ನಮ್ಮಲ್ಲಿನ ಪ್ರತಿಭಟನೆಗಳನ್ನು ಭಾರತದ ಮಾಧ್ಯಮಗಳು ಇಸ್ಲಾಮಿಕ್ ಚಳುವಳಿ ಎಂದು ಪ್ರಚಾರ ಮಾಡುತ್ತಿವೆ: ಬಾಂಗ್ಲಾ ಮುಖ್ಯ ಸಲಹೆಗಾರ ಯೂನಸ್ | Indian Media

Narendra Modi
Published on

Indian Media: ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳು ಭಾರತಕ್ಕೆ ಇಷ್ಟವಾಗದ ಕಾರಣ ನಮ್ಮ ಜತೆ ಸಂಬಂಧಗಳು ಹದಗೆಟ್ಟಿವೆ ಎಂದು ಬಾಂಗ್ಲಾದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಯ ಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿ ಮಾತನಾಡಿದ ಯೂನಸ್, ಪ್ರಾದೇಶಿಕ ವ್ಯಾಪಾರ ಮತ್ತು ಸಾಗರ ಪ್ರವೇಶಕ್ಕೆ ಸೇತುವೆಯಾಗಿ ಬಾಂಗ್ಲಾದೇಶ ಕಾರ್ಯನಿರ್ವಹಿಸುತ್ತಿದೆ.

ಮುಂದುವರೆದು ಮಾತನಾಡಿದ ಯೂನಿಸ್, ನಮ್ಮ ವಿದ್ಯಾರ್ಥಿಗಳು ಮಾಡಿದ್ದು ಭಾರತಕ್ಕೆ ಇಷ್ಟವಾಗದ ಕಾರಣ ನಮಗೆ ಈಗ ಸಮಸ್ಯೆಗಳಿವೆ. ಅಲ್ಲದೆ, ಭಾರತೀಯ ಮಾಧ್ಯಮಗಳಲ್ಲಿನ ನಕಲಿ ವರದಿಗಳು ಉದ್ವಿಗ್ನತೆಯನ್ನು ಇನ್ನಷ್ಟು ಹದಗೆಡಿಸಿವೆ. ಅಲ್ಲದೆ, ಭಾರತದಿಂದ ಬಹಳಷ್ಟು ನಕಲಿ ಸುದ್ದಿಗಳು ಬರುತ್ತಿವೆ, ಇದು ಇಸ್ಲಾಮಿಕ್ ಚಳುವಳಿ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಯೂನಿಸ್​ ಆರೋಪಿಸಿದ್ದಾರೆ.

ಹಸೀನಾ ಸಮಸ್ಯೆ

ಭಾರತವು ಹಸೀನಾಗೆ ಆಶ್ರಯ ನೀಡುತ್ತಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸುವ ಸಮಸ್ಯೆಗಳನ್ನು ಸೃಷ್ಟಿಸಿದ ಹಸೀನಾಗೆ ಭಾರತ ಆತಿಥ್ಯ ನೀಡಿದೆ ಎಂದು ಯೂನಿಸ್​ ಕಿಡಿಕಾರಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ದಂಗೆಯ ನಂತರ, ಭಾರತವು ನೆರೆಯ ರಾಷ್ಟ್ರವು ಈಶಾನ್ಯವನ್ನು ಆಕ್ರಮಿಸಿಕೊಳ್ಳುವ ಬೆದರಿಕೆಗಳು ಮತ್ತು ಹೆಚ್ಚುತ್ತಿರುವ ಭಾರತ ವಿರೋಧಿ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ, ವಿಶೇಷವಾಗಿ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿರುವುದನ್ನು ಭಾರತವೂ ಖಂಡಿಸಿದೆ. ಆದರೆ, ಯೂನಸ್ ಆಡಳಿತವು ಕಳವಳಗಳನ್ನು ಪರಿಹರಿಸಲು ನಿರಾಕರಿಸಿದ್ದಾರೆ.

ಸಾರ್ಕ್ ಕನಸುಗಳು

ಭಾರತದ ರಾಜಕೀಯ ಪ್ರತಿರೋಧವು ಪ್ರಾದೇಶಿಕ ಸಹಕಾರವನ್ನು ನಿರ್ಬಂಧಿಸಿದೆ. ಅಲ್ಲದೆ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ವಿಶೇಷ ರಾಯಭಾರಿ ಮತ್ತು ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್​ರೊಂದಿಗಿನ ಸಭೆಯಲ್ಲಿ ಯೂನಿಸ್​ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಯೂನಿಸ್​, ಸಾರ್ಕ್ ಒಂದು ದೇಶದ ರಾಜಕೀಯಕ್ಕೆ ಹೊಂದಿಕೆಯಾಗದ ಕಾರಣ ಅದು ಕಾರ್ಯನಿರ್ವಹಿಸುತ್ತಿಲ್ಲ. ಆಸಿಯಾನ್ ಸೇರಲು ಬಾಂಗ್ಲಾದೇಶದ ಆಸಕ್ತಿಯನ್ನು ವ್ಯಕ್ತಪಡಿಸಿದರು, ಆಗ್ನೇಯ ಏಷ್ಯಾದ ಆರ್ಥಿಕತೆಗಳೊಂದಿಗೆ ಏಕೀಕರಣವು ದೇಶದ ಅಭಿವೃದ್ಧಿಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ ಎಂದು ಯೂನಿಸ್​ ತಿಳಿಸಿದ್ದಾರೆ.

ಸಾರ್ಕ್ ತನ್ನ ಕೊನೆಯ ಶೃಂಗಸಭೆಯನ್ನು 2014 ರಲ್ಲಿ ನಡೆಸಿತು. 2016 ರಲ್ಲಿ ಇಸ್ಲಾಮಾಬಾದ್‌ನಲ್ಲಿ ಯೋಜಿಸಲಾಗಿದ್ದ ಬಣದ ಮುಂದಿನ ಸಭೆಯನ್ನು ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ರದ್ದುಗೊಳಿಸಲಾಯಿತು. ಇದಕ್ಕೆ ಭಾರತ ಪಾಕಿಸ್ತಾನವನ್ನು ದೂಷಿಸಿತು. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕ್​​​ನ ಬೆಂಬಲವು ಸಾರ್ಕ್ ಸಭೆಗಳನ್ನು ಕಾರ್ಯಸಾಧ್ಯವಾಗದಂತೆ ಮಾಡುತ್ತದೆ ಎಂದು ಭಾರತ ಅಂದಿನಿಂದ ಸಮರ್ಥಿಸಿಕೊಂಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net