More

  ಮದ್ವೆಗೆ ಇನ್ನೂ ಕೆಲವೇ ದಿನ ಬಾಕಿ ಇರುವಾಗಲೇ ಭಾವಿ ಪತಿ ಹೇಳಿದ ಮಾತು ಕೇಳಿ ಕುಸಿದುಬಿದ್ದ ವಧು!

  ಮದುವೆಗೆ ಇನ್ನೂ ಕೆಲವೇ ವಾರಗಳು ಬಾಕಿ ಇರುವಾಗಲೇ ಭಾವಿ ಪತಿ ಬಿಚ್ಚಿಟ್ಟ ಸ್ಫೋಟಕ ರಹಸ್ಯದಿಂದ ವಧುವೊಬ್ಬಳು ಇಕ್ಕಟ್ಟಿಗೆ ಸಿಲುಕಿದ್ದು, ಮದುವೆ ಮುಂದುವರಿಸಬೇಕಾ? ಅಥವಾ ಮುರಿದುಕೊಳ್ಳಬೇಕಾ? ಎಂಬ ಗೊಂದಲಕ್ಕೀಡಾಗಿ ಏನು ಮಾಡಲಿ ಎಂದು ಕೇಳುತ್ತಿದ್ದಾಳೆ.

  ಹೆಸರೇಳಲು ಇಚ್ಛಿಸದ ವಧು, ತನ್ನ ವ್ಯಥೆಯನ್ನು ಆಸ್ಟ್ರೇಲಿಯನ್ ಪಾಡ್‌ಕಾಸ್ಟ್ “ಎವೆರಿಬಡಿ ಹ್ಯಾಸ್ ಎ ಸೀಕ್ರೆಟ್‌”ನಲ್ಲಿ ಹಂಚಿಕೊಂಡಿದ್ದಾರೆ. ವಧು ತನ್ನ ಸಂದಿಗ್ಧತೆಯನ್ನು ವೀಕ್ಷಕರ ಮುಂದಿಟ್ಟು ಸಹಾಯ ಕೋರಿದ್ದಾಳೆ. ಅಷ್ಟಕ್ಕೂ ಆಕೆ ಹೇಳಿದ್ದೇನು ಎಂದು ನೋಡುವುದಾದರೆ, ತನ್ನ ಭಾವಿ ಪತಿಯ ಸಂಬಂಧದಲ್ಲಿ ತುಂಬಾ ಸುರಕ್ಷಿತ ಎಂದು ಆಕೆ ಸದಾ ಅಂದುಕೊಂಡಿದ್ದಳು. ಅಲ್ಲದೆ, ತನ್ನ ಬಾಳ ಸಂಗಾತಿಯ ಜತೆ ಯಾವುದೇ ಸಮಸ್ಯೆಯು ಇರಲಿಲ್ಲ ಎಂದಿರುವ ವಧು, ತನ್ನ ಭಾವಿ ಪತಿ ಓರ್ವ ಉಭಯ ಲಿಂಗಿ ಅಥವಾ ದ್ವಿಲಿಂಗಿ (ಮಹಿಳೆ ಮತ್ತು ಪುರುಷ ಇಬ್ಬರ ಜತೆಯು ಲೈಂಗಿಕ ಬಯಕೆ ಹಂಚಿಕೊಳ್ಳುವವರು) ಎಂದು ತಿಳಿದು ಆಘಾತಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

  ತಮ್ಮ ಲೈಂಗಿಕ ಸಂಬಂಧದ ನಡುವೆ ಪುರುಷನನ್ನು ಕರೆತರಬಹುದೇ ಎಂದು ಈ ಹಿಂದೆಯೇ ಅವರು ಕೇಳಿದ್ದರೂ, ಆದರೆ ಏಕಪತ್ನಿ ಸಂಬಂಧವನ್ನು ಮಾತ್ರ ಒತ್ತಾಯಿಸಿದಾಗ ಭಾವಿ ಪತಿ ದ್ವಿಲಿಂಗಿ ಆಲೋಚನೆಯನ್ನು ಕೈಬಿಟ್ಟಿದ್ದರು. ಅಂದಿನಿಂದ ಇಬ್ಬರ ನಡುವೆ ಯಾವುದೇ ಸಮಸ್ಯೆ ಬಂದಿರಲಿಲ್ಲ. ಸುಮಾರು 8 ವರ್ಷಗಳ ಕಾಲ ಜತೆಗಿದ್ದ ಬಳಿಕ ಇನ್ನು ಕೆಲವೇ ವಾರಗಳಲ್ಲಿ ಮದುವೆಯಾಗಲು ಇಬ್ಬರು ಸಕಲ ತಯಾರಿ ಮಾಡಿಕೊಂಡಿದ್ದಾರೆ.

