

Operation Sindoor: ಪಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆ ಮಂಗಳವಾರ ಮಧ್ಯರಾತ್ರಿ ಪ್ರತಿಕಾರದ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ಒಂಬತ್ತು ಶಿಬಿರಗಳ ಮೇಲೆ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಜಂಟಿ ದಾಳಿ ನಡೆಸಿವೆ.
ಭಾರತೀಯ ಸೇನೆಯ ಈ ದಾಳಿಗೆ ಪಹಲ್ಗಾಮ್ ಉಗ್ರರಿಗೆ ಬಲಿಪಶುವಾದ ಸಂತೋಷ್ ಜಗದಳೆ ಅವರ ಮಗಳು ಅಸವರಿ ಜಗದಳೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದು, "ಭಯೋತ್ಪಾದಕರಿಂದ ಕೊಲ್ಲಲ್ಪಟ್ಟವರಿಗೆ ಇದು ನಿಜವಾದ ಗೌರವ ಮತ್ತು ನ್ಯಾಯ. ಮೋದಿ ಸೇಡು ತೀರಿಸಿಕೊಂಡಿದ್ದಾರೆ, ಮತ್ತು ಕಾರ್ಯಾಚರಣೆಗೆ ಹೆಸರಿಟ್ಟ ರೀತಿ, ನಮ್ಮ ಕಣ್ಣೀರು ನಿಲ್ಲಲಿಲ್ಲ. ಭಾರತವು ತನ್ನ ಸಹೋದರಿಯರ ಸಿಂಧೂರವನ್ನು ಅಳಿಸಿದ ಉಗ್ರರನ್ನು ಒಂಬತ್ತು ಸ್ಥಳಗಳಲ್ಲಿ ಹೊಡೆದಿದೆ. ಇದು ನಿಜವಾಗಿಯೂ ವಿಭಿನ್ನವೆನಿಸುತ್ತದೆ ಮತ್ತು ನಮ್ಮ ಆನಂದದ ಕಣ್ಣೀರು ನಿಲ್ಲುವುದಿಲ್ಲ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನಮ್ಮ ಸಂಬಂಧಿಕರು ಫೋನ್ ಮಾಡಿ ಮಾಡಿ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಾಚರಣೆಯ ಹೆಸರನ್ನು ಕೇಳಿ ನಾನು ತುಂಬಾ ಅತ್ತಿದ್ದೇನೆ ಎಂದು ಅಸವರಿ ಜಗದಳೆ ಹೇಳಿದ್ದಾರೆ.
26 ಭಾರತೀಯ ಪ್ರವಾಸಿಗರ ಪ್ರಾಣವನ್ನು ಬಲಿತೆಗೆದುಕೊಂಡ ಉಗ್ರರ ಮಟ್ಟಹಾಕಲು "ಬುಧವಾರ ಮುಂಜಾನೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದೆ.
'ಆಪರೇಷನ್ ಸಿಂಧೂರ' ಹೆಸರಿನಲ್ಲಿ, ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಜಂಟಿ ದಾಳಿ ನಡೆಸಿದ್ದು, ಮಂಗಳವಾರ ಮಧ್ಯರಾತ್ರಿಯ ನಂತರ ಒಟ್ಟು ಒಂಬತ್ತು ಪ್ರದೇಶಗಳಲ್ಲಿ ಈ ದಾಳಿಗಳನ್ನು ನಡೆಸಿ 80ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ.(ಏಜೆನ್ಸೀಸ್)