ ಕೋರ್ಸ್‌ಗಳಿಗೆ ಜೂನ್ 2023 ರಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ICSI CS ಫಲಿತಾಂಶ 2023 ಅನ್ನು ಅಧಿಕೃತ ವೆಬ್‌ಸೈಟ್ icsi.edu ನಲ್ಲಿ ಲಿಂಕ್ ಮೂಲಕ ಪರಿಶೀಲಿಸಬಹುದು. ನೋಂದಣಿ ಸಂಖ್ಯೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಮತ್ತು ಸ್ಕೋರ್ ಕಾರ್ಡ್ ಅನ್ನು ಪರದೆಯ ಮೇಲೆ ನೋಡಲು ಸಾಧ್ಯವಾಗುತ್ತದೆ. ಅದರ ಪ್ರಿಂಟ್ ತೆಗೆದುಕೊಂಡ ನಂತರ ವಿದ್ಯಾರ್ಥಿಗಳು ಸಾಫ್ಟ್ ಕಾಪಿಯನ್ನೂ ಸೇವ್ ಮಾಡಬೇಕು.

ಮಾರ್ಕ್‌ಶೀಟ್ ಪಡೆಯುವುದು ಹೇಗೆ?

ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾರ್ಕ್‌ಶೀಟ್ ನೀಡಲಾಗುತ್ತದೆ. ಸಂಸ್ಥೆಯ ಅಧಿಸೂಚನೆಯ ಪ್ರಕಾರ, ಅಧಿಕೃತ ವೆಬ್‌ಸೈಟ್ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮತ್ತೊಂದೆಡೆ, ರಿಸಲ್ಟ್-ಕಮ್-ಮಾರ್ಕ್‌ಶೀಟ್‌ನ ಹಾರ್ಡ್‌ಕಾಪಿಯನ್ನು ವಿದ್ಯಾರ್ಥಿಗಳಿಗೆ ಅವರ ನೋಂದಾಯಿತ ವಿಳಾಸದಲ್ಲಿ ICSI ಕಳುಹಿಸುತ್ತದೆ. ವಿದ್ಯಾರ್ಥಿಯು 30 ದಿನಗಳೊಳಗೆ ಅಂಕಪಟ್ಟಿಯನ್ನು ಸ್ವೀಕರಿಸದಿದ್ದರೆ, ಸಂಸ್ಥೆಯು ನೀಡಿದ ಇಮೇಲ್ ಐಡಿಗೆ exam@icsi.edu ಗೆ ಮೇಲ್ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net