ನಾನು ಇದುವರೆಗೆ ಹಲಾಲ್ ಕಟ್ ಮಾಡಿದ ಮಾಂಸ ತಿಂದಿಲ್ಲ; ಈಶ್ವರಪ್ಪ

KS Eshwarappa
Published on

ಶಿವಮೊಗ್ಗ: ನಾನು ಇದುವರೆಗೂ ಹಲಾಲ್ ಕಟ್ ಮಾಡಿದ ಮಾಂಸ ತಿಂದಿಲ್ಲ. ಮುಂದೆಯೂ ತಿನ್ನುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಹಲಾಲ್ ಪದಾರ್ಥಗಳ ಮಾರಾಟದಿಂದ ಬಂದ ಹಣ ವಿಧ್ವಂಸಕ ಕೃತ್ಯಗಳಲ್ಲಿ ಬಳಕೆಯಾಗುತ್ತಿದೆ. ಇದೇ ಹಣದಿಂದ ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂಬ ವಿಷಯ ಹಿಂದೂ ಸಮಾಜಕ್ಕೆ ಅರಿವಾಗಿದೆ. ಹೀಗಾಗಿ ಹಲಾಲ್ ಕಟ್ ವಿರುದ್ಧ ಅಭಿಯಾನ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಲಾಲ್ ಕಟ್ ಮಾಡಿದ ಮಾಂಸ ಮುಸ್ಲಿಂರಿಗೆ ಶ್ರೇಷ್ಠವೇ ಇರಬಹುದು. ಅವರಿಗೆ ಸಮ್ಮತ ಎಂದರೆ ಅದನ್ನು ನಾವೂ ಸೇವಿಸಬೇಕೆ? ಅವರ ಮನೋಧರ್ಮವನ್ನು ನಾವೂ ಒಪ್ಪಬೇಕೆ? ಎಂದು ಪ್ರಶ್ನಿಸಿದ ಈಶ್ವರಪ್ಪ, ಸಮಾಜ ಜಾಗೃತವಾಗಿದೆ. ಇದರಿಂದಾಗಿ ಅಭಿಯಾನದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net