ಸಿ.ಟಿ.ರವಿ ರಾತ್ರಿ ಸುತ್ತಾಡಿಸಿದ್ದು ಗೊತ್ತಿಲ್ಲ: ಗೃಹ ಸಚಿವ ಡಾ.ಪರಮೇಶ್ವರ|I don't know why CT Ravi roamed around at night: Home Minister Dr. Parameshwar

ggp1
Published on

ಬೆಂಗಳೂರು: ಅವಾಚ್ಯ ಶಬ್ಧಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿರುವ ಆರೋಪದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರನ್ನು ಪೊಲೀಸರು ಇಡೀ ರಾತ್ರಿ ಸುತ್ತಾಟ ಮಾಡಿಸಿದ ವಿಚಾರ ಗೊತ್ತಿಲ್ಲ(I don't know why CT Ravi roamed around at night) ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ(Home Minister Dr. Parameshwar)  ಹೇಳಿದರು.

ಬೆಂಗಳೂರಿನಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿರೇಬಾಗೆವಾಡಿ ಸ್ಟೇಷನ್‌ಗೆ ಕರೆದುಕೊಂಡು ಹೋದಾಗ ಅಲ್ಲಿಗೆ ಬಿಜೆಪಿ ನಾಯಕರು ಹೋಗಿದ್ದಾರೆ. ಹೊರಗೆ ಸುತ್ತಾಡಿಸಿರೋದು ಗೊತ್ತಿಲ್ಲ. ಪೊಲೀಸರು ಎಲ್ಲವನ್ನೂ ಕೇಳಿಯೇ ಮಾಡುವುದಿಲ್ಲ. ಸಿಎಂ ಆಗಲಿ, ನಾನಾಗಲಿ ಯಾವುದೇ ಸೂಚನೆ ಕೊಟ್ಟಿಲ್ಲ. ಪ್ರೊಸೀಜರ್ ಹೀಗೇ ಮಾಡಬೇಕು ಅಂತ ಹೇಳಿಲ್ಲ ಎಂದರು.

ಖಾನಾಪುರ ಸ್ಟೇಷನ್‌ನಲ್ಲಿ ಇದ್ದಾಗಲೇ ಸಿಟಿ ರವಿ ತಲೆಯಲ್ಲಿ ರಕ್ತ ಬಂದಿರುವ ವಿಚಾರ ನನಗೆ ಗೊತ್ತಿಲ್ಲ. ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಸಂಬಂಧಿಸಿದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.

ಮೂಲತಃ ಇದು ಪ್ರಾರಂಭ ಆಗಿದ್ದು ಎಲ್ಲಿ? ಹಿರಿಯ ಪ್ರತಿನಿಧಿಯಾಗಿ ಅವರು ಮಾತಾಡಿದ್ದು ಸರಿನಾ? ಡ್ರಗ್ಸ್ ಅಡಿಕ್ಟ್ ಎಂದು ರಾಹುಲ್ ಗಾಂಧಿಗೆ ಹೇಳಿದ್ದಾರೆ, ಅದನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

ಬರೀ ಚಿಕ್ಕಮಗಳೂರು ಬಂದ್ ಮಾತ್ರವಲ್ಲ, ಅಂಬೇಡ್ಕರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾತನಾಡಿರುವ ಕುರಿತು ಪ್ರತಿಭಟನೆ ಮಾಡಬೇಕು. ಘಟನೆಯನ್ನು ರಾಜಕೀಯಗೊಳಿಸಬಾರದು.

ಸದನ ವೀಕ್ಷಣೆ ಮಾಡಲು ಸ್ಪೀಕರ್ ಅವಕಾಶ ನೀಡಿದ್ದಾರೆ. ಹೆಬ್ಬಾಳ್ಕರ್ ಕ್ಷೇತ್ರದಿಂದಲೂ ಜನ ಬಂದಿರಬಹುದು. ಯವುದೇ ಪರಿಸ್ಥಿತಿ ಕೈ ಮೀರಿಲ್ಲ. ಎಲ್ಲವೂ ಹತೋಟಿಯಲ್ಲಿದೆ. ರವಿ ಕೊಲೆಗಡುಕ ಎಂದ ವಿಚಾರದ ಗ್ಗೆಯೂ ದೂರು ದಾಖಲಾಗಿದೆ. ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಡಾ.ಪರಮೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net