

ಬೆಂಗಳೂರು: ಅಶ್ಲೀಲ ಸಿಡಿ ವಿಚಾರವಾಗಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಇಂದು ಸುದ್ದಿಗೋಷ್ಟಿ ನಡೆಸಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಡುಗಿಯನ್ನು ಮುಂದಿಟ್ಟುಕೊಂಡು ಆ ಮಹಾನಾಯಕ ರಾಜಕಾರಣ ಮಾಡಿದ್ದಾನೆ. ಅವನನ್ನು ಎದುರಿಸಲು ನಾನು ಎಲ್ಲ ವಿಧದಲ್ಲೂ ಸಿದ್ದನಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಕಪುರದಿಂದ ನಾನು ಡಿಕೆಶಿ ವಿರುದ್ಧ ಸ್ಪರ್ಧಿಸುತ್ತೇನೆ. ತನು ಮನ ಧನದಿಂದ ಈ ಚುನಾವಣೆಯಲ್ಲಿ ಹೋರಾಡಿ ಡಿಕೆಶಿಯನ್ನು ಸೋಲಿಸುತ್ತೇನೆ. ಗೋಕಾಕ್ನಲ್ಲಿ ನನ್ನ ತಮ್ಮ ಚುನಾವಣೆಗೆ ಸ್ಪರ್ಧಿಸುತ್ತಾನೆ ಎಂದು ಗುಡುಗಿದ್ದಾರೆ. ಅವನಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ. ಅವನು ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣ ಸಂಬಂಧ ಆ ಮಹಾನಾಯಕ ಯಾರು ಅಂತಾ ಯುವತಿ ಪೋಷಕರೇ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ನೀಡಲಾಗುವುದು. ನಾನು, ನಮ್ಮ ಕುಟುಂಬ ಯಾವುದೇ ಹುಡುಗಿಯ ಸಹವಾಸಕ್ಕೆ ಹೋಗಿಲ್ಲ. ಇದೆಲ್ಲ ಕಟ್ಟು ಕಥೆ. ಡಿಕೆ ಶಿವಕುಮಾರ್ ರಾಜಕೀಯದಲ್ಲಿ ಇರಬಾರದು. ಅವರು ಬೆಳಗಾವಿಗೆ ಬಂದ್ರೆ ಏನೂ ಮಾಡುವುದಿಲ್ಲ ಎಂದರು.
ನನ್ನ ಬಳಿ 11 ಸಾಕ್ಷ್ಯಗಳಿವೆ. 11 ದಾಖಲೆಗಳನ್ನ ಎಸ್ ಐಟಿಗೆ ಕೊಡುತ್ತೇನೆ. ಮಹಾನಾಯಕ ಯಾರು ಅಂತಾ ಪೋಷಕರೇ ಹೇಳಿದ್ದಾರೆ. ನಾನು ತಪ್ಪು ಮಾಡಿದ್ರೆ ಒಳಗೆ ಹಾಕಲಿ. ಮಹಾನಾಯಕ ತಪ್ಪು ಮಾಡಿದ್ರೆ ಅವರನ್ನ ಒಳಗೆ ಹಾಕಲಿ ಎಂದು ಆಗ್ರಹಿಸಿದರು.