More

    ನಟ ದರ್ಶನ್​ರನ್ನು ಟಾರ್ಗೆಟ್​ ಮಾಡಿ ಮಸಿ ಬಳಿಯುವ ಯತ್ನ ನಡೀತಿದೆ: ರಾಕ್​ಲೈನ್​ ವೆಂಕಟೇಶ್ ಆರೋಪ

    ಬೆಂಗಳೂರು: ಟಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ, ತರುಣ್​ ಸುಧೀರ್​ ನಿರ್ದೇಶನದ ಬಹುನಿರೀಕ್ಷಿತ ಕಾಟೇರ ಚಿತ್ರವು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕ್ಷಕರಿಂದ ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡದುಕೊಳ್ಳುವಲ್ಲಿ ಚಿತ್ರ ಮುಂಚೂಣಿಯಲ್ಲಿದೆ.

    ಶತಕೋಟಿ ಕ್ಲಬ್​ ಸೇರಿದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆನ್ನಲ್ಲೇ ಚಿತ್ರತಂಡ ಸಕ್ಸಸ್​ ಪಾರ್ಟಿಯನ್ನು ಆಯೋಜಿಸಿ ಸಂಭ್ರಮಿಸಿತ್ತು. ಇದರಲ್ಲಿ ಸ್ಯಾಂಡಲ್​ವುಡ್​ನ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ನಿಯಮ ಉಲ್ಲಂಘಿಸಿ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್‌ನ ಹಲವು ನಟ ನಟಿಯರು ಪಾರ್ಟಿ ಮಾಡಿದ್ದು, ಜೆಟ್​ಲ್ಯಾಗ್​ ರೆಸ್ಟೋಬಾರ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಟ-ನಟಿಯರು ಇಂದು ವಿಚಾರಣೆಗೆ ಹಾಜರಾಗಿದ್ಧಾರೆ.

    ವಿಚಾರಣೆ ಬಳಿಕ ಮಾತನಾಡಿದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ತಡರಾತ್ರಿ ಎಷ್ಟೋ ಬಾರ್​ಗಳು ಓಪನ್ ಇರುತ್ತವೆ. ಆದರೆ, ಈವರೆಗೂ ಯಾವುದೇ ಗ್ರಾಹಕನಿಗೆ ಈ ರೀತಿ ನೋಟಿಸ್ ಕೊಟ್ಟಿಲ್ಲ. ಸಾಮಾನ್ಯ ಜನರಿಗೂ, ಸೆಲೆಬ್ರಿಟಿಗಳಿಗೂ ಒಂದೇ ಕಾನೂನು. ನಮಗೆ ಅವತ್ತು ಯಾವ ಪೊಲೀಸರೂ ಕೇಳಿಲ್ಲ. ಯಾರಿಗೂ ತೊಂದರೆ ಆಗುವಂತೆ ನಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.

    kaatera team

    ಇದನ್ನೂ ಓದಿ: ತುಕಾಲಿಗೆ ಕಳಪೆ ಪಟ್ಟ ನೀಡಿದ ದೊಡ್ಮನೆ ಸದಸ್ಯರು; ರೊಚ್ಚಿಗೆದ್ರಾ ವರ್ತೂರ್ ಸಂತೋಷ್

    ಕಾಟೇರ ಸಿನಿಮಾ ಯಶಸ್ಸು ಕಂಡಿರುವುದಕ್ಕೆ ಈ ರೀತಿ ದರ್ಶನ್ ಅವರನ್ನು ಟಾರ್ಗೆಟ್ ಮಾಡಿ ಮಸಿ ಬಳಿಯುವ ಯತ್ನ ನಡೆದಿದೆ. ಪೊಲೀಸ್ ಕೇಸ್ ಹಿಂದೆ ಷಡ್ಯಂತ್ರ ಇದೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ. ದರ್ಶನ್​ರನ್ನ ಯಾಕೆ ಟಾರ್ಗೆಟ್ ಮಾಡಬೇಕು. ನಾನಲ್ಲ ಇಡೀ ಚಿತ್ರರಂಗವೇ ಇದನ್ನ ಖಂಡಿಸುತ್ತೆ. ನಾವು ಫೈಟ್ ಮಾಡೋ ಜನ ಅಲ್ಲ ಕಾನೂನು ಇದೆ. ನಮ್ಮ ಮೇಲೆ ಕ್ರಮ ಆದರೇ ಕಾನೂನು ಹೋರಾಟ ಮಾಡುತ್ತೇವೆ ಎಂದು ರಾಕ್​ಲೈನ್​ ವೆಂಕಟೇಶ್​ ತಿಳಿಸಿದ್ದಾರೆ.

    ಡಾಲಿ ಧನಂಜಯ್ಯ,  ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತಾ ನಿರ್ದೇಶಕ ಹರಿಕೃಷ್ಣ ಹಾಗು ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts