ಪಾಕ್ ಗಡಿಯಲ್ಲಿ ತೇಜಸ್ ಕಾವಲು: ಬೆಂಗಳೂರಿನ ಎಚ್​ಎಎಲ್ ತಯಾರಿಸಿದ ವಿಮಾನ

Tejus 1
Published on

ನವದೆಹಲಿ: ಲಡಾಖ್​ನಲ್ಲಿ ಚೀನಾ ಜೊತೆಗಿನ ಗಡಿ ಉದ್ವಿಗ್ನತೆ ನಡುವೆಯೇ, ಪಾಕಿಸ್ತಾನ ಗಡಿಯಲ್ಲಿ ದೇಶೀಯ ನಿರ್ವಿುತ ಲಘು ಸಮರ ವಿಮಾನ (ಎಲ್​ಸಿಎ) ‘ತೇಜಸ್’ ನಿಯೋಜಿಸಲಾಗಿದೆ. ಪಾಕಿಸ್ತಾನ ಗಡಿ ಸಮೀಪದ ಪಶ್ಚಿಮ ವಿಭಾಗದಲ್ಲಿ ತೇಜಸ್ ವಿಮಾನವನ್ನು ಭಾರತೀಯ ವಾಯುಪಡೆ (ಐಎಎಫ್) ನಿಯೋಜಿಸಿದೆ. ಆ ಭಾಗದಲ್ಲಿ ವೈರಿಗಳ ಸಂಭಾವ್ಯ ದಾಳಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ವಾಯು ಕಮಾಂಡ್​ನ ಸೂಲೂರಿನಿಂದ ಮೊದಲ ತೇಜಸ್ ಸ್ಕಾ್ವಡ್ರನ್ (ಫ್ಲೈಯಿಂಗ್ ಡ್ಯಾಗರ್ಸ್) ಪಾಕ್ ಗಡಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ವಿಮಾನಗಳ ಪ್ರಥಮ ಸ್ಕಾ್ವಡ್ರನ್ ಇನಿಷಿಯಲ್ ಆಪರೇಷನಲ್ ಕ್ಲಿಯರೆನ್ಸ್ ಆವೃತ್ತಿಯದ್ದಾಗಿದೆ. ‘ಫ್ಲೈಯಿಂಗ್ ಬುಲೆಟ್ಸ್’ ಎರಡನೇ ಸ್ಕಾ್ವಡ್ರನ್ 18 ವಿಮಾನಗಳು ಅಂತಿಮ ಆಪರೇಷನಲ್ ಕ್ಲಿಯರೆನ್ಸ್ ಆವೃತ್ತಿಯದ್ದು. ಅವುಗಳಿಗೆ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಸೂಲೂರು ವಾಯುನೆಲೆಯಲ್ಲಿ ಮೇ 27ರಂದು ಚಾಲನೆ ನೀಡಿದ್ದರು. ಇತ್ತೀಚೆಗೆ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಜತೆಗಿನ ಘರ್ಷಣೆ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಭಾರತೀಯ ವಾಯುಪಡೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ದೇಶೀಯ ತೇಜಸ್ ವಿಮಾನದ ಸಾಮರ್ಥ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೆಂಗಳೂರು ಮೂಲದ ಎಚ್​ಎಎಲ್ ಈ ವಿಮಾನಗಳನ್ನು ತಯಾರಿಸಿದೆ. 83 ಮಾರ್ಕ್1ಎ ವಿಮಾನಗಳನ್ನು ಖರೀದಿಸುವ ಒಡಂಬಡಿಕೆಯನ್ನು ವಾಯುಪಡೆ ಮತ್ತು ರಕ್ಷಣಾ ಸಚಿವಾಲಯ ಈ ವರ್ಷಾಂತ್ಯದೊಳಗೆ ಅಂತಿಮಗೊಳಿಸಲಿವೆ.

ಎಚ್​ಎಎಲ್ ತೇಜಸ್

  • ಏಕ ಎಂಜಿನ್, 4ನೇ ತಲೆಮಾರಿನ ಲಘುಸಮರ ವಿಮಾನ ಇದಾಗಿದೆ.
  • ಹಿಂದುಸ್ತಾನ್ ಏರೋನಾಟಿಕ್ಸ್​ನ (ಎಚ್​ಎಎಲ್) ವಿಮಾನ ಸಂಶೋಧನಾ ಮತ್ತು ವಿನ್ಯಾಸ ಕೇಂದ್ರದ (ಎಆರ್​ಡಿಸಿ) ಸಹಯೋಗದಲ್ಲಿ ವೈಮಾನಿಕ ಅಭಿವೃಧಿ ಸಂಸ್ಥೆ (ಎಡಿಎ) ಇದನ್ನು ವಿನ್ಯಾಸಗೊಳಿಸಿದೆ. ವಾಯುಪಡೆ ಮತ್ತು ನೌಕಾಪಡೆಗಾಗಿ ಇದನ್ನು ರೂಪಿಸಲಾಗಿದೆ.
  • ಮಿಗ್-21 ಸಮರ ವಿಮಾನದ ಸ್ಥಾನ ತುಂಬಲು 80ರ ದಶಕದಲ್ಲಿ ಎಲ್​ಸಿಎ ಅಭಿವೃದ್ಧಿ ಆರಂಭಿಸಲಾಗಿತ್ತು. 2003ರಲ್ಲಿ ಅದಕ್ಕೆ ‘ತೇಜಸ್’ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಯಿತು.
  • ಎಚ್​ಎಫ್-24 ಮಾರುತ್ ನಂತರ ಎಚ್​ಎಎಲ್ ಅಭಿವೃದ್ಧಿಪಡಿಸಿದ ಎರಡನೇ ಸೂಪರ್​ಸಾನಿಕ್ ಯುದ್ಧ ವಿಮಾನ ಇದಾಗಿದೆ, ವಿವಿಧ ಬಗೆಯ 324 ತೇಜಸ್ ವಿಮಾನಗಳ ನಿರ್ಮಾಣ ಗುರಿ ಹೊಂದಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net