ಅವಧಿ ಮೀರಿ ಸರ್ಕಾರಿ ಬಂಗಲೆಯಲ್ಲಿ ವಾಸ; IAS ಅಧಿಕಾರಿಗೆ 1.63 ಕೋಟಿ ರೂ. ದಂಡ!

Untitled design - 2025-10-08T111034.210
Published on

ಅವಧಿ ಮೀರಿ ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡಿದ್ದಕ್ಕಾಗಿ ಭಾರತೀಯ ಆಡಳಿತ ಅಧಿಕಾರಿ (IAS​)ಗೆ 1.63 ಕೋಟಿ ರೂ. ದಂಡ ವಿಧಿಸಿಸಲಾಗಿದೆ ಎಂದು ಬುಧವಾರ ವರದಿಯಾಗಿದೆ.

ನವದೆಹಲಿಯಲ್ಲಿರುವ ಅಧಿಕೃತ ಬಂಗಲೆಯಲ್ಲಿ ಉತ್ತರ ಪ್ರದೇಶದಲ್ಲಿ ನಿಯೋಜಿಸಲಾದ ದುರ್ಗಾ ಶಕ್ತಿ ನಾಗ್ಪಾಲ್ ಎಂಬ ಐಎಎಸ್​ ಅಧಿಕಾರಿಗೆ ಈ ದಂಡ ವಿಧಿಸಿಲಾಗಿದೆ.

ಪ್ರಸ್ತುತ ಲಖಿಂಪುರ ಖೇರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರು ವದುರ್ಗಾ ಶಕ್ತಿ ನಾಗ್ಪಾಲ್, ತನ್ನ ಹೆತ್ತವರ ಅನಾರೋಗ್ಯದ ಕಾರಣ ವಿಸ್ತರಣೆಗಳನ್ನು ಕೋರಿದ್ದಾಗಿ ಮತ್ತು ದಂಡದ ಆರೋಪಗಳನ್ನು ಮನ್ನಾ ಮಾಡುವಂತೆ ಕೋರಿದ್ದಾಗಿ ವರದಿ ಉಲ್ಲೇಖಿಸಿದೆ.

ನೋಟಿಸ್​ ನೀಡಿದ್ದು ಯಾರು?

ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್ಪಾಲ್ ಅವರಿಗೆ 2022 ಮೇ ಯಿಂದ 2025ರ ಫೆಬ್ರವರಿ ನಡುವೆ ದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿರುವ ಅಧಿಕೃತ ಬಂಗಲೆಯನ್ನು ಅನಧಿಕೃತವಾಗಿ ವಾಸ ಮಾಡಿದಕ್ಕಾಗಿ ಕೇಂದ್ರ ಕೃಷಿ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) 1.63 ಕೋಟಿ ರೂ. ಪರಿಹಾರ ಕೋರಿ ನೋಟಿಸ್ ನೀಡಿದೆ.

2010ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ನಾಗ್ಪಾಲ್, ಆಗಿನ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರ ಬಳಿ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ (ಒಎಸ್‌ಡಿ) ಆಗಿ ಸೇರಿದ್ದರು. ಕೃಷಿ ಸಚಿವಾಲಯದಲ್ಲಿ ನಾಗಪಾಲ್ ಅವರ ನಿಯೋಜನೆಯು 2019 ಮೇ.7 ರಂದು ಕೊನೆಗೊಂಡಿತು. ಆದರೆ, ಅವರು ವಾಣಿಜ್ಯ ಸಚಿವಾಲಯದಲ್ಲಿ ಕೆಲಸ ಮಾಡುತ್ತಾ ಬಂಗಲೆಯಲ್ಲಿ ವಾಸಿಸುವುದನ್ನು ಮುಂದುವರೆಸಿದರು. ಆಸ್ತಿಯನ್ನು ಮರಳಿ ಪಡೆಯಲು ಐಎಆರ್ಐ ದೆಹಲಿ ಪೊಲೀಸರ ಸಹಾಯವನ್ನು ಕೋರಿದ ನಂತರ ಅವರು ಫೆಬ್ರವರಿ 2025 ರಲ್ಲಿ ಮನೆಯನ್ನು ಖಾಲಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net