

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕರೊನಾ ಸೋಂಕು ತಗುಲಿದೆ. ಅವರೇ ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
ನನ್ನ ಕರೊನಾ ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದಿದೆ. ರೋಗ ಲಕ್ಷಣಗಳು ಇಲ್ಲದೆ ಹೋದರೂ ಮುನ್ನೆಚ್ಚರಿಕಾ ಕ್ರಮವಾಗಿ, ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊವಿಡ್-19 ಟೆಸ್ಟ್ಗೆ ಒಳಗಾಗಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಷ್ಟೇ ಅಲ್ಲ ಈಗಲೇ ಕ್ವಾರಂಟೈನ್ಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಕಚೇರಿ-ನಿವಾಸದಲ್ಲಿ 7 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್ನಲ್ಲಿ ಯಡಿಯೂರಪ್ಪ
ಇತ್ತೀಚೆಗೆ ಸಿಎಂ ಕಚೇರಿ-ನಿವಾಸ ಸೇರಿ 7 ಜನರಲ್ಲಿ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೂಡ ಒಂದು ವಾರ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದರು. ನಂತರ ಮಾಡಿದ ಕೊವಿಡ್-19 ಟೆಸ್ಟ್ ವರದಿ ಜುಲೈ 18ರಂದು ಹೊರಬಿದ್ದಿತ್ತು. ಅದರಲ್ಲಿ ನೆಗೆಟಿವ್ ಎಂದು ಹೇಳಲಾಗಿತ್ತು. ಆದರೆ ಈಗ ಮಾಡಿಸಿದ ಟೆಸ್ಟ್ನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.