ನಿವೃತ್ತಿ ನಂತರ ಯಾವುದೇ ಸರ್ಕಾರಿ ಹುದ್ದೆ ಪಡೆಯೆನು

br gavai
Published on

ನವದೆಹಲಿ: ನಿವೃತ್ತಿ ನಂತರ ತಾವು ಯಾವುದೇ ಸರ್ಕಾರಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಹೇಳಿದ್ದಾರೆ. ನಿವೃತ್ತಿ ನಂತರ ತಮ್ಮ ಹಳ್ಳಿಯಲ್ಲೇ ಹೆಚ್ಚು ಸಮಯ ಕಳೆಯುವುದಾಗಿ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸ್ವಗ್ರಾಮ ದಾರಾಪುರದಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಜೆಐ ವಿವರಿಸಿದರು.

ನಿವೃತ್ತಿ ನಂತರ ತಮಗೆ ಹೆಚ್ಚು ಸಮಯ ಸಿಗಲಿದ್ದು ದಾರಾಪುರ, ಅಮರಾವತಿ ಮತ್ತು ನಾಗ್ಪುರದಲ್ಲಿ ಅಧಿಕ ಸಮಯ ಕಳೆಯಲು ಪ್ರಯತ್ನಿಸುವುದಾಗಿ ಹೇಳಿದರು. ಜಸ್ಟಿಸ್ ಗವಾಯಿ ಈ ವರ್ಷ ನವೆಂಬರ್​ನಲ್ಲಿ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಸ್ವಗ್ರಾಮಕ್ಕೆ ಆಗಮಿಸಿದ ಸಿಜೆಐ ಗವಾಯಿಯವರನ್ನು ಜನರು ಬರಮಾಡಿಕೊಂಡರು. ಕೇರಳ ಮತ್ತು ಬಿಹಾರದ ಮಾಜಿ ರಾಜ್ಯಪಾಲರಾದ ತಮ್ಮ ತಂದೆ ಆರ್.ಎಸ್. ಗವಾಯಿ ಸ್ಮಾರಕಕ್ಕೆ ಸಿಜೆಐ ಪುಷ್ಪನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net