More

    ನಾನೇ ನಿಜವಾದ ಬಿಗ್​ಬಾಸ್​ ವಿನ್ನರ್​ ಅಂದ್ರು ಸಂಗೀತಾ ಶೃಂಗೇರಿ!

    ಬೆಂಗಳೂರು: ಕನ್ನಡದ ಬಿಗ್​ಬಾಸ್​ ಸೀಸನ್​​ 10 ಮುಕ್ತಾಯಗೊಂಡಿದೆ. ಬರೋಬ್ಬರಿ 3 ತಿಂಗಳ ಬಳಿಕ ಮನೆಗೆ ವಾಪಸ್​ ಬಂದಿರುವ ಸ್ಪರ್ಧಿಗಳೆಲ್ಲ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರೆ. ಇತ್ತ ಸಾರ್ವಜನಿಕ ವಲಯದಲ್ಲಿ ಅವರು ಗೆಲ್ಲಬೇಕಿತ್ತು, ಇವರು ಗೆಲ್ಲಬೇಕಿತ್ತು ಎಂಬ ಚರ್ಚೆಯು ಸಹ ಜೋರಾಗಿ ನಡೆಯುತ್ತಿದೆ. ಕೆಲವರು ಸಂಗೀತಾ ಶೃಂಗೇರಿ ಗೆಲ್ಲುತ್ತಾರೆಂದು ಭರವಸೆ ಇಟ್ಟುಕೊಂಡಿದ್ದರು. ಸ್ವತಃ ಸಂಗೀತಾಗೂ ನಂಬಿಕೆ ಇತ್ತು. ಆದರೆ, ಆ ನಂಬಿಕೆ ಮತ್ತು ಭರವಸೆ ಹುಸಿಯಾಗಿದ್ದು, ಸಂಗೀತಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

    ಕಾರ್ಯಕ್ರಮ ಮುಗಿಸಿ ಮನೆಗೆ ಮರಳಿರುವ ಸಂಗೀತಾ, ತಮ್ಮ ಪ್ರೀತಿಸುವ ಜನತೆಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿ ಪೋಸ್ಟ್​ ಮಾಡಿರುವ ಸಂಗೀತಾ, ನನ್ನ ಪ್ರೀತಿಯ ಅಭಿಮಾನಿಗಳಿಗೆ, ಪ್ರೋತ್ಸಾಹಕರಿಗೆ ಹಾಗೂ ಕನ್ನಡ ಜನತೆಗೆ, ನಿಮ್ಮ ಸಂಗೀತ ಮಾಡುವ ನಮಸ್ಕಾರಗಳು ಎಂದು ಬರವಣಿಗೆ ಆರಂಭಿಸಿದ್ದಾರೆ.

    ಎಲ್ಲಾ ಹೇಗಿದ್ದೀರಾ? ನಮ್ಮ ಬಿಗ್​​ಬಾಸ್ ಹೇಗಿತ್ತು? ನನ್ನ ಬಿಗ್​ಬಾಸ್ ಜರ್ನಿ ಅಂತೂ ನಿಮಗೆ ಗೊತ್ತೇ ಇದೆ. ಆದರೆ, ನೀವು ಇಲ್ಲಿ ನನಗೆ ಕೊಟ್ಟ ಪ್ರೀತಿ, ಸಹಕಾರ ಈಗ ನನಗೆ ಗೊತ್ತಾಗುತ್ತದೆ. ಆದರೆ, ನಿಮಗೆ ಹೇಗೆ ನನ್ನ ಧನ್ಯವಾದ ಅರ್ಪಿಸಲಿ ಎಂಬುದು ತಿಳಿಯದಾಗಿದೆ. ನನ್ನ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾನು ಎಂದಿಗೂ ಆಭಾರಿ ಎಂದಿದ್ದಾರೆ.

    ನನಗೆ ಬಿಗ್ ಬಾಸ್ ಟ್ರೋಫಿ ಸಿಗದಿರಬಹುದು. ಆದರೆ, ನಿಮ್ಮ ಪ್ರೀತಿ ನನಗೆ ನಿಜವಾದ ಗೆಲುವು. ನಿಮ್ಮಿಂದಾಗಿ ನಾನು ನಿಜವಾದ ವಿನ್ನರ್​ ಎಂದು ಭಾಸವಾಗುತ್ತಿದೆ. ಇದಕ್ಕೆ ಇರಬೇಕು ನಮ್ಮ ಅಣ್ಣಾವ್ರು ಅಭಿಮಾನಿಗಳನ್ನು ದೇವರಂತೆ ಕಂಡಿದ್ದು, ನಿಮ್ಮ ಪ್ರೀತಿಯ ಸಂಗೀತ ಶೃಂಗೇರಿ ಎಂದು ಮಾತು ಮುಗಿಸಿದ್ದಾರೆ.

