ಅಬ್ಬಬ್ಬಾ ಭರ್ಜರಿ ಕಲೆಕ್ಷನ್​ನತ್ತ ಹೃತಿಕ್​ ಚಿತ್ರ! ಐದನೇ ದಿನಕ್ಕೆ 'ಫೈಟರ್' ಒಟ್ಟು ಗಳಿಸಿದ್ದೆಷ್ಟು? ಹೀಗಿದೆ ವಿವರ

ವಿಜಯವಾಣಿ - 2024-01-30T125322.360
Published on

​​ಹೊಸದಿಲ್ಲಿ: ಬಾಲಿವುಡ್​ನ ಹ್ಯಾಂಡ್​ಸಮ್​ ಹೀರೋ ಹೃತಿಕ್ ರೋಷನ್​ ಮತ್ತು ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಫೈಟರ್​ ಬಿಡುಗಡೆಗೊಂಡು ಇಂದಿಗೆ ಐದು ದಿನಗಳು ಕಳೆದಿವೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಹೃತಿಕ್ ಸಿನಿಮಾ, ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇಲ್ಲಿಯವೆರೆಗೆ ಕಂಡ ಒಟ್ಟು ಗಳಿಕೆಯೆಷ್ಟು? ಅದರ ಕಂಪ್ಲೀಟ್​ ಡಿಟೇಲ್ಸ್ ಹೀಗಿದೆ.

ಗಣರಾಜ್ಯೋತ್ಸವ ದಿನದಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಫೈಟರ್​ ಚಿತ್ರಕ್ಕೆ ಉತ್ತಮ ಕಿಕ್​ ಸ್ಟಾರ್ಟ್​ ದೊರೆತಿದ್ದು, ಕೇವಲ ಐದು ದಿನಕ್ಕೆ 200 ಕೋಟಿ ರೂ. ಕ್ಲಬ್​ ಸೇರಿದೆ. ಬಾಕ್ಸ್ ಆಫೀಸ್​ನಲ್ಲಿ ಮಿಂಚಿನ ಓಟವನ್ನು ಪ್ರದರ್ಶಿಸುತ್ತಿರುವ ಹೃತಿಕ್​ ಚಿತ್ರವು ಇದೀಗ ಜಾಗತಿಕವಾಗಿ 225 ಕೋಟಿ ರೂ. ಕಲೆಕ್ಷನ್​ ಕಂಡಿದೆ. ಈ ಮೂಲಕ ಶೀಘ್ರವೇ ಹೊಸ ಮೈಲಿಗಲ್ಲು ತಲುಪಲು ಮುಂಚೂಣಿಯಲ್ಲಿದೆ.

ಜಾಗತಿಕವಾಗಿ ಚಿತ್ರವು ಮೊದಲ ದಿನದಿಂದ ಇಲ್ಲಿಯವರೆಗೆ ಗಳಿಸಿದ ಒಟ್ಟು ಗಳಿಕೆಯ ವಿವರ ಹೀಗಿದೆ:

ದಿನ 1 - 36.04 ಕೋಟಿ ರೂ.

ದಿನ 2 - 64.57 ಕೋಟಿ ರೂ.

ದಿನ 3 - 56.19 ಕೋಟಿ ರೂ.

ದಿನ 4 - 52.74 ಕೋಟಿ ರೂ.

ದಿನ 5 - 16.33 ಕೋಟಿ ರೂ.

ಒಟ್ಟು - 225.87 ಕೋಟಿ ರೂ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net