ಬೆಳಗಾವಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ: ವಿವಿಧ ಹುದ್ದೆಗಳ ನೇಮಕಾತಿಗೆ ಆಹ್ವಾನ

ICMR National Institute of Traditional Medicine Belagavi
Published on

ಬೆಳಗಾವಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಇಂಟ್ರಾಮುರಲ್​ ಸಂಶೋಧನಾ ಪ್ರಾಜೆಕ್ಟ್​ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳನ್ನು ಸಂಪೂರ್ಣವಾಗಿ 2 ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಪ್ರಾಜೆಕ್ಟ್​ ಅವಧಿ ಹಾಗೂ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಅವಧಿ ವಿಸ್ತರಿಸಬಹುದು.

ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ, ರಿಸರ್ಚ್​ ಅಸೋಸಿಯೇಟ್​- ಐ, ಸೀನಿಯರ್​ ರಿಸರ್ಚ್​ ಫೆಲೊ, ಟೆಕ್ನಿಷಿಯನ್​/ಫೀಲ್ಡ್​ ಅಸಿಸ್ಟೆಂಟ್​, ಲ್ಯಾಬ್​ ಟೆಕ್ನಿಷಿಯನ್​/ಎಕ್ಸ್​ ರೇ ಟೆಕ್ನಿಷಿಯನ್​ ಹುದ್ದೆಗಳು ಖಾಲಿಯಿದ್ದು, ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ/ಪಿಯುಸಿ ವ್ಯಾಸಂಗ ಮಾಡಿರುವವರು ಅರ್ಜಿ ಸಲ್ಲಿಸಲು ಅರ್ಹರು. 47,000 -17,000 ರೂ. ಮಾಸಿಕ ವೇತನದೊಂದಿಗೆ ಸಂಸ್ಥೆಯ ನಿಯಮಾನುಸಾರ ಇತರ ಭತ್ಯೆ ಇರಲಿದೆ.

ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಳಗಾವಿ ಅಥವಾ ಕಲಬುರಗಿ ಜಿಲ್ಲೆಗೆ ಪೋಸ್ಟ್​ ಮಾಡಲಾಗುವುದು. ನೇಮಕಾತಿಯು ಪ್ರಾಜೆಕ್ಟ್​ ಅವಶ್ಯಕತೆಯನ್ನು ಅವಲಂಬಿಸಿರುತ್ತದೆ. ಕನಿಷ್ಠ 28 ಹಾಗೂ ಗರಿಷ್ಠ 35 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅಧಿಕೃತ ವೆಬ್​ಸೈಟ್​ನಿಂದ ಅರ್ಜಿ ನಮೂನೆ ಡೌನ್​ಲೋಡ್​ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ The Director, ICMR-National Institute of Traditional Medicine, Nehru Nagar, Belagavi-590010 ಇಲ್ಲಿಗೆ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 21.12.2022

ಅಧಿಸೂಚನೆಗೆ: https://bit.ly/3XRZQwD

ಮಾಹಿತಿಗಾಗಿ: https://icmrnitm.res.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net