ನಾನು ಆರೋಗ್ಯವಾಗಿದ್ದೇನೆ ವದಂತಿಗಳಿಗೆ ಕಿವಿಗೊಡಬೇಡಿ: ತಮಿಳುನಾಡು ಸಿಎಂ ಸ್ಟಾಲಿನ್

Mk Stalin
Published on

ಚೆನ್ನೈ: ತಮ್ಮ ಆರೋಗ್ಯ ಸ್ಥಿತಿ ಕುರಿತು ಎದ್ದಿರುವ ವದಂತಿಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ನಾನು ಆರಾಮಾಗಿದ್ಧೇನೆ. ಜನರು ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ತಮಿಳುನಾಡು ಜನತೆಗಾಗಿ ದುಡಿಯಲು ನಾನು ಸದಾ ಸಿದ್ಧ ಎಂದು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸ್ಟಾಲಿನ್​, ನನ್ನಿಂದ ಏನು ತಪ್ಪಾಗಿದೆ ಎಂದು ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಜನಪ್ರಿಯ ಪತ್ರಿಕೆ ಒಂದರಲ್ಲಿ ನನ್ನ ಆರೋಗ್ಯ ಹದಗೆಟ್ಟಿದ್ದು, ನಾನು ಸಂತೋಷದಿಂದ ಕಾಲ ಕಳೆಯುತ್ತಿಲ್ಲ ಎಂದೆಲ್ಲಾ ಬರೆದಿದ್ದಾರೆ. ಆದರೆ, ಆ ರೀತಿ ಬರೆಯಲು ನನ್ನಿಂದ ಏನು ತಪ್ಪಾಗಿದೆ ಎಂದು ತಿಳಿಯಲಿಲ್ಲ. ನಾನು ಎರಡು ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡ ಮಾತ್ರಕ್ಕೆ ನನ್ನ ಆರೋಗ್ಯ ಹದಗೆಟ್ಟಿದೆ ಎಂದು ಭಾವಿಸುವ ಅವಶ್ಯಕತೆಯಿಲ್ಲ. ತಮಿಳುನಾಡಿನ ಜನರು ಸಂತೋಷದಿಂದಿರುವಾಗ ನನಗೆ ಇನ್ನೇನು ಬೇಕು.

ಸಂಕ್ರಾಂತಿ ವೀಶೇಷವಾಗಿ ರಾಜ್ಯ ಸರ್ಕಾರದಿಂದ ಜನತೆಗೆ ವಿಶೇಷ ಉಡುಗೊರೆಯನ್ನು ನೀಡಲಾಗಿದೆ. ನಾನು ಸಂಕ್ರಾಂತಿ ಆಚರಿಸಲು ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ಮಹಿಳೆಯೊಬ್ಬರು ಹೇಳುತ್ತಿರುವ ವಿಡಿಯೋ ನೋಡಿ ನನಗೆ ತುಂಬಾ ಖುಷಿಯಾಯಿತು. ಅದೇ ನನ್ನ ಪಾಲಿಗೆ ಔಷಧಿಯಾಗಿದೆ. ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಇಂತಹ ಸುದ್ದಿಗಳು ನನ್ನನ್ನು ಬಾದಿಸುವುದಿಲ್ಲ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net