

Prabhas: ಸಲಾರ್, ಕಲ್ಕಿ ಸಿನಿಮಾಗಳ ಬಳಿಕ ಇದೀಗ ರೆಬಲ್ಸ್ಟಾರ್ ಪ್ರಭಾಸ್ ರಾಜಾಸಾಬ್ ಮೂಲಕ ಮತ್ತೆ ಪ್ರೇಕ್ಷಕರ ಎದುರಿಗೆ ಬರುತ್ತಿದ್ದಾರೆ. ಸಲಾರ್ ಚಿತ್ರ ಬರೊಬ್ಬರಿ 700 ಕೋಟಿ ರೂ. ವಸೂಲಿ ಮಾಡಿ ಬ್ಲಾಕ್ಬಸ್ಟರ್ ಆಯಿತು. ಅಲ್ಲದೆ, ಕಲ್ಕಿ 1000 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡುವ ಮೂಲಕ ಇಂಡಸ್ಟ್ರಿ ಹಿಟ್ ಆಗಿ ನಿಂತಿದೆ. ಇದೀಗ ಮಾರುತಿ ನಿರ್ದೇಶನದ ರಾಜಾಸಾಬ್ ಚಿತ್ರದ ಮೂಲಕ ಮಿಂಚಲು ರೆಡಿಯಾಗಿದ್ದು, ಈ ಚಿತ್ರದಲ್ಲಿ ಪ್ರಭಾಸ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಇಬ್ಬರು ಅಥವಾ ಮೂವರು ನಾಯಕಿಯರು ನಟಿಸಲಿದ್ದಾರೆ.
ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನ್ ಈಗಾಗಲೇ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಏತನ್ಮಧ್ಯೆ, ಈ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಮಾಳವಿಕಾ ಮೋಹನ್, ಪ್ರಭಾಸ್ ಮತ್ತು ರಾಜಾಸಾಬ್ ಹಾಡಿನ ಚಿತ್ರೀಕರಣದ ಬಗ್ಗೆ ಈಗಾಗಲೇ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಜಾಸಾಬ್ ಚಿತ್ರದ ನಾಯಕಿ, '' ಪ್ರಭಾಸ್ ಇಂಟ್ರೋವರ್ಟ್(ಅಂತರ್ಮುಖಿ) ಎಂದು ಎಲ್ಲರೂ ಭಾವಿಸಿದ್ದಾರೆ. ನಾನು ಈ ಮೊದಲು ಅವರನ್ನು ಅದೇ ತರ ಎಂದು ಭಾವಿಸಿದ್ದೆ. ಯಾರ ಬಳಿ ಅಧಿಕ ಮಾತನಾಡಲ್ಲ, ಒಬ್ಬರೇ ಇರುತ್ತಾರೆ ಎಂದುಕೊಂಡಿದ್ದೆ. ಆದರೆ, ಪ್ರಭಾಸ್ ಸಾಮಾನ್ಯರಲ್ಲ.. ಅವರು ಎಲ್ಲಾರ ಹತ್ತಿರ ಸೂಪರ್ ಆಗಿ ಮಾತನಾಡುತ್ತಾರೆ. ಖುಷಿಯಿಂದ ಇರ್ತಾರೆ. ಎಲ್ಲರನ್ನು ಖುಷಿ ಪಡಿಸಬೇಕು ಎಂಬ ಹಂಬಲದೊಂದಿದೆ ಮಾತನಾಡುತ್ತಾರೆ ಎಂದು ನಟಿ ಮಾಳವಿಕ ಮೋಹನ್ ಹಂಚಿಕೊಪಂಡಿದ್ದಾರೆ.(ಏಜೆನ್ಸೀಸ್)