    Sangeetha

    ಗ್ರ್ಯಾಂಡ್​ ಫಿನಾಲೆ ವಾರಕ್ಕೆ ತುಕಾಲಿ ಸಂತೋಷ್​, ವರ್ತೂರ್​ ಸಂತೋಷ್​, ಡ್ರೋನ್​ ಪ್ರತಾಪ್​, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಕಾರ್ತಿಕ್​ ಮಹೇಶ್​ ಎಂಟ್ರಿ ಕೊಟ್ಟಿದ್ದರು. ಶನಿವಾರದ ಫಿನಾಲೆ ಎಪಿಸೋಡ್​ನಲ್ಲಿ ತುಕಾಲಿ ಸಂತೋಷ್​ ಮನೆಯಿಂದ ಹೊರ ಬರುವ ಮೂಲಕ 5ನೇ ರನ್ನರ್​ ಅಪ್​ ಎನಿಸಿಕೊಂಡರು. ಭಾನುವಾರದ ಅಂತಿಮ ಫಿನಾಲೆ ಎಪಿಸೋಡ್​ನಲ್ಲಿ ಐವರು ಸ್ಪರ್ಧಿಗಳು ಉಳಿದುಕೊಂಡಿದ್ದರು. ಹಳ್ಳಿಕಾರ್​ ಒಡೆಯ ವರ್ತೂರ್​ ಸಂತೋಷ್​ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿ ಎನಿಸಿಕೊಂಡರು. ಈ ಮೂಲಕ 4ನೇ ರನ್ನರ್​ ಅಪ್​ ಆದರು. ಇದಾದ ಬಳಿಕ ವಿನಯ್​ ಗೌಡ ದೊಡ್ಮನೆಯಿಂದ ಹೊರಗಡೆ ಬರುವ ಮೂಲಕ 3ನೇ ರನ್ನರ್​ ಅಪ್​ ಆದರೆ, ಸಂಗೀತಾ ಶೃಂಗೇರಿ ಕೂಡ ಮನೆಯಿಂದ ಎಲಿಮಿನೇಟ್​ ಆಗಿ 2ನೇ ರನ್ನರ್​ ಅಪ್​ ಎನಿಸಿಕೊಂಡರು.

    ಅಂತಿಮವಾಗಿ ಮನೆಯಲ್ಲಿ ಕಾರ್ತಿಕ್​ ಮತ್ತು ಪ್ರತಾಪ್​ ಮಾತ್ರ ಉಳಿದುಕೊಂಡರು. ಎಂದಿನಂತೆ ಮನೆಯ ಒಳಗಡೆ ಹೋಗಿ ಇಬ್ಬರನ್ನು ಹೊರ ಕರೆತಂದ ಕಿಚ್ಚ, ಮಾಮೂಲಿಯಂತೆ ಅಧಿಕೃತ ಘೋಷಣೆಗೂ ಮುನ್ನ ಕೆಲ ಕಾಲ ಪ್ರೇಕ್ಷಕರ ಎದೆಬಡಿತವನ್ನು ಹೆಚ್ಚಿಸಿದರು. ಅಂತಿಮವಾಗಿ ಕಾರ್ತಿಕ್​ ಮಹೇಶ್​ ಕೈಯನ್ನು ಮೇಲೆತ್ತುವ ಮೂಲಕ ಅಧಿಕೃತ ಘೋಷಣೆ ಮಾಡಿದರು. ವಿನ್ನರ್​ ಕಾರ್ತಿಕ್​ಗೆ 50 ಲಕ್ಷ ನಗದು ಮತ್ತು ಒಂದು ಕಾರು ಬಹುಮಾನವಾಗಿ ಸಿಕ್ಕಿದೆ. ಪ್ರಥಮ ರನ್ನರ್​ ಅಪ್​ ಡ್ರೋನ್​ ಪ್ರತಾಪ್​ ಅವರಿಗೆ 10 ಲಕ್ಷ ರೂ. ನಗದು ಮತ್ತು ಒಂದು ಬೈಕ್​ ಉಡುಗೊರೆಯಾಗಿ ಲಭಿಸಿದೆ.

    ಕಾರ್ತಿಕ್​ ಮಹೇಶ್​ಗೆ 2,97,39, 904 ಮತಗಳು ಬಂದಿದ್ದೇನೋ ನಿಜ ಆದ್ರೆ ಗೆಲುವಿಗೆ ಅಸಲಿ ಕಾರಣ ಇಲ್ಲಿದೆ….

    ತಲೆಮರೆಸಿಕೊಂಡಿರುವ ಆರೋಪದ ನಡುವೆಯೇ ಇಡಿಗೆ ಪತ್ರ ಬರೆದ ಹೇಮಂತ್ ಸೊರೆನ್, ಸಿಎಂ ನಿವಾಸದ ಬಳಿ ಸೆಕ್ಷನ್ 144 ಜಾರಿ

    ಅಬ್ಬಬ್ಬಾ ಭರ್ಜರಿ ಕಲೆಕ್ಷನ್​ನತ್ತ ಹೃತಿಕ್​ ಚಿತ್ರ! ಐದನೇ ದಿನಕ್ಕೆ ‘ಫೈಟರ್’ ಒಟ್ಟು ಗಳಿಸಿದ್ದೆಷ್ಟು? ಹೀಗಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts