ಆ್ಯಂಕರ್ ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?; ತಿಳಿದ್ರೆ ಬೆರಗಾಗೋದು ಗ್ಯಾರಂಟಿ

Untitled-design-2024-09-21T160025.339
Published on

ಬೆಂಗಳೂರು: ಒಂದು ಕಾಲದಲ್ಲಿ ನಿರೂಪಣೆ ಎಂದರೆ ಥಟ್​ ಅಂತಾ ನೆನಪಿಗೆ ಬರುತ್ತಿದ್ದ ಹೆಸರು ಅಪರ್ಣಾ. ಸರ್ಕಾರಿ ಕಾರ್ಯಕ್ರಮದಿಂದ ಹಿಡಿದು ಎಲ್ಲಾ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿರುವ ಏಕೈಕ ವ್ಯಕ್ತಿ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಅವರು ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪು ಮಾತ್ರ ಚಿರಸ್ಮರಣೀಯ. ಚಂದನದಲ್ಲಿ ನಿರೂಪಣೆ ಮೂಲಕ ಅಪರ್ಣಾ ಎಲ್ಲರಿಗೂ ಚಿರಪರಿಚಯವಾಗಿದ್ದು ಎಂದರೆ ತಪ್ಪಾಗುವುದಿಲ್ಲ.

ಕಾಲಬದಲಾದಂತೆ ಸದ್ಯ ಅನೇಕ ಚಾನೆಲ್​ಗಳು ಪ್ರಸಾರವಾಗುತ್ತಿವೆ. ಮನರಂಜನಾ ಕಾರ್ಯಕ್ರಮಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೆ ಇದೆ.

ಖಾಸಗಿ ವಾಹಿನಿಗಳ ಕಾರ್ಯಕ್ರಮ ಎಂದರೆ ನೆನಪಾಗುವುದು ಅನುಶ್ರೀ. ಚಿಟಪಟ ಅಂಥಾ ಮಾತನಾಡುವ ಮೂಲಕ ಕನ್ನಡಿಗರ ಮನಗೆದ್ದಿರುವ ಅನುಶ್ರೀ ತಮ್ಮ ಹಾರ್ಡ್​​ವರ್ಕ್​​ನಿಂದಾಗಿ ಪ್ರತಿಯೊಂದು ಕಾರ್ಯಕ್ರಮಕ್ಕೂ ಅವರೇ ಬೇಕು ಎನ್ನುವಷ್ಟು ಬೇಡಿಕೆಯನ್ನ ಸೃಷ್ಟಿಕೊಂಡಿದ್ದಾರೆ. ಜೀಕನ್ನಡದಲ್ಲಿ ನಡೆಯುವಂತಹ ಎಲ್ಲ ಪ್ರೋಗ್ರಾಮ್ಗಳಿಗೂ ಇವರದ್ದೇ ಆ್ಯಂಕರಿಂಗ್​ ಇರಬೇಕು. ಅದರೆ ಜತೆಗೆ ತಮ್ಮದೆ ಯೂಟ್ಯೂಬ್​ನಲ್ಲಿ ಚಾನೆಲ್​ನಲ್ಲಿ ಸೆಲಿಬ್ರಿಟಿಗಳ ಸಂದರ್ಶನ ಕೂಡ ನಡೆಸುತ್ತಾರೆ ಎಂಬುದು ಗೊತ್ತೆ ಇದೆ.

ಬಾರಿ ಜನಪ್ರಿಯತೆ ಪಡೆದುಕೊಂಡಿರುವ ಅನುಶ್ರೀ ಅವರ ಸಂಭಾವನೆಎಷ್ಟಿರಬಹುದು ಎಂಬುದು ಎಲ್ಲರಿಗೂ ಮೂಡುವ ಪ್ರಶ್ನೆ. ಅವರ ಸಂಭಾವನೆ (Remuneration) ಎಷ್ಟೆಂಬ ಮಾಹಿತಿಯನ್ನು ಇಲ್ಲಿ ತಿಳಿಸಲು ಹೊರಟ್ಟಿದ್ದೇವೆ. ನಿಮಗೂ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ. ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಯಾವುದೇ ಕಾರ್ಯಕ್ರಮಗಳಾಗಿರಲಿ ಅನುಶ್ರೀ ಅವರ ನಿರೂಪಣೆ ಇಲ್ಲದಿದ್ದರೆ ಅಪೂರ್ಣವಾಗುತ್ತೆ ಎಂಬ ಅಭಿಪ್ರಾಯ ಮೂಡಿದೆ. ಬಿಗ್​ಬಾಸ್​ ಮನೆಯ ಸ್ಪರ್ಧಿಯಾಗಿ ಹೊರಬಂದ ಬಳಿಕ ಅನುಶ್ರೀ ಅವರ ಹೆಸರು ನಿರೂಪಣೆಯಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಖಾಸಗಿ ವಾಹಿನಿಗಳ ಕಾರ್ಯಕ್ರಮದಲ್ಲಿನ ತಮ್ಮ ನಿರೂಪಣೆಯ ವರೆಸೆಯ ಮೂಲಕವೇ ಬಹು ಬೇಡಿಕೆ ಗಿಟ್ಟಿಸಿಕೊಂಡಿರುವಂತಹ ಅನುಶ್ರೀ ಅವರ ನಿರೂಪಣೆಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.

ಕಾರ್ಯಕ್ರಮ ಆರಂಭವಾದಗಿನಿಂದ ಕೊನೆಯವರೆಗೂ ಎಲ್ಲಿಯೂ ಇತರರಿಗೆ ಬೇಸರವಾಗದಂತೆ ಮಾತನಾಡುತ್ತಾರೆ. ಮಾತಿನ ಮೂಲಕವೇ ಇತರರ ಮುಖದಲ್ಲಿ ನಗುವನ್ನು ತರುವ ಕೆಲಸ ಮಾಡುವಂತಹ ಅನುಶ್ರೀ, ತರ್ಲೆ, ತಮಾಷೆ ಹಾಗೂ ತುಂಟತನದ ಮೂಲಕವೇ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಇತ್ತೀಚೆಗೆ ಅನುಶ್ರೀ ತಮ್ಮ ಸಂಭಾವನೆಯಲ್ಲಿಯೂ ಏರಿಕೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಪಿಯುಸಿ ಮುಗಿಸಿದ ಕೂಡಲೇ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಅನುಶ್ರೀ ಅವರು 250 ರೂಪಾಯಿಗೆ ಆರಂಭಿಕ ದಿನಗಳಲ್ಲಿ ಒಂದು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು ಎಂಬ ಮಾತಿದೆ. ಅನಂತರ ಬಿಗ್​​ಬಾಸ್ ಕಾರ್ಯಕ್ರಮಕ್ಕೆ ಹೋಗಿ ಬಂದ ನಂತರ ಇವರ ಬೇಡಿಕೆ ಇನ್ನಷ್ಟು ದುಪ್ಪಟ್ಟಾಗಿದೆಯಂತೆ. ಒಂದು ಖಾಸಗಿ ಚಾನೆಲ್​ನಲ್ಲಿ ವೃತ್ತಿಜೀವನ ಆರಂಭಿಸಿದ ಅನುಶ್ರೀ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಡಿಮ್ಯಾಂಡಪ್ಪೋ ಡಿಮ್ಯಾಂಡು ಎಂಬ ಕಾರ್ಯಕ್ರಮ. ಅಲ್ಲಿಂದ ಆರಂಭವಾಗ ಅವರ ಪ್ರಯಾಣ ಇದುವರೆಗೂ ಹಿಂತಿರುಗಿ ನೋಡಿಯೇ ಇಲ್ಲ. ಅಷ್ಟರ ಮಟ್ಟಿಗೆ ಬೆಳೆಯುತ್ತ ಹೋಗುತ್ತಿದೆ.  ಸದ್ಯ ಒಂದು ಎಪಿಸೋಡ್​​ಗೆ ಅನುಶ್ರೀ ಸಂಭಾವನೆ ರೂಪದಲ್ಲಿ ಒಂದು ಲಕ್ಷ ರೂಪಾಯಿ ಪಡೆಯುತ್ತಾರಂತೆ.

ಅನುಶ್ರೀ ಅವರ ಕ್ರೇಜ್ ಹೆಚ್ಚಾಗುತ್ತಾ ಹೋದಂತೆ ಕಾರ್ಯಕ್ರಮದ ಸ್ಪಾನ್ಸರ್​ಗಳು ಕೂಡ ದುಪ್ಪಟ್ಟಾಗುತ್ತಿದ್ದಾರೆ. ಇದರಿಂದಾಗಿ ಅನುಶ್ರೀ ಅವರು ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿರುವ ಮಾಹಿತಿ ತಿಳಿದು ಬಂದಿದೆ.ಕನ್ನಡದ ಫೇವರೆಟ್ ಆಂಕರ್ ಯಾರೆಂಬುದನ್ನು ಯಾರಿಗಾದರೂ ಕೇಳಿದರೆ ಬರುವ ಉತ್ತರ ಅನುಶ್ರೀ. ಇವರ ಸಂಭಾವನೆ ತಿಳಿದ ಬಳಿಕ ಅಭಿಮಾನಿಗಳು ಇವರ ಅದ್ಭುತ ಬಾಡಿ ಲ್ಯಾಂಗ್ವೇಜ್ ಹಾಗೂ ಮಾತಿನವರಸೆಗೆ ಈ ಸಂಭಾವನೆ ಕಡಿಮೆ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net