ಮಂತ್ರಿ ಸ್ಥಾನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ: ಪಟ್ಟಣ

PATTAN (1)
Published on

ಬೆಂಗಳೂರು: ಮಂತ್ರಿ ಸ್ಥಾನಕ್ಕೆ ನಾನು ಚಾತಕ ಪಕ್ಷಿಯಂತರ ಕಾಯುತ್ತಿದ್ದೇನೆ. ಪುನರ್ ರಚನೆಯಾದರೆ ಸಚಿವ ಸ್ಥಾನ ಸಿಗುವ ಬಲವಾದ ವಿಶ್ವಾಸವಿದೆ ಎಂದು ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಆಗಲಿ, ಆಗದೇ ಇರಲಿ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಟೈಮ್ ಬಂದಾಗ ಮಂತ್ರಿ ಆಗುತ್ತೇನೆ. ನಮ್ಮ ಹಣೆಬರಹ ನೋಡಿಕೊಂಡು ಕಾಯುತ್ತಿದ್ದೇವೆ. ಚಾತಕ ಪಕ್ಷ ತರ ಕಾಯುತ್ತಿದ್ದೇನೆ. ನೂರಕ್ಕೆ ನೂರು ಸಚಿವ ಸ್ಥಾನ ಸಿಗುವ ಭರವಸೆ ಇದೆ. 135 ಮಂದಿಗೂ ಸಚಿವರಾಗಲು ಆಸೆ ಇದೆ. ನಾನು ಹಿರಿಯನಾಗಿರುವುದರಿಂದ ದೊಡ್ಡ ಆಸೆ ಇದೆ ಎಂದರು.

ಕೆಪಿಸಿಸಿ ಅಧ್ಯಕ್ಷರು ಪಕ್ಷ, ಸರ್ಕಾರದ ವಿಷಯ ಮಾತನಾಡಬೇಡಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಈ ವಿಷಯ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net