

ಬೆಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಆಗಸ್ಟ್ 01 ರಂದು ಪ್ರೊಬೇಷನರಿ ಆಫೀಸರ್ಸ್ ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 3049 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಆಗಸ್ಟ್ 21 ಕೊನೆಯ ದಿನಾಂಕವಾಗಿದೆ.
IBPS PO ರಾಷ್ಟ್ರೀಯ ಮಟ್ಟದ ನೇಮಕಾತಿ ಪರೀಕ್ಷೆಯಾಗಿದ್ದು, ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದೆ. IBPS ಪರೀಕ್ಷೆಯ ಕ್ಯಾಲೆಂಡರ್ 2023 ರ ಪ್ರಕಾರ, ಪೂರ್ವಭಾವಿ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆನ್‌ಲೈನ್ ಪರೀಕ್ಷೆಯ ಮೊದಲ ಹಂತವನ್ನು ಸೆಪ್ಟೆಂಬರ್ 23 ರಿಂದ 30 ರ ನಡುವೆ ನಡೆಸಲಾಗುವುದು ಮತ್ತು ಎರಡನೇ ಹಂತವನ್ನು ಅಕ್ಟೋಬರ್ 01 ರಂದು ನಡೆಸಲಾಗುವುದು. ಪ್ರವೇಶ ಪತ್ರ ಬಿಡುಗಡೆಯೊಂದಿಗೆ ಪರೀಕ್ಷೆಯ ದಿನಾಂಕವನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರಕಟಿಸಲಾಗುತ್ತದೆ.
ಪ್ರಮುಖ ದಿನಾಂಕಗಳು
IBPS PO ಅಧಿಸೂಚನೆ 2023- ಜುಲೈ 31, 2023
ಆನ್‌ಲೈನ್ ನೋಂದಣಿ ಪ್ರಾರಂಭ- ಆಗಸ್ಟ್ 01, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 21, 2023
ಅಪ್ಲಿಕೇಶನ್ ಎಡಿಟ್ ಮಾಡಲು ಕೊನೆಯ ದಿನಾಂಕ-ಆಗಸ್ಟ್ 21, 2023
ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ- ಆಗಸ್ಟ್ 01 ರಿಂದ 21, 2023
ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ-ಸೆಪ್ಟೆಂಬರ್ 5, 2023
ಬ್ಯಾಂಕ್ವಾರು ಹುದ್ದೆಗಳಿಗಾಗಿ ಕೆಳಗಿನ ಕೋಷ್ಟಕ ಪರಿಶೀಲಿಸಿ
ಬ್ಯಾಂಕ್ ಆಫ್ ಬರೋಡಾ-224
ಬ್ಯಾಂಕ್ ಆಫ್ ಇಂಡಿಯಾ-NR
ಬ್ಯಾಂಕ್ ಆಫ್ ಮಹಾರಾಷ್ಟ್ರ-NR
ಕೆನರಾ ಬ್ಯಾಂಕ್-500
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ-2000
ಇಂಡಿಯನ್ ಬ್ಯಾಂಕ್-NR
ಇಂಡಿಯನ್ ಓವರ್ಸೀಸ್ ಬ್ಯಾಂಕ್-NR
ಪಂಜಾಬ್ & ಸಿಂಧ್ ಬ್ಯಾಂಕ್-125
ಪಂಜಾಬ್ ನ್ಯಾಷನಲ್ ಬ್ಯಾಂಕ್-200
UCO ಬ್ಯಾಂಕ್-NR
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ-NR
ಒಟ್ಟು-3049
ವಯಸ್ಸಿನ ಮಿತಿ: ಅಭ್ಯರ್ಥಿಯು 02.08.1992 ಕ್ಕಿಂತ ಮೊದಲು ಮತ್ತು 01.08.2002 ಕ್ಕಿಂತ ನಂತರ (ಎರಡೂ ದಿನಾಂಕಗಳನ್ನು ಒಳಗೊಂಡಂತೆ) ಜನಿಸಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ ವರ್ಗವಾರು ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯಿದೆ. ಕನಿಷ್ಠ 20, ಗರಿಷ್ಠ 30 ವರ್ಷ ವಯಸ್ಸಿನ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾನ್ಯವಾದ ಅಂಕಪತ್ರ/ ಪದವಿ ಪ್ರಮಾಣಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ನಮೂನೆಯನ್ನು ibps.inಗೆ ಹೋಗಿ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ IBPS PO ಕೈಬರಹದ ಘೋಷಣೆಯನ್ನು ಅಪ್‌ಲೋಡ್ ಮಾಡಬೇಕು. IBPS PO ಅಪ್ಲಿಕೇಶನ್ ಲಿಂಕ್ ಅನ್ನು ಸಕ್ರಿಯಗೊಳಿಸಲಾಗಿದ್ದು, ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಲು ಸೂಚಿಸಲಾಗಿದೆ.
ಅರ್ಜಿ ಶುಲ್ಕ
SC/ST/PWD: 175 ರೂ.(ಇಂಟಿಮೇಶನ್ ಶುಲ್ಕ ಮಾತ್ರ)
ಸಾಮಾನ್ಯ ಮತ್ತು ಇತರರು: 850 ರೂ.
ಹೆಚ್ಚಿನ ಮಾಹಿತಿಗಾಗಿ: ibps.in