

Volodymyr Zelenskyy: ರಷ್ಯಾದೊಂದಿಗಿನ ಯುದ್ಧ ಕೊನೆಗೊಂಡ ನಂತರ ನಾನು ಹುದ್ದೆಯಿಂದ ಕೆಳಗಿಳಿಯಲು ಸಿದ್ಧರಿರುವುದಾಗಿ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಅಲ್ಲದೆ, ಮತ್ತೊಂದು ಅವಧಿಗೆ ಅಧಿಕಾರ ವಹಿಸಿಕೊಳ್ಳುವ ಬದಲು ಸಂಘರ್ಷವನ್ನು ಕೊನೆಗೊಳಿಸುವುದು ನನ್ನ ಆದ್ಯತೆಯಾಗಿದೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ರಷ್ಯಾಗೆ ಶಾಂತಿಯಲ್ಲಿ ಆಸಕ್ತಿ ಇಲ್ಲ ಎಂದು ಹೇಳುವ ಮೂಲಕ ಕದನ ವಿರಾಮದ ಸಾಧ್ಯತೆಯನ್ನು ತಳ್ಳಿಹಾಕಿದರು. ರಷ್ಯಾ ಸಾವಿರಾರು ಯುಕ್ರೇನಿಯನ್ ಮಕ್ಕಳನ್ನು ಅಪಹರಿಸುತ್ತಿದೆ, ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದೆ ಮತ್ತು ಯುರೋಪ್ ಆನ್ನು ಅಸ್ಥಿರಗೊಳಿಸುತ್ತಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.
ರಕ್ತಪಾತದ ಸಮಯದಲ್ಲೂ ಯುಕ್ರೇನಿಯನ್ನರು ಶಾಂತಿಯುತ ಜನರು. ನಮ್ಮ ಮಕ್ಕಳನ್ನು ಮನೆಗೆ ಕರೆತರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಎಂದು ರಷ್ಯಾವನ್ನು ಪ್ರಶ್ನಿಸಿದ್ದಾರೆ.
ಯುರೋಪ್ ಕ್ರಮ ಕೈಗೊಳ್ಳಲು ವಿಫಲವಾದರೆ ಮೊಲ್ಡೊವಾ ರಷ್ಯಾದ ಪ್ರಭಾವಕ್ಕೆ ಒಳಗಾಗುವ ಅಪಾಯವಿದೆ. ಕೈವ್‌ಗೆ ಬೆಂಬಲವನ್ನು ಹೆಚ್ಚಿಸುವಂತೆ ಝೆಲೆನ್ಸ್ಕಿ ವಿಶ್ವ ನಾಯಕರನ್ನು ಒತ್ತಾಯಿಸಿದರು. ರಷ್ಯಾದ ಸರ್ವಾಧಿಕಾರಿಗಳು ಮೆರವಣಿಗೆಗಳಲ್ಲಿ ಪ್ರದರ್ಶಿಸಲು ಇಷ್ಟಪಡುವ ದೊಡ್ಡ ಕ್ಷಿಪಣಿಗಳನ್ನು ಯುಕ್ರೇನ್ ಹೊಂದಿಲ್ಲ. ಬದಲಾಗಿ, ನಮ್ಮ ಬದುಕುವ ಹಕ್ಕನ್ನು ರಕ್ಷಿಸಲು ನಾವು ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಬೇಕಾಯಿತು. ರಷ್ಯಾ ನಮಗೆ ಬೇರೆ ದಾರಿಯಿಲ್ಲದೆ ಬಿಟ್ಟ ಕಾರಣ ನಾವು ಕಪ್ಪು ಸಮುದ್ರದಲ್ಲಿ ಯಶಸ್ವಿಯಾದೆವು ಎಂದು ತಿಳಿಸಿದ್ದಾರೆ.
ವಾಸ್ತವಗಳು ಸರಳವಾಗಿದೆ ಪುಟಿನ್ ಈಗಲೇ ಯುದ್ದ ನಿಲ್ಲಿಸಿ. ಅಲ್ಲದೆ, ವಿಶ್ವದ ಬಂದರುಗಳು ಅಥವಾ ಹಡಗುಗಳನ್ನು ರಕ್ಷಿಸಲು ಪ್ರಯತ್ನಿಸುವುದಕ್ಕಿಂತ ಅಗ್ಗವಾಗಿದೆ. ಇದು ಜಾಗತಿಕ ಶಸ್ತ್ರಾಸ್ತ್ರ ಸ್ಪರ್ಧೆಗಿಂತ ಸುಲಭ. ಯುದ್ಧವು ಈಗಾಗಲೇ ಹಲವಾರು ಜನರನ್ನು ತಲುಪಿದೆ. ರಷ್ಯಾ ಈ ಯುದ್ಧವನ್ನು ಎಳೆಯುತ್ತಿರುವಾಗ ಮೌನವಾಗಿರಬೇಡಿ. ದಯವಿಟ್ಟು ಮಾತನಾಡಿ ಎಂದು ಝೆಲೆನ್ಸ್ಕಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)