ವ್ಯಾಪಾರ ವೃದ್ಧಿಯಲ್ಲಿ ಬಣಜಿಗರ ಕೊಡುಗೆ ದೊಡ್ಡದು; ಬಸವರಾಜ ಬೊಮ್ಮಾಯಿ

blank

ಹಾವೇರಿ: ಹಾವೇರಿಯಲ್ಲಿ ವ್ಯಾಪಾರ, ವಹಿವಾಟು ಹೆಚ್ಚಾಗಲು ಬಣಜಿಗ ಸಮಾಜದ ಕೊಡುಗೆ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಹಾವೇರಿ ಜಿಲ್ಲಾ ಬಣಜಿಗರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ಶಿಗ್ಗಾಂವಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ಇಲ್ಲದಿದ್ದರೆ ಅಖಂಡ ಕರ್ನಾಟಕ ಆಗುತ್ತಿರಲಿಲ್ಲ. ಅವರು ಆಯ್ಕೆಯಾದ ಕ್ಷೇತ್ರದಿಂದ ಜನರು ನನ್ನನ್ನು ಆಯ್ಕೆ ಮಾಡಿ ಕಳುಹಿಸಿರುವುದು ನನ್ನ ಪುಣ್ಯ ಎಂದರು.
ಬಣಜಿಗ ಸಮಾಜ ರಾಜಕೀಯವಾಗಿ ಜಾಗೃತವಾಗಿರುವ ಸಮಾಜ. ತಾವು ವ್ಯಾಪಾರ ಮಾಡುವುದರಿಂದ ತಮಗೆ ವ್ಯಾಪಾರಾಸ್ಥರು, ಗ್ರಾಹಕರು, ಏಜೆಂಟರು, ಎಲ್ಲರೂ ಬರುತ್ತಾರೆ. ನಿಮಗೆ ಹೆಚ್ಚಿನ ರಾಜಕೀಯ ಜ್ಞಾನ ಇರುತ್ತದೆ ಎಂದರು.
ಬಣಜಿಗ ಸಮಾಜದೊಂದಿಗೆ ಅವಿನಾಭಾವ ಸಂಬಂಧ ಇದ್ದು, ನಮ್ಮ ತಂದೆಯ ಎಲ್ಲ ವ್ಯವಹಾರಗಳನ್ನು ಎಸ್.ಐ.ಶೆಟ್ಟರ್ ಅವರು ನೋಡಿಕೊಳ್ಳುತ್ತಿದ್ದರು. ಮಾಜಿ ಸಚಿವ ದಿವಂಗತ ಸಿ.ಎಂ.ಉದಾಸಿಯವರು ನನಗೆ ರಾಜಕೀಯ ಪಾಠ ಕಲಿಸಿದ್ದಾರೆ. ನಾನು ಶಿಗ್ಗಾಂವಿಗೆ ಬರುವ ಮುಂಚೆ ರಾಜಶೇಖರ ಸಿಂಧೂರಿಯವರು ಕ್ಷೇತ್ರದ ತ್ಯಾಗ ಮಾಡಿದ್ದರಿಂದ ನನಗೆ ಅವಕಾಶ ದೊರೆಯುವಂತಾಯಿತು. ಲೋಕಸಭೆ ಚುನಾವಣೆಯಲ್ಲಿ ಶಿವಕುಮಾರ ಉದಾಸಿಗೆ ಹೇಳಿದೆ. ನೀವೇ ಸ್ಪರ್ಧೆ ಮಾಡಿ ಎಂದು, ಅವರು ವೈಯಕ್ತಿಕ ಕಾರಣದಿಂದ ಕ್ಷೇತ್ರ ತ್ಯಾಗ ಮಾಡಿ ನನಗೆ ಬಿಟ್ಟು ಕೊಟ್ಟಿದ್ದಾರೆ ಎಂದರು.
ನನಗೆ ಈ ಸಮಾಜದ ಜತೆಗೆ ಶಾಶ್ವತ ಸಂಬಂಧ ಇದೆ. ನನ್ನ ಜೀವಮಾನದ ಉಸಿರು ಇರುವವರೆಗೂ ಬಣಜಿಗ ಸಮಾಜದೊಂದಿಗೆ ಇರುತ್ತೇನೆ. ಈ ಚುನಾವಣೆ ದೇಶದ ಚುನಾವಣೆಯಾಗಿದ್ದು, ದೇಶಕ್ಕೊಸ್ಕರ, ದೇಶದ ಅಭಿವೃದ್ಧಿಗಾಗಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಹಾವೇರಿ ಜಿಲ್ಲಾ ಬಣಜಿಗ ಸಂಘದ ಅಧ್ಯಕ್ಷ ಬಸಣ್ಣ ಹೆಸರೂರು, ಸಿದ್ದಲಿಂಗಪ್ಪ ಮಹಾರಾಜಪೇಟಿ, ಬಾಬಣ್ಣ ಹಂಚಿನ, ಬಾಬಣ್ಣ ಐರಣಿ, ವೀರೇಶ ಸಬರದ, ಕಿರಣ ಕೊಳ್ಳಿ, ನಿರಂಜನ ಹೆರೂರ, ಮತ್ತಿತರರು ಉಪಸ್ಥಿತರಿದ್ದರು.
ಸಮಗ್ರ ನೀರಾವರಿ, ಕೈಗಾರಿಕೆ ಸ್ಥಾಪನೆ ಗುರಿ
ತುಂಗಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ್ದೇನೆ. ಈ ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಆಗಬೇಕಿದೆ. ಅದು ನನ್ನ ಮೊದಲ ಆದ್ಯತೆ. ಅದಲ್ಲದೇ, ಮುಂಬೈ, ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಅನ್ನು ಹಾವೇರಿಯಲ್ಲಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ 400 ಎಕರೆ ಜಮೀನು ಮೀಸಲಿಟ್ಟಿದ್ದೇವೆ. ಕನಿಷ್ಠ ಒಂದು ಸಾವಿರ ಎಕರೆ ಜಮೀನು ಪಡೆದು, ಇಂಡಸ್ಟ್ರಿಯಲ್ ಕಾರಿಡಾರ್ ಮಾಡಲಾಗುವುದು. ಬಣಜಿಗ ಸಮಾಜದ ಯುವಕರು ಉದ್ಯಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗುವುದು. ಗದಗನಲ್ಲಿಯೂ ಆಹಾರ ಸಂಸ್ಕರಣಾ ಉದ್ಯಮ ತೆರೆಯಲು ಸಾಕಷ್ಟು ಅವಕಾಶ ಇದೆ ಎಂದು ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಸಿ.ಎಂ.ಉದಾಸಿ ಪ್ರತಿಮೆ
ಹಾವೇರಿ ಪ್ರತ್ಯೇಕ ಜಿಲ್ಲೆಯಾಗಲು ಸಿ.ಎಂ.ಉದಾಸಿ ಅವರೇ ಕಾರಣ. ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಿ.ಎಂ.ಉದಾಸಿ ಪ್ರತಿಮೆ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು. ಜೆ.ಎಚ್.ಪಟೇಲರು ಸಿಎಂ ಆಗಿದ್ದಾಗ ನಾನು ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದೆ. ಅದೇ ಸಮಯದಲ್ಲಿ ಹಾವೇರಿ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪ ಬಂದಿತ್ತು ಎಂದು ನೆನೆದರು.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…