ಕೋವಿಡ್​ ನನ್ನ ಯಾಮಾರಿಸಿಬಿಡ್ತು- ಡೆತ್​ ಬೆಡ್​ನಲ್ಲಿ ಮಲಗಿಕೊಂಡು ಯುವಕನ ಆಕ್ರಂದನ

COVID party
Published on

ನವದೆಹಲಿ: ಮಾರಣಾಂತಿಕ ಎಂದು ಅರಿಯದೆ ಕೋವಿಡ್ ಪಾರ್ಟಿ ಅಟೆಂಡ್ ಮಾಡಿ ತಪ್ಪೆಸಗಿದೆ. ಕೋವಿಡ್ ವೈರಸ್ ಸೋಂಕು ಎಲ್ಲವೂ ಹುಸಿ ಬೆದರಿಕೆ ಎಂದು ನಾನು ಭಾವಿಸಿದ್ದೆ. ಆದರೆ, ಅದು ಹಾಗಿಲ್ಲ ಎಂದು 30ರ ಯುವಕನೊಬ್ಬ ಡೆತ್​ಬೆಡ್​ನಲ್ಲಿ ಮಲಗಿಕೊಂಡು ಕೊನೆಯದಾಗಿ ನರ್ಸ್​ ಎದುರು ತಪ್ಪೊಪ್ಪಿಕೊಂಡು ಮೃತಪಟ್ಟಿದ್ದಾನೆ!

ಸ್ಯಾನ್ ಅಂಟೋನಿಯೋದ ಮೆಥೋಡಿಸ್ಟ್​ ಹಾಸ್ಪಿಟಲ್​ನ ಚೀಫ್ ಮೆಡಿಕಲ್ ಆಫೀಸರ್​ ಡಾ. ಜಾನೆ ಅಪ್ಲೆಬಿ ಇದನ್ನು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಸಂಬಂಧ ವಿಡಿಯೋವನ್ನೂ ಅವರು ಅಪ್ಲೋಡ್ ಮಾಡಿದ್ದು, ಕೋವಿಡ್ ಪಾರ್ಟಿಗೆ ತೆರಳುವವರಿಗೆ ತಣ್ಣನೆಯ ಎಚ್ಚರಿಕೆ ನೀಡಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್​ ಸಂಕಷ್ಟಕ್ಕೆ ಒಳಗಾಗಿರುವ ಅಮೆರಿಕದಲ್ಲಿ ಕೋವಿಡ್ ಪಾರ್ಟಿಯ ಪರಿಕಲ್ಪನೆ ಬಹಳ ಜನಪ್ರಿಯವಾಗಿದ್ದು, ಅನೇಕರು ಅದಕ್ಕೆ ಬಲಿಯಾಗತೊಡಗಿದ್ದಾರೆ. ಕರೊನಾ ವೈರಸ್ ಸೋಂಕು ಹುಸಿ ಬೆದರಿಕೆ ಎಂಬುದನ್ನು ಸಾಬೀತು ಮಾಡುವ ಸಲುವಾಗಿ ಹುಟ್ಟಿಕೊಂಡದ್ದಾಗಿದ್ದು, ಅವರ ಕಲ್ಪನೆ ಮೀರಿ ಅನೇಕರು ಸೋಂಕಿಗೆ ಒಳಗಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕದಲ್ಲಿ ಸೋಂಕು ತಗುಲುತ್ತಿರುವ ವಯೋಮಾನ ಗಮನಿಸಿದರೆ 20ರಿಂದ 30ರ ವಯೋಮಾನದವರಲ್ಲಿ ಹೆಚ್ಚುತ್ತಿದೆ. ಆರಂಭದಲ್ಲಿ ಈ ಸೋಂಕು ಮಕ್ಕಳು ಮತ್ತು ವಯೋವೃದ್ಧರಿಗಷ್ಟೇ ಹೆಚ್ಚು ಸಂಕಷ್ಟ ಉಂಟುಮಾಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ವಾಸ್ತವ ಹಾಗಿಲ್ಲ ಎಂದು ಡಾ.ಜಾನೆ ಎಚ್ಚರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net