  ಆದರೆ, ವಧುವಿನ ಭಾವಿ ಪತಿ ಇತ್ತೀಚೆಗಷ್ಟೇ ತಮ್ಮ ಫ್ರೆಂಡ್ಸ್​ ಗ್ರೂಪ್​ನಲ್ಲಿ ಚಾಟ್​ ಮಾಡುವಾಗ ವರ್ಷದ ಹಿಂದಷ್ಟೇ ಪುರುಷನ ಜತೆ ಸಲಿಂಗ ಕಾಮದಲ್ಲಿ ತೊಡಗಿ ಮೋಸ ಮಾಡಿದ್ದನ್ನು ಬಹಿರಂಗಪಡಿಸಿದನು. ಪಾರ್ಟಿ ಒಂದರಲ್ಲಿ ಆಲ್ಕೋಹಾಲ್​ ಸೇವಿಸಿ, ವ್ಯಕ್ತಿಯೊಬ್ಬನ ಜತೆ ಸೆಕ್ಸ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದನ್ನು ಕೇಳಿ ನನ್ನ ಹೃದಯ ಬಿರಿಯಿತು ಎಂದು ವಧು ಹೇಳಿದ್ದಾಳೆ.

  ಸದ್ಯ ವಧು, ಭಾವಿ ಪತಿಯಿಂದ ಕಾಲಾವಕಾಶ ಕೇಳಿ ಅಂತರ ಕಾಯ್ದುಕೊಂಡಿದ್ದು, ಮದುವೆ ಮುಂದುವರಿಸಬೇಕಾ? ಬೇಡ್ವಾ? ಎಂಬ ಚಿಂತೆಯಲ್ಲಿ ಮುಳುಗಿದ್ದಾಳೆ. ನಾನು ಯಾರೊಂದಿಗೂ ಈ ವಿಚಾರವನ್ನು ಹೇಳಿಲ್ಲ, ನನ್ನಲ್ಲಿಯೇ ತುಂಬಾ ನೋವು ಅನುಭವಿಸುತ್ತಿದ್ದೇನೆ ಎಂದು ವಧು ಹೇಳಿದ್ದಾಳೆ. ಆದರೆ, ಈಗಾಗಲೇ ಮದುವೆ ಸಕಲ ತಯಾರಿ ಮಾಡಿಕೊಂಡಿದ್ದು, ಇಬ್ಬರ ಸಂಬಂಧ ಭವಿಷ್ಯದಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ.

  ವಧುವಿನ ವ್ಯಥೆ ಕೇಳಿ ಅನೇಕರು ತಮ್ಮದೇ ರೀತಿಯಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. ನಂಬಿಕೆ ಈಗಲೇ ಮುರಿದುಬಿದ್ದಿದೆ ಮತ್ತು ತಕ್ಷಣವೇ ಮದುವೆ ರದ್ದು ಮಾಡಿ. ಆತ ನಿಮ್ಮನ್ನು ಸುರಕ್ಷಿತವಾಗಿ ಇಡಲಾರ ಎಂದು ನೆಟ್ಟಿಗರು ವಧುವಿಗೆ ಸಲಹೆ ನೀಡುತ್ತಿದ್ದಾರೆ. (ಏಜೆನ್ಸೀಸ್​)

  ನಾನೇ ನಿಜವಾದ ಬಿಗ್​ಬಾಸ್​ ವಿನ್ನರ್​ ಅಂದ್ರು ಸಂಗೀತಾ ಶೃಂಗೇರಿ!

  ಭಾರತದ ಫುಟ್‌ಬಾಲ್‌ ಲೆಜೆಂಡ್​ ಒಲಿಂಪಿಯನ್ ಎಂ ಕೆಂಪಯ್ಯರ ಜೀವನ ಚರಿತ್ರೆ ಬಿಡುಗಡೆ

  5 ಅಲ್ಲ, 500 ಹುಡುಗಿಯರು… ಸಾನಿಯಾ ವಿಚ್ಛೇದನದ ನಂತರ ವೈರಲ್ ಆದ ಶೋಯೆಬ್ ಮಲಿಕ್ ವಿಡಿಯೋ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts