ವಿದ್ಯಾರ್ಥಿಗಳ ಹಠಾತ್ ಸಾವು, ಐಸಿಎಂಆರ್ ಅಧ್ಯಯನ: ನಿರ್ದಿಷ್ಟ ಕಾರಣ ಇಲ್ಲದೆ ಹಠಾತ್ ಮರಣ ಏಕೆ?; ಕಾರಣ ಕಂಡುಕೊಳ್ಳಲು ನಡೆಯುತ್ತಿದೆ ಸಂಶೋಧನೆ

Heart Attack (4)
Published on

ಗಾಂಧಿನಗರ: ಕೋವಿಡ್ ಸಾಂಕ್ರಾಮಿಕದ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿರುವ ‘ಹಠಾತ್ ಸಾವು ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎರಡು ಅಧ್ಯಯನ ನಡೆಸುತ್ತಿದೆ. 18ರಿಂದ 45 ವರ್ಷದೊಳಗಿನವರಲ್ಲಿ ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ಹಠಾತ್ ಸಾವು’ ಏಕೆ ಸಂಭವಿಸುತ್ತಿದೆ ಎಂಬುದನ್ನು ತಿಳಿಯಲು ಈ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ ಹೇಳಿದ್ದಾರೆ.

ಈ ಅಧ್ಯಯನದಿಂದ ಕೋವಿಡ್ ನಂತರದ ಏಕಾಏಕಿ ಪರಿಣಾಮದ ಕುರಿತು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ವ್ಯಕ್ತವಾಗುವ ಅಂಶದಿಂದ ಈ ರೀತಿಯ ‘ಹಠಾತ್ ಸಾವು’ ಉಂಟಾಗುವುದನ್ನು ತಡೆಯಲು ಏನಾದರೂ ಮಾಗೋಪಾಯ ಕಂಡುಹಿಡಿಯಲು ಸಾಧ್ಯ ಎಂದು ಅವರು ಗಾಂಧಿನಗರದಲ್ಲಿ ನಡೆಯುತ್ತಿರುವ ಡಬ್ಲ್ಯೂಎಚ್​ಒ ಜಾಗತಿಕ ಸಾಂಪ್ರದಾಯಕ ಔಷಧ ಶೃಂಗ (ಜಿಸಿಟಿಎಂ)ದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಏಮ್್ಸ)ನಲ್ಲಿ ಹಠಾತ್ ಸಾವು ಸಂಭವಿಸಿದ ವಿದ್ಯಾರ್ಥಿಗಳ 50 ಶವಗಳ ಮರಣೋತ್ತರ ಪರೀಕ್ಷೆಯನ್ನು ಐಸಿಎಂಆರ್ ಕೂಲಂಕಷ ಅಧ್ಯಯನ ಮಾಡುತ್ತಿದ್ದು, ಯಾವುದೇ ಇತರ ಆರೋಗ್ಯ ಸಮಸ್ಯೆಗಳು ಇಲ್ಲದ ಯುವ ಸಮುದಾಯದಲ್ಲಿ ಈ ರೀತಿ ಸಾವು ಉಂಟಾಗಲು ಕಾರಣ ಏನು ಎಂಬುದರ ಬಗ್ಗೆ ತಲರ್ಸ³ ಸಂಶೋಧನೆ ನಡೆಸುತ್ತಿದೆ.

ಡಬ್ಲ್ಯುಎಚ್​ಒ ಮುಖ್ಯಸ್ಥರ ಮುಕ್ತ ಶ್ಲಾಘನೆ

ಗಾಂಧಿನಗರ: ಭಾರತದ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಶ್ಲಾಘಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನೊಮ್ ಘಬ್ರೆಯೆಸಸ್, ಇದು ವಿಶ್ವದಲ್ಲೇ ಅತಿದೊಡ್ಡ ಮತ್ತು ಸುಧಾರಿತ ಆರೋಗ್ಯ ಸೇವೆ ಎಂದಿದ್ದಾರೆ. ಜಿ-20 ದೇಶಗಳ ಆರೋಗ್ಯ ಸಚಿವರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ ಸರ್ಕಾರದ ಟೆಲಿಮೆಡಿಸಿನ್ ಸೇವೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಂಧಿನಗರಕ್ಕೆ ಈ ಹಿಂದೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದ ಉದ್ಘಾಟನೆಗೆ ಆಗಮಿಸಿದ್ದನ್ನು ಸ್ಮರಿಸಿದ ಅವರು, ಎಚ್​ಡಬ್ಲ್ಯೂಸಿ ಮೂಲಕ ಒಂದು ಸಾವಿರ ಕುಟುಂಬಗಳಿಗೆ ಪ್ರಾಥಮಿಕ ಆರೋಗ್ಯ ಸೇವೆ ನೀಡುತ್ತಿರುವುದನ್ನು ತಿಳಿದು ಆಶ್ಚರ್ಯ ಚಕಿತನಾಗಿದ್ದೇನೆ ಎಂದು ಹೇಳಿದರು. ಭಾರತದ ಆರೋಗ್ಯ ಕ್ಷೇತ್ರದ ಪರಿರ್ವತನೆಯು ಈ ವಲಯದ ಡಿಜಿಲಟ್ ಬದಲಾವಣೆಗೆ ಅದ್ಭುತ ಮಾದರಿಯಾಗಿದೆ. ಜಿ-20 ಅಧ್ಯಕ್ಷತೆ ವಹಿಸಿರುವ ಭಾರತ, ಜಾಗತಿಕ ಡಿಜಿಟಲ್ ಆರೋಗ್ಯ ಉಪಕ್ರಮಕ್ಕೆ ಚಾಲನೆ ನೀಡುತ್ತಿರುವುದಕ್ಕೆ ಧನ್ಯವಾದ ಎಂದರು. ಮೂರು ದಿನ ನಡೆಯುವ ಆರೋಗ್ಯ ಸಚಿವರ ಈ ಸಮ್ಮೇಳನದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸೇರಿ ವಿವಿಧ ದೇಶಗಳ 70ಕ್ಕೂ ಹೆಚ್ಚು ಗಣ್ಯರು ಭಾಗಿಯಾಗಿದ್ದಾರೆ.

ಲ್ಯಾಬ್ ಮಾಲೀಕನಿಗೆ ಜೈಲು

ಹ್ಯೂಸ್ಟನ್: ವಂಶವಾಹಿ ಪರೀಕ್ಷೆ ಹಗರಣದ ಸಂಬಂಧ ಪ್ರಯೋಗಾಲಯಾದ ಮಾಲೀಕ ಭಾರತ ಮೂಲದ ಮಿನಾಲ್ ಪಟೇಲ್​ಗೆ (44) ಕೋರ್ಟ್ 27 ವರ್ಷ ಸಜೆ ವಿಧಿಸಿದೆ. ಜಾರ್ಜಿಯಾ ರಾಜ್ಯದಲ್ಲಿರುವ ಅವರ ಲ್ಯಾಬ್​ಸೆಲ್ಯೂಷನ್ ಎಲ್​ಎಲ್​ಸಿ ಪ್ರಯೋಗಾಲಯದಲ್ಲಿ ಮೂರು ವರ್ಷದಿಂದ ವಂಶವಾಹಿ ಪರೀಕ್ಷೆ ನಡೆಸಲಾಗುತ್ತಿತ್ತು. ಈ ಹಗರಣ ಮೊತ್ತ 463 ಮಿಲಿಯನ್ ಡಾಲರ್ (3,850 ಕೋಟಿ ರೂ.) ಎನ್ನಲಾಗಿದೆ. ರೋಗಿಗಳಿಗೆ ವಂಶವಾಹಿ ಮತ್ತು ಇನ್ನಿತರ ಪರೀಕ್ಷೆಗಳು ಅಗತ್ಯ ಇರದಿದ್ದರೂ ಮಾಡಲಾಗುತ್ತಿತ್ತು. ಈ ರೀತಿಯ ಪರೀಕ್ಷೆಗೆ ಶಿಫಾರಸು ಮಾಡಲು ವೈದ್ಯರಿಗೆ ಲ್ಯಾಬ್ ಕಿಕ್​ಬ್ಯಾಕ್ (ಲಂಚ) ನೀಡಲಾಗುತ್ತಿತ್ತು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಮೆಡಿಕೇರ್ (ಆರೋಗ್ಯ ವಿಮೆ) ಫಲಾನುಭವಿಗಳ ಆರೋಗ್ಯ ಬಿಲ್ ಅಧಿಕವಾಗಿದೆ. ವಿಶೇಷವಾಗಿ ಕ್ಯಾನ್ಸರ್ ಮತ್ತು ವಂಶವಾಹಿಗೆ ಸಂಬಂಧಿಸಿದ ಪರೀಕ್ಷೆಗಳ ಬಿಲ್ ದೊಡ್ಡ ಮಟ್ಟದಲ್ಲಿ ಕ್ಲೇಮ್ೆ ಬರುತ್ತಿವೆ ಎಂಬ ದೂರುಗಳು ನ್ಯಾಯಾಂಗ ಇಲಾಖೆಗೆ ಬರತೊಡಗಿದವು. ಟೆಲಿಮಿಡಿಸಿನ್ ಕಂಪನಿಗಳು ಮತ್ತು ಕಾಲ್​ಸೆಂಟರ್​ಗಳು ಇದರಲ್ಲಿ ಭಾಗಿಯಾಗಿವೆ ಎಂಬ ಶಂಕೆ ವ್ಯಕ್ತವಾಯಿತು. ಇದರ ತನಿಖೆ ನಡೆಸಿದಾಗ ಪಟೇಲ್ ಅವರ ಲ್ಯಾಬ್ ಈ ರೀತಿಯ ಅಕ್ರಮದಲ್ಲಿ ತೊಡಗಿದೆ ಎಂಬುದು ಪತ್ತೆಯಾಯಿತು. ಟೆಲಿಮೆಡಿಸಿನ್ ಕಂಪನಿಗಳು ದಲ್ಲಾಳಿಗಳ ಮೂಲಕ ವೈದ್ಯರ ಶಿಫಾರಸು ಪಡೆದು ರೋಗಿಗಳ ಪೆಥಾಲಜಿ ಪರೀಕ್ಷೆಗಳನ್ನು ನಡೆಸುತ್ತಿತ್ತು. ಇದಕ್ಕಾಗಿ ಅವುಗಳಿಗೆ ಮತ್ತು ವೈದ್ಯರಿಗೆ ಪಟೇಲ್ ಅವರ ಲ್ಯಾಬ್​ನಿಂದ ಕಿಕ್​ಬ್ಯಾಕ್ ಪಾವತಿ ಆಗುತ್ತಿತ್ತು ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net