

ಮುಂಬೈ: ಬಿಟೌನ್ ಲೋಕದಲ್ಲಿ ಈ ಮೊದಲು ಫ್ಯಾಷನ್ ಐಕಾನ್ ಎನ್ನಿಸಿಕೊಂಡಿದ್ದ ಸೋನಮ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೀಗ ಜನರು ನನ್ನನ್ನು ಬಯಸಲಿ ಅಥವಾ ಇಲ್ಲದಿರಲಿ ನಾನು ಮತ್ತೆ ನಟನೆಯನ್ನು ಪ್ರಾರಂಭಿಸಲಿದ್ದೇನೆ ಎಂದು ತಿಳಿಸಿದ್ದಾರೆ. ಕಮ್ಬ್ಯಾಕ್ ಮಾಡಲು ಇಚ್ಛಿಸುತ್ತೀರುವ ನಟಿ ಸೋನಮ್, ಅವರಿಗೆ ಬರುತ್ತಿರುವ ಪಾತ್ರಗಳನ್ನು ನೋಡಿ ವಿಚಿತ್ರ ಎಂದು ಹೇಳಿದರು.
ಮೊದಲಿನಿಂದಲೂ ತಮ್ಮ ವಯಸ್ಸಿಗೆ ತಕ್ಕಂತೆ ನಟಿಸಲು ಇಷ್ಟಪಡುವ ನಟಿ ಸೋನಮ್ ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತನಗೆ 20ನೇ ವಯಸ್ಸಿನ ಪಾತ್ರಗಳ ಆಫರ್ ಬರುತ್ತಿರುವುದು ವಿಚಿತ್ರ ಎನ್ನಿಸುತ್ತದೆ ಎಂದಿದ್ದಾರೆ. ತಮಗೆ ಬರುತ್ತಿರುವ ಪಾತ್ರಗಳ ಬಗ್ಗೆ ನೆನಪಿಸಿಕೊಂಡು ತನಗೆ ಶಾಲಾ ಬಾಲಕಿಯ ಪಾತ್ರಗಳನ್ನು ನೀಡಲಾಗುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಬಂದ ಸಿನಿಮಾ ಅವಕಾಶದಲ್ಲಿ ನನಗೆ ಹುಡುಗಿಯ ಪಾತ್ರವನ್ನು ನೀಡಲಾಯಿತು. ಪಾಲಕರು ಮಗಳಿಗೆ ಮದುವೆ ಮಾಡಲು ಬಯುಸುವಂಥಾ ಪಾತ್ರ. ಶಾಲೆಯಲ್ಲಿ ಓದುತ್ತಿರುವ ಹುಡುಗಿಯೊಬ್ಬಳು ಮುಂದೆ ಕ್ರೀಡಾಪಟುವಾಗುವ ಕಥೆ. ನಾನು ಯೋಚಿಸಿದೆ, ನೀವು ನಿಜವಾಗಿಯೂ ನನಗೆ ಈ ಪಾತ್ರ ನೀಡಲು ಬಯಸುತ್ತೀರಾ? ಇದು ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.
ಏಕೆಂದರೆ ಪಾತ್ರದ ಬಗ್ಗೆ ಹೇಳುವಾಗ ಯುವ ನಟಿ ಮತ್ತು ನನ್ನ ನಡುವೆ ವಿಂಗಡಿಸಬಹುದು ಎಂದು ನಾನು ಭಾವಿಸಿದೆ. ಆದರೆ ನಿರ್ಮಾಪಕರು ಎರಡು ಪಾತ್ರವನ್ನು ನಾನೇ ಮಾಡಬೇಕೆಂದು ಬಯಸಿದ್ದರು. ಇಲ್ಲ, ನಾನು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅದಕ್ಕೆ ಅವರು, ತಾಂತ್ರಿಕ ಬೆಂಬಲದಿಂದ ಈಗ ನಿಮ್ಮ ವಯಸ್ಸನ್ನು ಕಡಿಮೆ ಮಾಡಬಹುದು ಎಂದು ತಿಳಿದಿದೆ ಅಲ್ಲವೆ ಎಂದರು. ಆದರೆ ನಾನು ಈಗ ಚಿಕ್ಕ ಹುಡುಗಿಯ ಪಾತ್ರವನ್ನು ಮಾಡಲು ಇಚ್ಛಿಸುವುದಿಲ್ಲ. ನನ್ನ ವಯಸ್ಸನ್ನು ಕಡಿಮೆ ಮಾಡಲು ನೀವು ಯೋಚಿಸಬಹುದೇ? ಎಂದು ಕೇಳಿದೆ ಎಂದರು.
ಅದಕ್ಕೆ ಕಿರಿಯ ಪಾತ್ರಗಳನ್ನು ಪಡೆಯುವುದು ನಿಮಗೆ ಸಂತೋಷವಾಗಲಿಲ್ಲವೇ ಎಂದು ಸೋನಮ್ ಅವರನ್ನು ಪ್ರಶ್ನಿಸಿದಾಗ, ನಿಸ್ಸಂಶಯವಾಗಿ ನಾನು ಜಾನ್ವಿ ಅಥವಾ ಖುಷಿಯಂತೆ ಚಿಕ್ಕವಳಾಗಿ ಕಾಣುತ್ತಿಲ್ಲ. ಆದರೆ ಜನರು ನನ್ನನ್ನು ಚಿಕ್ಕ ವಯಸ್ಸಿನವಳಂತೆ ಪರಿಗಣಿಸುತ್ತಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಆದರೆ ನಾನು ಮಗುವಿನ ತಾಯಿ. ನನ್ನ ಮಗನನ್ನು ಇನ್ನು ಜಗತ್ತಿಗೆ ಪರಿಚಯಿಸಿಲ್ಲ ಅದಕ್ಕೆ ಜನರು ಹೀಗೆ ಭಾವಿಸುತ್ತಿದ್ದಾರೆ. ಅದು ಹೀಗೆ ಇರಲಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)