

Upasana Gill: ಸಾಮಾಜಿಕ ಮಾಧ್ಯಮಗಳ ನಿಷೇಧದ ನಂತರ, ನೇಪಾಳದಲ್ಲಿ ಹೆಚ್ಚುತ್ತಿರುವ ಅಶಾಂತಿಯ ಮಧ್ಯೆ, ಭಾರತೀಯ ನಿರೂಪಕಿ ಉಪಾಸನಾ ಗಿಲ್ ಸಿಲುಕಿದ್ದು, ಅಲ್ಲಿಂದ ಹೊರಬರಲು ಭಾರತೀಯ ರಾಯಭಾರ ಕಚೇರಿಗೆ ಸಹಾಯ ಕೇಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಗಿಲ್ ಹಂಚಿಕೊಂಡಿರುವ ವಿಡಿಯೋದಲ್ಲಿ ನಾನು ವಾಲಿಬಾಲ್ ಕಾರ್ಯಕ್ರಮವನ್ನು ಆಯೋಜಿಸಲು ನೇಪಾಳಕ್ಕೆ ಬಂದಿದ್ದೇನೆ. ಪೋಖರಾದಲ್ಲಿರುವ ಹೋಟೆಲ್ವೊಂದರಲ್ಲಿ ತಂಗಿದ್ದು, ಈ ವೇಳೆ ಪ್ರತಿಭಟನಾಕಾರರು ಹೋಟೆಲ್ಗೆ ಬೆಂಕಿ ಹಚ್ಚಿದ್ದಾರೆ. ಇದು ಸಂಪೂರ್ಣ ಸುಟ್ಟು ಹೋಗಿದೆ. ಹಾಗಾಗಿ ಭಾರತೀಯ ರಾಯಭಾರಿ ಕಚೇರಿ ನಮಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.
ಆದಾಗ್ಯೂ, ಹೋಟೆಲ್ ಆವರಣಕ್ಕೆ ಪ್ರತಿಭಟನಾಕಾರರು ನುಗ್ಗಿದರು. ಆ ವೇಳೆ ನಾನು ಸ್ಪಾದಲ್ಲಿದ್ದೆ. ದೊಡ್ಡ ಕೋಲುಗಳಿಂದ ನನ್ನ ಹಿಂದೆ ಓಡುತ್ತಿದ್ದರು. ನಾನು ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಹೊರಬಂದೆ. ಎಲ್ಲಿ ನೋಡಿದರೂ ಬೆಂಕಿ, ಅವರು ಇಲ್ಲಿ ಪ್ರವಾಸಿಗರನ್ನು ಸಹ ಬಿಡುತ್ತಿಲ್ಲ ಎಂದು ಹೇಳಿದರು.
ಗಿಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಡಿರುವ ಮತ್ತೊಂದು ವಿಡಿಯೋದಲ್ಲಿ, ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದೆ ಆದರೆ, ಅವರಿಂದ ಯಾವುದೇ ಪರಿಹಾರ ಸಿಗಲಿಲ್ಲ. ಅವರು ಕರೆ ಮಾಡಿ ಹೋಟೆಲ್ ಒಳಗೆ ಇರುವಂತೆ ಮನವಿ ಮಾಡಿದರು ಅಷ್ಟರಲ್ಲೇ ಪ್ರತಿಭಟನಾಕಾರರು ಹೋಟೆಲ್ ಒಳಗೆ ನುಗ್ಗಿ ಬೆಂಕಿ ಹಚ್ಚಿದರು. ಈ ಸಮಯದಲ್ಲಿ ನಾವು ಅಲ್ಲಿಂದ ಹೊರ ಬಂದಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಗಿಲ್ "ನಾವು ಈಗ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಾವು ಸುರಕ್ಷಿತವಾಗಿ ಮನೆಗೆ ಹೋಗಬೇಕೆಂದು ಬಯಸುತ್ತೇವೆ ದಯವಿಟ್ಟು ನಮಗೆ ಸಹಾಯ ಮಾಡಿ". ಹಾಗೇ ನಾವು ಉಳಿದಿದ್ದ ಹೋಟೆಲ್ ಸಂಪೂರ್ಣ ಸುಟ್ಟುಹೋಗಿದೆ. ನನ್ನ ಬಳಿ ಯಾವುದೇ ಬಟ್ಟೆಗಳಿಲ್ಲ. ನನ್ನ ಎಲ್ಲಾ ವಸ್ತುಗಳು ಸುಟ್ಟುಹೋಗಿದೆ ಎಂದು ಹೇಳಿದರು. (ಏಜೆನ್ಸೀಸ್)