ಇಷ್ಟು ದಿನ ಬಾಯಿ ಮುಚ್ಚಿಸಿದ್ರು! ನಾನ್ಯಾವ ತಪ್ಪೂ ಮಾಡಿಲ್ಲ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಸಂಜಯ್​ | RG Kar Case

rg kar case
Published on

RG Kar Case: ಆರ್‌ಜಿ ಕರ್​ ಮೆಡಿಕಲ್‌ ಕಾಲೇಜಿನ ಟ್ರೈನಿ ವೈದ್ಯೆ ಕೊಲೆ-ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಸಿಬಿಐ ಸಂಜಯ್ ರಾಯ್ ಎಂಬಾತನನ್ನು ಹತ್ಯೆ ಮತ್ತು ಭೀಕರ ಅತ್ಯಾಚಾರ ಕೇಸ್​ನ ಪ್ರಮುಖ ಆರೋಪಿ ಎಂದು ಹೆಸರಿಸಿದೆ. ಆಗಸ್ಟ್ 9ರಂದು ವೈದ್ಯೆಯ ಮೃತದೇಹವನ್ನು ವಶಕ್ಕೆ ಪಡೆದ 87 ದಿನಗಳ ನಂತರ ಸಿಕ್ಕಿಬಿದ್ದ ಸಂಜಯ್ ರಾಯ್ ವಿರುದ್ಧ ವಿಚಾರಣೆ ಪ್ರಕ್ರಿಯೆ ಆರಂಭಗೊಂಡಿದೆ. ನವೆಂಬರ್ 11ರಿಂದ ಪ್ರತಿದಿನ ವಿಚಾರಣೆ ಮುಂದುವರಿಯಲಿದೆ ಎಂದು ಕೋರ್ಟ್​ ತಿಳಿಸಿದೆ.

ಅತ್ಯಾಚಾರ-ಕೊಲೆ ನನ್ನಿಂದ ಆಗಿಲ್ಲ

ಇನ್ನು ಕೋರ್ಟಿನಿಂದ ಜೈಲಿಗೆ ಹೋಗಬೇಕಿದ್ದ ವ್ಯಾನ್‌ನಲ್ಲಿ ತೆರಳುವ ಮುನ್ನ ಧ್ವನಿ ಎತ್ತಿದ್ದ ಸಂಜಯ್ ರಾಯ್, ಈ ಪ್ರಕರಣದಲ್ಲಿ ನಾನು ನಿರಪರಾಧಿ. ನನಗೆ ಚೌಕಟ್ಟು ಹಾಕಲಾಗಿದೆ. ಎಲ್ಲಾ ಆಪಾದನೆಯನ್ನು ನನ್ನ ಮೇಲೆಯೇ ಹೊರಿಸಲಾಗಿದೆ. ವೈದ್ಯೆಯ ಅತ್ಯಾಚಾರ-ಕೊಲೆ ನನ್ನಿಂದ ಆಗಿಲ್ಲ. ಇಲ್ಲಿಯವರೆಗೆ ನನ್ನ ಬಾಯಿ ಮುಚ್ಚಿಸಿದ್ದರು. ತುಟಿ ಬಿಚ್ಚಿದಂತೆ ಮಾಡಿದ್ದರು. ನಾನು ಮುಗ್ಧ, ಮಾಧ್ಯಮಗಳ ಮುಂದೆ ಏನು ಹೇಳದಂತೆ ಮಾಡಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾನೆ.

ಆರ್‌ಜಿ ಕರ್ ಮಾತ್ರವಲ್ಲ

ಮತ್ತೊಂದೆಡೆ, ಅಲಿಪುರದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹಣಕಾಸು ಭ್ರಷ್ಟಾಚಾರ ಪ್ರಕರಣದ ವಿಚಾರಣೆಯೂ ಮುಗಿದಿದೆ. ಆಳವಾದ ಪಿತೂರಿ ನಡೆದಿದೆ ಎಂದು ಸಿಬಿಐ ನ್ಯಾಯಾಲಯದಲ್ಲಿ ತಿಳಿಸಿದ್ದು, ಆರ್‌ಜಿ ಕರ್ ಮಾತ್ರವಲ್ಲ, ಮ ತಾರಾ ಟ್ರೇಡರ್ಸ್ ಹಲವಾರು ಆಸ್ಪತ್ರೆಗಳಿಗೆ ಉಪಕರಣಗಳನ್ನು ಪೂರೈಸಲಾಗಿದೆ ಎಂದೂ ಹೇಳಿದೆ. ಇನ್ನೊಂದೆಡೆ, ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸಿಬಿಐಗೆ ಯಾರನ್ನೂ ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಬಂಧಿತ ಆರೋಪಿ ಬಿಪ್ಲಬ್ ಸಿಂಗ್ ಅವರ ವಕೀಲರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net