ನನ್ನ ಮೊದಲ ಸಿನಿಮಾ ಕೈತಪ್ಪಿದು ಆ ನಟಿಯಿಂದಲೇ; ಇಮ್ರಾನ್​ ಹಶ್ಮಿ ಹೀಗೆಂದಿದ್ದು ಯಾರಿಗೆ?

Untitled-design-6-1
Published on

ಮುಂಬೈ: ಇಮ್ರಾನ್ ಹಶ್ಮಿ 2003ರಲ್ಲಿ ವಿಕ್ರಮ್ ಭಟ್ ಅವರ ಫುಟ್‌ಪಾತ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅದಕ್ಕೂ ಮುನ್ನ ​‘ಯೇ ಜಿಂದಗಿ ಕಾ ಸಫರ್​​’ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಅದರಲ್ಲಿ ನಾನೇ ನಟಿಸಿದ್ದರೆ ಅದೇ ನನ್ನ ಮೊದಲ ಸಿನಿಮಾ ಆಗುತಿತ್ತು. ಆ ನಟಿಯಿಂದ ನನಗೆ ಅವಕಾಶ ಕೈತಪ್ಪಿತು ಎಂದು ಸ್ವತಃ ನಟ ಇಮ್ರಾನ್​​ ಅವರೆ ಹೇಳಿದ್ದಾರೆ.

ಇಮ್ರಾನ್ ಹಶ್ಮಿ ಪ್ರಸ್ತುತ ಅವರ ಸರಣಿ ‘ಶೋಟೈಮ್’ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದರ ಮೊದಲ ಸೀಸನ್‌ನ ಎರಡನೇ ಭಾಗವು ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ವೆಬ್​​ ಸಿರೀಸ್​​​ ಪ್ರಚಾರದಲ್ಲಿರುವ ಇಮ್ರಾನ್​ ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮೊದಲ ಸಿನಿಮಾದ ಬಗ್ಗೆ ಹೇಳಿದ್ದಾರೆ.

ಯೇ ಜಿಂದಗಿ ಕಾ ಸಫರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮೊದಲು ನಟ ಗೋವಿಂದ್​​ ಅವರು ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಚಿತ್ರೀಕರಣಕ್ಕೆ ಅವರ ಡೇಟ್ಸ್​​ ಸಮಸ್ಯೆ ಆಯಿತೆಂದು ಮಹೇಶ್​ ಭಟ್​ ಫೋನ್​ ಮಾಡಿ ಸಿನಿಮಾಕ್ಕೆ ಆಫರ್​ ಕೊಟ್ಟರು. ಆದರೆ ಆಗ ನಾನು ಸಿನಿಮಾದಲ್ಲಿ ನಟಿಸಲು ಸಿದ್ಧನಿರಲಿಲ್ಲ. ಮಹೇಶ್​ ಭಟ್​ ಅವರು, ಸಿನಿಮಾದಲ್ಲಿ ತೊಡಗಿಕೊಳ್ಳದೆ ನಟಿಸಲು ಎಂದಿಗೂ ಸಾಧ್ಯವಾಗುವುದಿಲ್ಲ. ನೀವೂ ಸಿನಿಮಾದಲ್ಲಿ ನಟಿಸುತ್ತಾ ಕಲಿಯಬಹುದು ಎಂದು ಹೇಳಿದರು.

ಸಿನಿಮಾಗೆ ಆಯ್ಕೆಯಾಗಿದ್ದ ನಟಿ ಅಮೀಶಾ ಪಟೇಲ್​​​ , ಆ ಸಮಯಕ್ಕಾಗಲೇ ಕಹೋ ನಾ ಪ್ಯಾರ್​ ಹೈನಂತಹ ಹಿಟ್​​ ಸಿನಿಮಾ ನೀಡದ್ದರು. ಈ ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಇಮ್ರಾನ್​ ಹಶ್ಮಿ ಸೂಕ್ತವಲ್ಲ ಎಂದು ಭಾವಿಸಿದ್ದಳು. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಅವರಿಂದ ಸಾಧ್ಯವಾಗುವುದಿಲ್ಲ. ನಾಯಕನ ಕಾಸ್ಟಿಂಗ್ ಸರಿಯಾಗಿರಬೇಕೆಂದು ಅಮೀಶಾ ಬಯಸಿದ್ದಳು. ನಂತರ ಅವಳು ಭಟ್ ಸಾಹಿಬ್ ಬಳಿಗೆ ಹೋಗಿ ಇಮ್ರಾನ್ ಸೂಕ್ತವೆಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು. ಆದರೆ ಆ ಸಮಯದಲ್ಲಿ ನನಗೆ ತುಂಬಾ ಕೋಪ ಬಂತು, ಆದರೆ ಈಗ ಆಲೋಚಿಸಿದರೆ ಅಮೀಶಾ ಹೇಳಿದ್ದು ಸರಿ ಎನ್ನಿಸುತ್ತದೆ ಎಂದಿದ್ದಾರೆ.

ಸಿನಿಮಾದಿಂದ ತೆಗೆದುಹಾಕಿದ ಮೇಲೂ ದಿನ ಚಿತ್ರದ ಸೆಟ್​ಗಳಿಗೆ ಹೋಗುತ್ತಿದ್ದೆ. ಚಿತ್ರದೊಂದಿಗೆ ಸಂಬಂಧ ಹೊಂದಲು ಬಯಸಿದ್ದರಿಂದ ಚಿತ್ರೀಕರಣ ನೋಡಲು ಹೋಗುತ್ತಿದ್ದೆ. ನಂತರ ನಾನು ನನ್ನ ಮೊದಲ ಚಿತ್ರ ಫುಟ್‌ಪಾತ್‌ಗೆ ಸಹಿ ಮಾಡಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net