VIDEO: ಪಾಕಿಸ್ತಾನದ ಪ್ರಮುಖ ನ್ಯೂಸ್​ ಚಾನಲ್​ನಲ್ಲಿ ನಳನಳಿಸಿದ ಭಾರತದ ಧ್ವಜ; ವೀಕ್ಷಕರು, ಮಾಧ್ಯಮ ಸಿಬ್ಬಂದಿ ಶಾಕ್​​

Pakistan
Published on

ಪಾಕಿಸ್ತಾನದ ಪ್ರಮುಖ ಸುದ್ದಿ ಮಾಧ್ಯಮ ಡಾನ್​ ನ್ಯೂಸ್​ನ ಯೂ ಟ್ಯೂಬ್ ಚಾನಲ್ ವೀಕ್ಷಕರಿಗೆ ಭಾನುವಾರ ಮಧ್ಯಾಹ್ನ ಭರ್ಜರಿ ಶಾಕ್​ ಎದುರಾಗಿತ್ತು. ಅಷ್ಟೇ ಅಲ್ಲ, ಇದರಿಂದಾಗಿ ಆ ಸುದ್ದಿ ಮನೆಯೇ ಕಂಗಾಲಾಗಿದೆ.

ಮಧ್ಯಾಹ್ನ ಚಾನಲ್​ನಲ್ಲಿ ಡೆಟೊಲ್​ಗೆ ಸಂಬಂಧಪಟ್ಟ ಜಾಹೀರಾತು ಪ್ರಸಾರವಾಗುತ್ತಿತ್ತು. ಉರ್ದುದಲ್ಲಿ ಕೆಲವು ಬ್ರೇಕಿಂಗ್​ ಸುದ್ದಿಯ ಸಾಲುಗಳು ಇದ್ದವು. ಆದರೆ ಸಡನ್​ ಆಗಿ ಭಾರತದ ಧ್ವಜ ಅಲ್ಲಿ ಕಾಣಿಸಿತು. ಕೆಲವೇ ಸೆಕೆಂಡ್​​ನಲ್ಲಿ Happy Independence Day (ಸ್ವಾತಂತ್ರ್ಯೋತ್ಸವದ ಶುಭಾಶಯಗಳು) ಎಂಬ ಸಾಲೂ ಡಾನ್​ ಉರ್ದು ಚಾನಲ್​ನಲ್ಲಿ ಗೋಚರಿಸಿತು. ಅದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊವಿಡ್​-19 ಸೋಂಕಿತ ಮಹಿಳೆ; ಸಿಸೇರಿಯನ್​ ಒಂದು ಸವಾಲಾಗಿತ್ತು…!

ಪಾಕ್​ನ ಕೆಲವು ವೀಕ್ಷಕರು ಈ ಬಗ್ಗೆ ತಗಾದೆ ತೆಗೆಯುತ್ತಿದ್ದಂತೆ ಡಾನ್​ ನ್ಯೂಸ್​ ಅದಕ್ಕೊಂದು ಸ್ಪಷ್ಟನೆಯನ್ನೂ ನೀಡಿದೆ. ನಮ್ಮ ನ್ಯೂಸ್​ ಚಾನಲ್​ನ ಯೂಟ್ಯೂಬ್​ನ್ನು ಯಾರೋ ಹ್ಯಾಕ್​ ಮಾಡಿದ್ದಾರೆ. ಇದು ಹೇಗೆ ಆಯಿತೆಂದು ನಮಗೂ ಗೊತ್ತಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಇದೇ ತಿಂಗಳ ಪ್ರಾರಂಭದಲ್ಲಿ ಪಾಕಿಸ್ತಾನ ಸರ್ಕಾರದ ವೆಬ್​ಸೈಟ್​ವೊಂದು ಹ್ಯಾಕ್​ ಆಗಿತ್ತು. ಭಾರತೀಯರೇ ಪಾಕ್​ ವೆಬ್​ಸೈಟ್​ಗಳನ್ನು ಹ್ಯಾಕ್​ ಮಾಡುತ್ತಿದ್ದಾರೆ ಎಂದು ಅದು ಆರೋಪ ಮಾಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net