ಪ್ರತಿಯೊಬ್ಬರಿಗೂ ಸಕ್ಸಸ್​ ಸಿಗಲು ಇರುವ ಮಂತ್ರವಿದು; ಆ್ಯಕ್ಷನ್​ ಸ್ಟಾರ್​ ಜಾಕಿ ಚಾನ್​​ ಹೇಳಿದ ಪಾಠ ಹೀಗಿದೆ..

Untitled-design-2024-09-21T200023.134
Published on

ಮುಂಬೈ: ಆ್ಯಕ್ಷನ್​ ಸ್ಟಾರ್​​ ನಟ ಜಾಕಿ ಚಾನ್​ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ. ಅವರ ಸಿನಿಮಾಗಳನ್ನು ಮೆಚ್ಚದವರೆ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಚಲನಚಿತ್ರೋದ್ಯಮಕ್ಕೆ 56 ವರ್ಷಗಳನ್ನು ನೀಡಿದ ಬಳಿಕ 2016ರಲ್ಲಿ ಜಾಕಿ ಚಾನ್​ ಅವರಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ ತಾನು ಎಂದಿಗೂ ಪ್ರಶಸ್ತಿಗಾಗಿ ಕೆಲಸ ಮಾಡುವುದಿಲ್ಲ. ಅಭಿಮಾನಿಗಳ ನನಗೆ ಏಕೈಕ ಪ್ರೇರಣೆ ಎಂದು ಜಾಕಿ ಚಾನ್​ ಅವರು ಹೇಳಿರುವ ಥ್ರೋಬ್ಯಾಕ್​ ವಿಡಿಯೋವೊಂದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾನು 26 ವರ್ಷದವನಿದ್ದಾಗ ಜಾಕಿ ನಿನಗೆ ಆಸ್ಕರ್​ ಪ್ರಶಸ್ತಿ ಬರುತ್ತದೆ ಎಂದು ಹೇಳುತ್ತಿದ್ದರು. ಆದರೆ ನಾನು ಎಂದಿಗೂ ಅದಕ್ಕಾಗಿ ಕೆಲಸ ಮಾಡಿಲ್ಲ. ಫಲಿತಾಂಶ ಏನೇ ಬಂದರೂ ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇನೆ. ನಾನು ಸಿನಿಮಾ ಮಾಡುವಾಗ ಅಥವಾ ಅದರಲ್ಲಿ ಕೆಲಸ ಮಾಡುವಾಗ, ನಾನು ಪ್ರಶಸ್ತಿ ಅಥವಾ ಬೇರೆ ಯಾವುದರ ಬಗ್ಗೆ ಯೋಚಿಸುವುದಿಲ್ಲ. ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇನೆ

ನನ್ನ ಸಿನಿಮಾಗಲೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಇಲ್ಲದಿದ್ದರೂ, ಜನರು ನನ್ನ ಚಲನಚಿತ್ರಗಳನ್ನು ನೋಡಲಿ ಅಥವಾ ನೋಡದಿರಲಿ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿ ಚಿತ್ರವನ್ನು ಶ್ರದ್ಧೆಯಿಂದ ಮಾಡಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ಬದಲಾಗಿಲ್ಲ. ನಾನೆಂದು ಆಸ್ಕರ್​ ಬಳಿಗೆ ಹೋಗಲಿಲ್ಲ. ಆಸ್ಕರ್​​ ನನ್ನ ಬಳಿಗೆ ಬಂದಿತು ಎಂದು ಹೇಳಿದರು.

ಅವರು ನೋಡಿದರು (ಅವರ ಕೆಲಸವನ್ನು ಉಲ್ಲೇಖಿಸಿ) 56 ವರ್ಷಗಳ ನಂತರ ನಾನು ಬದಲಾಗಲಿಲ್ಲ.  ನಾನು ಅದೇ ಕೆಲಸವನ್ನು ಮಾಡುತ್ತಿದ್ದೆ, ಅದಕ್ಕಾಗಿಯೇ ಅವರು ನನಗೆ ಆಸ್ಕರ್ ನೀಡಲು ನಿರ್ಧರಿಸಿದರು. ಹಾಗೆಯೇ ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ ಅತ್ಯುತ್ತಮವಾದದ್ದನ್ನು ನೀಡುತ್ತಲೇ ಇರಬೇಕೆಂದು ನಾನು ಭಾವಿಸುತ್ತೇನೆ. ಅದು ಒಬ್ಬರಿಗೆ ಮೆಚ್ಚುಗೆ ಆಗಲಿ ಅಥವಾ ಆಗದಿರಲಿ. ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನೀವು ಮುಂದುವರಿಸಿದರೆ ಸಕ್ಸಸ್​ ನಿಮ್ಮ ಬಳಿಗೆ ಬರುತ್ತದೆ ಎಂದು ಕಿವಿಮಾತು ಹೇಳಿದರು.  (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net