

ಅಂತರಸಂತೆ: ನೂರಲಕುಪ್ಪೆ ಬಿ ಗ್ರಾಮದ ಜನತೆ ನನಗೆ ನೂರಕ್ಕೆ ನೂರರಷ್ಟು ಮತದಾನವನ್ನು ನೀಡಿದ್ದಾರೆ. ಈ ಋಣವನ್ನು ನಾನು ತೀರಿಸಲು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಎಚ್.ಡಿ.ಕೋಟೆ ತಾಲೂಕಿನ ನೂರಲಕುಪ್ಪೆ ಬಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಾನು ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ನಾಲ್ಕೈದು ಬಾರಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದೇನೆ, ಅವುಗಳ ಪರಿಹಾರಕ್ಕೆ ಶ್ರಮಿಸಿದ್ದೇನೆ. ನೂರಲಕುಪ್ಪೆ ಬಿ ಗ್ರಾಮ ನನಗೆ ಬಹಳ ವಿಶೇಷವಾದ ಗ್ರಾಮ. ಇಲ್ಲಿ ನನಗೆ ನೂರಕ್ಕೆ ನೂರರಷ್ಟು ಮತ ನೀಡಿದ್ದಾರೆ. ನಾನು ಕೂಡ ಸಾಕಷ್ಟು ಅನುದಾನವನ್ನು ಈ ಗ್ರಾಮಕ್ಕೆ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈಗ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದೆ. ವಿಶೇಷ ಅನುದಾನ ಸೇರಿಸಿ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಜಿ.ಪಂ. ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ರವಿ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಮೈಮುಲ್ ನಿರ್ದೇಶಕ ಹೀರೇಗೌಡ, ನಂಜನಗೂಡು ಕಾಂಗ್ರೆಸ್ ಉಸ್ತುವಾರಿ ಜೀಯಾರ ಸೋಮೇಶ್, ರಾಜನಾಯಕ, ಬೈಪಾಸ್ ಮಂಜು, ಕರ್ನಾಟಕ ಭೀಮ್ ಸೇನೆ ಅಧ್ಯಕ್ಷ ಪ್ರಕಾಶ್ ಬುದ್ಧ, ಅಕ್ರಮ-ಸಕ್ರಮ ಸದಸ್ಯ ಬಾಲಯ್ಯ, ಅಂತರಸಂತೆ ಪ್ರಗತಿಪರ ಒಕ್ಕೂಟ ಅಧ್ಯಕ್ಷ ಹೊಸಮಾಳ ಮಂಜು, ಗ್ರಾಮ ಪಂಚಾಯಿತಿ ಸದಸ್ಯ ಜ್ಯೋತಿ ಪುಟ್ಟರಾಜು, ಮಗ್ಗೆ ಶಿವಕುಮಾರ್, ಚಲುವರಾಜ್, ದೊರೆಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಟ್ರಸ್ಟ್‌ನ ಸಿ.ಗೋಪಾಲಸ್ವಾಮಿ, ಸಿ.ರಾಜು, ದೇವಪ್ಪ, ಚಿನ್ನಸ್ವಾಮಿ, ಪುಟ್ಟಾಂಕಯ್ಯ, ಕೆಂಪಣ್ಣ, ಉದಯ್ ಕುಮಾರ್, ಮಾದೇವಯ್ಯ, ಪುಟ್ಟರಾಜು, ಕೆಂಪರಾಜು, ಕೆ.ಚಂದ್ರು, ಟಿ.ಜೆ.ಬಸವರಾಜು, ಎನ್.ಟಿ.ಚಂದ್ರು, ಜಯಶೀಲ, ಶೇಖರ್, ದೇವು, ಸಣ್ಣಸ್ವಾಮಿ, ಎನ್.ಜಿ.ಗುರು, ದೇವರಾಜು, ಶಿವಕುಮಾರ್, ಭರತ್ ಇತರರು ಇದ್ದರು.