ಪತಿಗೆ ಮೋಸ ಮಾಡಿದ್ದಕ್ಕೆ ನನಗೆ ಪಶ್ಚಾತಾಪವಿಲ್ಲ! ನನ್ನ ಅಕ್ರಮ ಸಂಬಂಧವೇ ಒಳ್ಳೆಯ ಗಂಡನಾಗಿ ಮಾಡಿತೆಂದ ಮಹಿಳೆ

Extra Marital
Published on

ಜೀವನದ ಉದ್ದಕ್ಕೂ ಒಬ್ಬ ವ್ಯಕ್ತಿಗೆ ತಮ್ಮನ್ನು ಅರ್ಪಿಸಿಕೊಳ್ಳುವುದು ಮದುವೆಯ ಭಾಗವಾಗಿದೆ. ಆದರೆ, ಲಕ್ಷಗಟ್ಟಲೆ ಖರ್ಚು ಮಾಡಿ ಶಾಸ್ತ್ರೋಕ್ತವಾಗಿ ಮದುವೆಯಾದರೂ ಅಕ್ರಮ ಸಂಬಂಧಿಗಳಿಂದ ವೈವಾಹಿಕ ಸಂಬಂಧ ಮುರಿದು ಬೀಳುತ್ತದೆ. ಆದರೆ, ಇಲ್ಲೊಬ್ಬ ಮಹಿಳೆ, ಅನೈತಿಕ ಸಂಬಂಧವೇ ತನ್ನ ಸಂಬಂಧವನ್ನು ಉಳಿಸಿದೆ ಎಂದು ವಾದಿಸಿದ್ದಾಳೆ.

ಹೆಸರೇಳಲು ಇಚ್ಛಿಸದ ಮಹಿಳೆ, ತನ್ನ ವ್ಯಥೆಯನ್ನು ಆಸ್ಟ್ರೇಲಿಯನ್ ಪಾಡ್‌ಕಾಸ್ಟ್ “ಎವೆರಿಬಡಿ ಹ್ಯಾಸ್ ಎ ಸೀಕ್ರೆಟ್‌”ನಲ್ಲಿ ಹೇಳಿಕೊಂಡಿದ್ದಾಳೆ. ಮದುವೆಯಾದ ಮೊದಲ ವರ್ಷದಲ್ಲಿ ಏಳು ತಿಂಗಳ ಸುದೀರ್ಘ ಸಂಬಂಧವನ್ನು ಹೊಂದಿದ್ದೆ. ಈ ಒಂದು ಸಂಬಂಧ ತನ್ನ ಪತಿಯನ್ನು ಉತ್ತಮ ಸಂಗಾತಿಯನ್ನಾಗಿ ಮಾಡಿದೆ. ಈ ವಿಚಾರವಾಗಿ ನಾನು ಸ್ವಲ್ಪವೂ ವಿಷಾದಿಸುವುದಿಲ್ಲ ಎಂದು ಮಹಿಳೆಯು ಲಜ್ಜೆಯನ್ನು ಬಿಟ್ಟು ಹೇಳಿದ್ದಾಳೆ.

ನಾವು 13 ವರ್ಷ ಸಂಬಂಧದಲ್ಲಿದ್ದೆವು ಮತ್ತು 6 ವರ್ಷಗಳ ಹಿಂದೆ ಮದುವೆಯಾದೆವು. ನಿಜವಾಗಿಯೂ ಆತ ಒಳ್ಳೆಯ ಪಾರ್ಟ್ನರ್​ ಆಗಿ ಬೆಳೆದನು, ಆದರೆ ಎಲ್ಲ ವಿಷಯಗಳು ನಾವು ಅಂದುಕೊಂಡಂತೆ ಯಾವಾಗಲೂ ಸುಗಮವಾಗಿ ಇರುವುದಿಲ್ಲ. ನಿಶ್ಚಿತಾರ್ಥ ಮಾಡಿಕೊಂಡ ವರ್ಷ, ಪರಸ್ಪರದ ಇಬ್ಬರ ಸಂಬಂಧವನ್ನು ಪರಿಶೀಲಿಸಿದೆವು. ಮದುವೆಯನ್ನು ಯೋಜಿಸುವಾಗ "ತುಂಬಾ ಒತ್ತಡದ ಕೆಲಸ" ಮಾಡುತ್ತಿದ್ದೆನು.

ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಯಿತು. ಮದುವೆಯನ್ನು ನಿಲ್ಲಿಸಲು ಮತ್ತು ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಯೋಚಿಸಿದ್ದೆ. ಆದರೆ, ವಾರಕ್ಕೆ 60 ಗಂಟೆಗಳ ಕೆಲಸವನ್ನು ಬದಲಾಯಿಸುವ ಅವಕಾಶವು ಒದಗಿಬಂದಾಗ, ಸ್ವಲ್ಪವೂ ಯೋಚಿಸದೇ ಅನುಸರಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಭೇಟಿಯಾದೆ. ಸಂದರ್ಶನದ ವೇಳೆ ಅವನೊಂದಿಗೆ ತಕ್ಷಣದ ಸಂಪರ್ಕವನ್ನು ಅನುಭವಿಸಿದೆ.

ಇದರ ನಡುವೆ ವಿಕ್ಟರ್ ತನ್ನ ನಿಶ್ಚಿತಾರ್ಥದ ಬಗ್ಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಾಗ ವಿಷಯಗಳು ಬೇರೆ ತಿರುವು ಪಡೆದುಕೊಂಡವು. ನನ್ನ ಉತ್ತರಗಳು ಬಹುತೇಕ ಚುರುಕಾಗಿದ್ದವು. ವಿಕ್ಟರ್ ಅವರೊಂದಿಗಿನ ವಿಷಯಗಳು ಸ್ವಲ್ಪ ಆತ್ಮೀಯತೆಗೆ ತಿರುಗಿತು. ಸಂಗಾತಿಯನ್ನು ಮದುವೆಯಾದ ನಂತರ ವಿಕ್ಟರ್​ ಜತೆಗಿನ ಸಂಬಂಧ ಬೇರೆ ರೂಪಕ್ಕೆ ತಿರುಗಿತು. ಪದೇಪದೆ ವಾರಾಂತ್ಯದಲ್ಲಿ ಭೇಟಿಯಾಗುತ್ತಿದ್ದೆವು. ಈ ಸಂದರ್ಭದಲ್ಲಿ ವಿಕ್ಟರ್ ಗಂಡನ ಬಗ್ಗೆ ಕೇಳಿದನು. ಆದರೆ ನಾನು ವಿಷಯವನ್ನು ಬದಲಾಯಿಸಿದೆ. ವಿಕ್ಟರ್​ ಮತ್ತು ನನ್ನ ನಡುವೆ ತುಂಬಾ ವಿಷಯದಲ್ಲಿ ಸಾಮ್ಯತೆ ಇತ್ತು. ನಾವು ಸಂಗೀತ, ಚಲನಚಿತ್ರಗಳು, ಟಿವಿ ಮತ್ತು ರಾಜಕೀಯದಲ್ಲಿ ಒಂದೇ ರೀತಿಯ ಅಭಿರುಚಿ ಹೊಂದಿದ್ದೆವು. ಎಲ್ಲವೂ ಕನೆಕ್ಟ್​ ಆಯಿತು. ಇದು ನಡುವೆ ನಮ್ಮಿಬ್ಬರ ಫೋನ್​ ನಂಬರ್​ ವಿನಿಮಯವಾಯಿತು. ಪರಸ್ಪರ ಸಂದೇಶ ಕಳುಹಿಸಲು ಆರಂಭಿಸಿದೆವು ಎಂದು ಮಹಿಳೆ ಹೇಳಿದ್ದಾಳೆ.

ಶೀಘ್ರದಲ್ಲೇ ಇಬ್ಬರ ನಡುವೆ ಲೈಂಗಿಕತೆ ಕುರಿತಾದ ಮೆಸೇಜ್​ ಆರಂಭವಾಯಿತು. ಗಂಡನಿಗೆ ಗೊತ್ತಾಗದಂತೆ ಇಬ್ಬರು ಭೇಟಿಯಾಗಲು ಯೋಜಿಸಿದರು. ಕೊನೆಗೂ ಇಬ್ಬರು ನಡುವೆ ಲೈಂಗಿಕ ಸಂಬಂಧವೂ ಆರಂಭವಾಯಿತು. ಅತ್ಯಂತ ಅದ್ಭುತವಾದ ಲೈಂಗಿಕತೆ ಹೊಂದಿದ್ದಾಗಿ ಹೇಳಿದ್ದಾಳೆ. ಈ ಸಂಬಂಧವು ಏಳು ಅದ್ಭುತ ತಿಂಗಳುಗಳ ಕಾಲ ನಡೆಯಿತು. ಈ ಸಮಯದಲ್ಲಿ ನಾನು ನನ್ನ ಬಗ್ಗೆ ತುಂಬಾ ಕಲಿತಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.

ಈ ಸಂಬಂಧವು ತನ್ನ "ಸ್ವಂತ ಸ್ವಾಭಿಮಾನವನ್ನು" ಅರಿತುಕೊಳ್ಳಲು ಸಹಾಯ ಮಾಡಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ತನ್ನ ಪತಿಯಿಂದ ನಿರಾಶೆಗೊಂಡಿದದ್ದಾಗಿ ಹೇಳಿದ್ದಾರೆ. ಪತಿ ರಾತ್ರಿಯಿಡೀ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದನಂತೆ, ಅವಳು ಹೋಗಿ ವಿಕ್ಟರ್‌ನೊಂದಿಗೆ ಸಮಯ ಕಳೆಯುತ್ತಿದ್ದಳು. ಅವಳು ತನ್ನೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು ಆನಂದಿಸುತ್ತಿದ್ದಳು ಎಂದು ಹೇಳಿದ್ದಾಳೆ.

ಆಕೆಯ ಪತಿ ಶೀಘ್ರದಲ್ಲೇ ಆಕೆಯ ನಡವಳಿಕೆಯಲ್ಲಿನ ಬದಲಾವಣೆಯನ್ನು ಗಮನಿಸಿದರು ಮತ್ತು ತಾನಿಲ್ಲದೆ, ಆಕೆ ಸಾರ್ಥಕ ಜೀವನವನ್ನು ನಡೆಸಬಹುದೆಂದು ಆತ ಅರಿತುಕೊಂಡಿದ್ದಾನೆ. ಬಳಿಕ ಪತ್ನಿಗೆ "ಆದ್ಯತೆ" ನೀಡುವಂತೆ ಮಾಡಿತು ಮತ್ತು ಬದಲಾದರು ಎಂದು ಹೇಳಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net